ETV Bharat / city

ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಕೈಮಗ್ಗ ಮೇಳ: ನೇಕಾರರಿಗೆ ಸರ್ಕಾರದ ಬೆಂಬಲ

ಕರ್ನಾಟಕ ಸರ್ಕಾರ ಕೋವಿಡ್ ನಂತರ ರಾಜ್ಯದಲ್ಲಿ ಪ್ರಪ್ರಥಮವಾಗಿ ಆಯೋಜನೆ ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇದಾಗಿದೆ.

National hand loom day
National hand loom day
author img

By

Published : Aug 4, 2022, 6:35 PM IST

ಬೆಂಗಳೂರು: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ನಾಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಪ್ರಪ್ರಥಮ ಬಾರಿಗೆ ಕೈಮಗ್ಗ ಮೇಳ ಆಯೋಜನೆ ಮಾಡಿದೆ. ಶುಕ್ರವಾರದಿಂದ ಭಾನುವಾರದವರೆಗೆ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜನೆಗೊಂಡಿದೆ.

ಮಹಾಮಾರಿ ಕೋವಿಡ್​ನಿಂದ ನೇಕಾರರ ಜೀವನ‌ ತತ್ತರಿಸಿ ಹೋಗಿರುವ ಕಾರಣ ನೇಕಾರರನ್ನು ಬೆಂಬಲಿಸಿ‌ ರಾಜ್ಯ ಕೈಮಗ್ಗ-ಜವಳಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈಗ ಸರ್ಕಾರ ಕೋವಿಡ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿದೆ. ನಾಳೆ ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸಹ ಆಯೋಜನೆಗೊಂಡಿದ್ದು, ಆಗಸ್ಟ್ .7ರಂದು ಬೆಳಗ್ಗೆ 11.30ಕ್ಕೆ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ ಉದ್ಘಾಟಿಸುವರು.

ಇದನ್ನೂ ಓದಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಜವಳಿ ಉದ್ಯಮ ತತ್ತರ; ಗ್ರಾಹಕರನ್ನು ಸೆಳೆಯಲು ನಾನಾ ಕಸರತ್ತು !

ಈ ಮೇಳದಲ್ಲಿ 26 ಸ್ಟಾಲ್​​ಗಳಿರಲಿದ್ದು, ಕೈಮಗ್ಗದಲ್ಲಿ ತಯಾರು ಮಾಡುವ ಕರ್ನಾಟಕದ ವಿವಿಧ ಜಿಲ್ಲೆಗಳ ವಿಶಿಷ್ಟ ಕೈಮಗ್ಗ ಉತ್ಪನ್ನಗಳಾದ ರೇಷ್ಮೆ ಸೀರೆಗಳು, ಹತ್ತಿಯ ವಸ್ತ್ರಗಳು, ರಗ್ಗು, ಕಂಬಳಿ, ಬೆಡ್ ಶೀಟ್, ಕುರ್ತಾ ಟಾಪ್, ಶರ್ಟ್, ಲುಂಗಿ ಸೇರಿದಂತೆ ಹಲವು ಬಟ್ಟೆಗಳು ಪ್ರದರ್ಶನದಲ್ಲಿರಲಿವೆ. ರಿಯಾಯಿತಿ ದರದಲ್ಲಿ ಈ ವಸ್ತುಗಳು ಗ್ರಾಹಕರಿಗೆ ಲಭ್ಯ. ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಸಂಜೆ 7.30ರವರೆಗೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.