ETV Bharat / city

ಮೈಸೂರು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ವ್ಯವಸ್ಥಿತ ಯತ್ನದ ಅನುಮಾನ ಇದೆ : ಎಸ್‌.ಆರ್‌.ಪಾಟೀಲ್‌ - ಎಸ್‌.ಆರ್‌.ಪಾಟೀಲ್‌

ಮೈಸೂರು ಅತ್ಯಾಚಾರ ಪ್ರಕರಣವನ್ನು ಹಲವರು ಸದಸ್ಯರು ವಿಧಾನ ಪರಿಷತ್‌ನಲ್ಲಿಂದು ಪ್ರಸ್ತಾಪಿಸಿದರು. ವಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ವೀಣಾ ಅಚ್ಚಯ್ಯ, ಆರ್‌.ಬಿ.ತಿಮ್ಮಾಪೂರ್‌, ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಕಾಂಗ್ರೆಸ್ ಸಚೇತಕ ಎಂ.ನಾರಾಯಣಸ್ವಾಮಿ ಮತ್ತಿತರ ಸದಸ್ಯರು ಮಾತನಾಡಿದರು. ಸುದೀರ್ಘ ಚರ್ಚೆಗೆ ತಾವು ನಾಳೆ ಉತ್ತರ ನೀಡುವುದಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು..

Mysore rape case discussion in Council Session
ಮೈಸೂರು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ವ್ಯವಸ್ಥಿತ ಯತ್ನದ ಅನುಮಾನ ಇದೆ: ಎಸ್‌.ಆರ್‌.ಪಾಟೀಲ್‌
author img

By

Published : Sep 22, 2021, 7:42 PM IST

ಬೆಂಗಳೂರು : ನಾಗರಿಕ ಸಮಾಜದಲ್ಲಿ ತಲೆ ತಗ್ಗಿಸುವ ರೀತಿಯಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ವ್ಯವಸ್ಥಿತ ಯತ್ನದ ಅನುಮಾನ ಇದೆ : ಎಸ್‌.ಆರ್‌.ಪಾಟೀಲ್‌

ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿ ಚರ್ಚೆಯಲ್ಲಿ ಮಾತನಾಡಿ, ಮೈಸೂರಿನ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿ ಜಾಗಿಂಗ್ ಮುಗಿಸಿ ರಿಂಗ್ ರಸ್ತೆ ಬಳಿ ಕೂತಿದ್ದ ಸಂದರ್ಭ ಆರು ಮಂದಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಯುವತಿಯನ್ನು ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಆದಾದ ನಂತರ ಯುವಕನ ತಂದೆಗೆ 3 ಲಕ್ಷ ರೂ. ಹಣ ತರಿಸುವಂತೆ ಯುವಕನ ಮೂಲಕ ಕರೆ ಮಾಡಿಸುತ್ತಾರೆ ಎಂದರು.

ಈ ಪ್ರದೇಶ ಜನವಸತಿಯಿಂದ ಕೂಡಿದ್ದಾಗಿದೆ. ಈ ಭಾಗಕ್ಕೆ ಗಸ್ತು ವ್ಯವಸ್ಥೆ ಇದೆ. ಒಟ್ಟು 60 ಪೊಲೀಸ್ ಸಿಬ್ಬಂದಿ ಹೊಂದಿದ ಆಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ನೀಡಲಾಗಿದೆ. ಇಲ್ಲಿ ಎರಡು ವಾಹನ ವ್ಯವಸ್ಥೆ ಸಹ ಇದೆ. ಅತ್ಯಾಚಾರ ಆಗಿರುವುದು ಸ್ಪಷ್ಟವಾಗಿದ್ದರೂ, ಆಸ್ಪತ್ರೆ ವೈದ್ಯರು ಹಲ್ಲೆ ಎಂದು ಮಾಹಿತಿ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಯುವಕ ಹೇಳಿಕೆ ನೀಡಿದ್ದಾರೆ. ಆದರೆ, ಯುವತಿ ಹೇಳಿಕೆ ನೀಡಿಲ್ಲ. ಪೊಲೀಸರು ಪ್ರಕರಣ ವಿಳಂಬವಾಗಿ ದಾಖಲಿಸಿದ್ದಾರೆ. ಒಟ್ಟಾರೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎನ್ನುವ ಆತಂಕ ಇದೆ ಎಂದರು.

ಪ್ರತಿಪಕ್ಷ ಒತ್ತಡ ಹಿನ್ನೆಲೆ ನಂತರ ಕೇಸು ದಾಖಲಿಸಲಾಗಿದೆ. ಒಟ್ಟಾರೆ ಒಂದು ಅತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ವ್ಯವಸ್ಥಿತ ಯತ್ನ ನಡೆದಿದೆ ಎನ್ನುವ ಅನುಮಾನ ಇದೆ. ಎಫ್ಐಆರ್ ದಾಖಲಾಗುವಲ್ಲೇ 15 ಗಂಟೆ ವಿಳಂಬವಾಗಿದೆ. ಎಫ್ಐಆರ್ ದಾಖಲು ವಿಳಂಬಕ್ಕೆ ಪೊಲೀಸ್ ಇಲಾಖೆ ವಿವರಣೆ ನೀಡಬೇಕು. ಅಪರಾಧಿಗಳು ತಪ್ಪಿಸಿಕೊಳ್ಳುವ ಅವಕಾಶ ಇದೆ. ಇಷ್ಟೊಂದು ವಿಳಂಬ ಏಕೆ? ಎಂದು ಕೇಳಿದರು.

'ಗೃಹ ಸಚಿವರು ಆ ಪದ ಬಳಕೆ ಮಾಡಿದ್ದೇಕೆ'?
ಸಿಎಂ ಬಸವರಾಜ್ ಬೊಮ್ಮಾಯಿ ದಿಲ್ಲಿಯಿಂದ ಹೇಳಿಕೆ ನೀಡಿದ್ದರು. ಸಂತ್ರಸ್ತೆ ಬಗ್ಗೆ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಹೇಳಿಕೆ ನೀಡಿದರು. ಇನ್ನು, ಗೃಹ ಸಚಿವರು ಸಂಜೆ 7ಗಂಟೆ ನಂತರ ತೆರಳಬಾರದಿತ್ತು ಎಂಬ ಹೇಳಿಕೆ ನೀಡಿದರು. ಪ್ರತಿ ಕ್ಷೇತ್ರದಲ್ಲೂ ಮಹಿಳೆ ಮುಂದಿದ್ದಾಳೆ. ಅಂತವರ ಬಗ್ಗೆ ಇಂತಹ ಹೇಳಿಕೆ ನೀಡಿದ್ದೇಕೆ?. ಇದರ ನಂತರ, ಕಾಂಗ್ರೆಸ್‌ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂದರು. ಇಂತಹ‌ ಪದ ಬಳಕೆ ಮಾಡಿದ್ದೇಕೆ ಎಂದು ಎಸ್‌ ಆರ್‌ ಪಾಟೀಲ್‌ ಪ್ರಶ್ನಿಸಿದರು.

ಸಾವಿರಾರು ಪ್ರವಾಸಿಗರು ಬರುವ ತಾಣದಲ್ಲಿ ಇಂತಹ ಘಟನೆ ನಡೆದ ಸ್ಥಳಕ್ಕೆ ಹೋಗಿಲ್ಲ, ಸಂತ್ರಸ್ತೆಯನ್ನು ಭೇಟಿಯಾಗಿ ಚರ್ಚಿಸಿಲ್ಲ. ಮೈಸೂರಿಗೆ ತೆರಳಿದರೂ, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸರಿಯಾದ ಕ್ರಮ ಅಲ್ಲ. ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಅನುಮಾನ ಮೂಡುತ್ತಿದೆ. ಇದರಿಂದ ಈ ವಿಚಾರದ ಸಮಗ್ರ ತನಿಖೆ ಆಗಬೇಕು. ಅತ್ಯಾಚಾರ ಪ್ರಕರಣ ವಿಚಾರದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು.

ಹೆಚ್ಚು ಪೊಲೀಸರ ನೇಮಿಸಬೇಕು. ವಾಹನ ವ್ಯವಸ್ಥೆ ಕಲ್ಪಿಸಬೇಕು. ಕಳೆದ ಹಲವು ವರ್ಷದಿಂದ ಪೊಲೀಸರ ವರ್ಗಾವಣೆಯಲ್ಲಿ ರಾಜಕೀಯ ನಾಯಕರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಸರ್ಕಾರ ಇಂತಹ ಘಟನೆ ತಡೆಯಬೇಕು. ಇಲ್ಲವಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗಲಿದೆ. ಹಿಗೆಯೇ ಮುಂದುವರಿದರೆ ಇಂತಹ ಘಟನೆ ಮುಂದುವರಿಯಲಿದೆ ಎಂದು ವಿವರಿಸಿದರು.

'ಅತ್ಯಾಚಾರ ಪ್ರಕರಣಕ್ಕೆ ಪೊಲೀಸ್ ವೈಫಲ್ಯ ಕಾರಣ'

ಮೈಸೂರು ಅತ್ಯಾಚಾರ ಆರೋಪಿಗಳ ಪರೇಡ್ ನಡೆಸಬೇಕು, ಐದು ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕು. ಸಂತ್ರಸ್ತೆಯ ಹೇಳಿಕೆ ಪಡೆಯಬೇಕು. ಗಸ್ತು ವ್ಯವಸ್ಥೆ ಇನ್ನಷ್ಟು ಹೆಚ್ಚಬೇಕು. ಅತ್ಯಾಚಾರ ಪ್ರಕರಣಕ್ಕೆ ಪೊಲೀಸ್ ವೈಫಲ್ಯ ಕಾರಣ. ಗೃಹ ಸಚಿವರು ನೈತಿಕ ಹೊಣೆ ಹೊರಬೇಕು. ನಾನು ಗೃಹ ಸಚಿವರ ರಾಜೀನಾಮೆ ಕೊಡಿ ಎಂದು ಕೇಳಲ್ಲ. ಕೇಳಿದರೂ ಅದು ಸಾಧ್ಯವಾಗಲ್ಲ.

ಆದರೆ, ನೈತಿಕ ಹೊಣೆ ವಹಿಸಿ ಕ್ರೂರಿ ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಆಗಬೇಕು. ಇಂತಹ ಘಟನೆಗಳು ಮರುಕಳಿಸದಂತೆ ನೋಡಬೇಕು ಎಂದರು. ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಸಾಕಷ್ಟು ದೌರ್ಜನ್ಯ ನಡೆಯುತ್ತಿರುತ್ತದೆ. ಇದನ್ನು ಗಮನಿಸುವ ಕಾರ್ಯ ಆಗಬೇಕು. ನಿರ್ಧಾರವನ್ನು ಕೈಗೊಳ್ಳುವ ಸ್ಥಾನದಲ್ಲಿರುವವರು ಹೆಚ್ಚಿನ ಜವಾಬ್ದಾರಿ ಕೈಗೊಳ್ಳಬೇಕು ಎಂದು ಹೇಳಿದರು.

'ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ'

ಆರ್.ಬಿ. ತಿಮ್ಮಾಪೂರ್ ಮಾತನಾಡಿ, ತಾವು ಈ ಹಿಂದೆ ಜೈಲಿನಿಂದ ತಮ್ಮವರನ್ನು ಬಿಡುಗಡೆ ಮಾಡಿಸಿಕೊಳ್ಳಲು ಲಂಚ ನೀಡಿದ್ದಾಗಿ‌ ತಿಳಿಸಿದ್ದೀರಿ. ಇಂತವರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಘಟನೆ ಸಂಬಂಧ ಮುಖ್ಯಮಂತ್ರಿಗಳೇ ಬಂದು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಕಾಂಗ್ರೆಸ್ ಸಚೇತಕ ಎಂ.ನಾರಾಯಣಸ್ವಾಮಿ, ನಜೀರ್ ಅಹ್ಮದ್, ಯು.ಬಿ.ವೆಂಕಟೇಶ್, ಪಿ.ಆರ್.ರಮೇಶ್ ಮತ್ತಿತರ ಸದಸ್ಯರು ಮಾತನಾಡಿದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸುದೀರ್ಘ ಚರ್ಚೆಗೆ ನಾಳೆ ಉತ್ತರ ನೀಡುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.