ETV Bharat / city

ಮೈಸೂರು ರೇಪ್ ಪ್ರಕರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ.. ಮಾಜಿ ಸಂಸದ ವಿ ಎಸ್ ಉಗ್ರಪ್ಪ ಆರೋಪ - ಡಿಕೆ ಶಿವಕುಮಾರ್‌

ಪೊಲೀಸರು ರಿಯಲ್ ಎಸ್ಟೇಟ್‌ ದಂಧೆಯಲ್ಲಿ ತೊಡಗಿದ್ದಾರೆ. ಇಂತಹ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಮೈಸೂರು ಘಟನೆಯ ಹೊಣೆಯನ್ನು ಗೃಹ ಸಚಿವರು ಹೊರಬೇಕು. ಇಲ್ಲವಾದರೆ ನಾವು ಹೋರಾಟ ರೂಪಿಸುತ್ತೇವೆ. ಸದನದೊಳಗೆ, ಹೊರಗೆ ನಡೆಸುತ್ತೇವೆ..

Mysore gang rape case; a committee submitted report to kpcc president
ಮೈಸೂರು ಅತ್ಯಾಚಾರ ಪ್ರಕರಣ ಕುರಿತ ಕಾಂಗ್ರೆಸ್‌ ಸತ್ಯಶೋಧನಾ ಸಮಿತಿಯಿಂದ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಕೆ
author img

By

Published : Sep 7, 2021, 5:43 PM IST

ಬೆಂಗಳೂರು : ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಿಂದ ರಚನೆಯಾಗಿದ್ದ ವಿ ಎಸ್ ಉಗ್ರಪ್ಪ ನೇತೃತ್ವದ ಸಮಿತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ಗೆ ತನ್ನ ವರದಿ ಸಲ್ಲಿಕೆ ಮಾಡಿದೆ. ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷರನ್ನು ಭೇಟಿಯಾದ ಸಮಿತಿ ಮೈಸೂರು ಅತ್ಯಾಚಾರ ಪ್ರಕರಣದ ವರದಿ ನೀಡಿದೆ.

ಮೈಸೂರಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಿ ಎಸ್ ಉಗ್ರಪ್ಪ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿ ವರದಿ ಸಿದ್ಧಪಡಿಸಲು ಸೂಚಿಸಲಾಗಿತ್ತು. ತಂಡ ಮೈಸೂರಿಗೆ ತೆರಳಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿತ್ತು‌. ಇದೇ ವಿಸ್ತೃತ ವರದಿಯನ್ನು ಇಂದು ಸಮಿತಿ ಸಲ್ಲಿಕೆ ಮಾಡಿದೆ.

ವರದಿ ಸಲ್ಲಿಕೆ ನಂತರ ಮಾತನಾಡಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಅತ್ಯಾಚಾರ ಆದ ತಕ್ಷಣ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸೇರಿಸಬೇಕು. ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಸಂತ್ರಸ್ತೆಯ ಹೇಳಿಕೆ ಮಾಡಿಸಬೇಕಿತ್ತು. ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡಿಸಬೇಕಿತ್ತು. ಈವರೆಗೆ ಆ ಹೆಣ್ಣುಮಗಳು ಹೇಳಿಕೆ ಕೊಟ್ಟಿಲ್ಲ. ಹೇಳಿಕೆ ಕೊಡದಿದ್ದರೆ ತನಿಖೆ ಚುರುಕಾಗಲ್ಲ ಎಂದು ಹೇಳಿದ್ದಾರೆ.

ಆರೋಪಿಗಳನ್ನು ಸಂತ್ರಸ್ತೆ ಮುಂದೆ ಪರೇಡ್‌ ಮಾಡಿಸಿ : ಗೃಹ ಸಚಿವರು ವಿವಾದಾತ್ಮಕ ಹೇಳಿಕೆ ಕೊಡ್ತಾರೆ. ಗೃಹ ಸಚಿವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. 376(ಡಿ) ಕೇಸ್ ದಾಖಲಿಸಬೇಕು. ಆದರೆ, ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ.

ಹೀಗಾಗಿ, ಸಮಿತಿ ಕೆಲವು ಶಿಫಾರಸುಗಳನ್ನು ಮಾಡಿದೆ. ಮೂರು ತಿಂಗಳಲ್ಲಿ ಇದರ ತನಿಖೆಯಾಗಬೇಕು. ಆರೋಪಿಗಳನ್ನ ಸಂತ್ರಸ್ತೆ ಮುಂದೆ ಪರೇಡ್ ಮಾಡಬೇಕು. 202ರ ಪ್ರಕಾರ ಹೆಣ್ಣುಮಗಳ ಬಳಿ ಹೇಳಿಕೆ ಕೊಡಿಸಬೇಕು. ಸಾಂತ್ವನ ಕೇಂದ್ರದ ಮೂಲಕ ನೆರವು ಒದಗಿಸುವ ಜೆತೆಗೆ ತನಿಖೆ ಮಾಡಿ ಚಾರ್ಜ್‌ಶೀಟ್ ಸಲ್ಲಿಸಬೇಕು ಎಂದರು.

ರಿಯಲ್ ಎಸ್ಟೇಟ್‌ ದಂಧೆಯಲ್ಲಿ ತೊಡಗುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು : ಮೈಸೂರಿನಲ್ಲಿ ಗಸ್ತು ವ್ಯವಸ್ಥೆ ಹೆಚ್ಚಿಸುವ ಸಲಹೆ ನೀಡಿರುವ ಉಗ್ರಪ್ಪನವರು, ಅತ್ಯಾಚಾರ ನಡೆದರೆ ಡಿಸಿ, ಎಸಿ ಜವಾವ್ದಾರಿ ಹೊರಬೇಕು. ಜಸ್ಟೀಸ್ ವರ್ಮಾ ತೀರ್ಪನ್ನ ಪರಿಗಣಿಸಬೇಕು. ಜವಾಬ್ದಾರಿ ಇಲ್ಲದ ಅಧಿಕಾರಿಗಳ ಜವಾಬ್ದಾರರನ್ನಾಗಿಸಬೇಕು. ಪದೇಪದೆ ವರ್ಗಾವಣೆ ತಪ್ಪಿಸಬೇಕು.

ಪೊಲೀಸರು ರಿಯಲ್ ಎಸ್ಟೇಟ್‌ ದಂಧೆಯಲ್ಲಿ ತೊಡಗಿದ್ದಾರೆ. ಇಂತಹ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ಮೈಸೂರು ಘಟನೆಯ ಹೊಣೆಯನ್ನು ಗೃಹ ಸಚಿವರು ಹೊರಬೇಕು. ಇಲ್ಲವಾದರೆ ನಾವು ಹೋರಾಟ ರೂಪಿಸುತ್ತೇವೆ. ಸದನದೊಳಗೆ, ಹೊರಗೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ವರದಿ ಸಲ್ಲಿಕೆ ನಂತರ ಜಾತಿಗಣತಿ ವರದಿ ತಿರಸ್ಕಾರಕ್ಕೆ ವೀರಶೈವ ಮಹಾಸಭಾ ಒತ್ತಡ ಮೀರಿಸೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಇದನ್ನ ನಮ್ಮ ಸರ್ಕಾರ ಮಾಡಿಸಿತ್ತು. ಇಲ್ಲಿ ನಮ್ಮ ಅಭಿಪ್ರಾಯ ಬರುವುದಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ತಿಳಿಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು: ಸತೀಶ್ ಜಾರಕಿಹೊಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.