ETV Bharat / city

ಅಭಿವೃದ್ಧಿ ಪರವಾದ ಚುನಾವಣೆ, ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಗೆಲುವು: ಮುನಿರತ್ನ ವಿಶ್ವಾಸ - ಬಾವುರಾವ್ ದೇಶಪಾಂಡೆ ಭವನ

ಬೆಳಗ್ಗೆ ಮತ್ತಿಕೆರೆಯಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಂತರ ಬಾಬುರಾವ್ ದೇಶಪಾಂಡೆ ಭವನದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗಿಯಾದರು. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಭಾರತ ಉಸ್ತುವಾರಿ ಸಿಟಿ ರವಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು.

muniratna-talk-about-rr-nagara-by-election
ಅಭಿವೃದ್ಧಿ ಪರವಾದ ಚುನಾವಣೆ, ಲಕ್ಷಕ್ಕೂ ಹೆಚ್ಚು ಅಂತರದ ಗೆಲವು: ಮುನಿರತ್ನ ವಿಶ್ವಾಸ
author img

By

Published : Oct 14, 2020, 12:50 PM IST

ಬೆಂಗಳೂರು: ನನಗೆ ನನ್ನ ಮನೆಗೆ ಬಂದಷ್ಟು ಖುಷಿಯಾಗುತ್ತಿದ್ದು, ಇಲ್ಲಿರುವ ಒಗ್ಗಟ್ಟು ನನಗೆ ಹಿಂದಿನ ಚುನಾವಣೆಗಳಲ್ಲಿ ಕಾಣಿಸಿರಲಿಲ್ಲ. ಈ ಚುನಾವಣೆ ಅಭಿವೃದ್ಧಿ ಪರವಾದ ಚುನಾವಣೆಯಾಗಿದೆ ಎಂದು ಆರ್​ಆರ್ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದಾರೆ.

ಅಭಿವೃದ್ಧಿ ಪರವಾದ ಚುನಾವಣೆ, ಲಕ್ಷಕ್ಕೂ ಹೆಚ್ಚು ಅಂತರದ ಗೆಲವು: ಮುನಿರತ್ನ ವಿಶ್ವಾಸ

ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಪ್ರಮುಖರೊಂದಿಗೆ ಆರ್​​ಆರ್​ ನಗರ ಉಪಚುನಾವಣೆ ಸಂಬಂಧ ಸಭೆ ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಬಾಬುರಾವ್ ದೇಶಪಾಂಡೆ ಭವನಕ್ಕೆ ಭಾರಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಬೆಳಗ್ಗೆ ಮತ್ತಿಕೆರೆಯಲ್ಲಿರುವ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಂತರ ಬಾಬುರಾವ್ ದೇಶಪಾಂಡೆ ಭವನದಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗಿಯಾದರು. ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ದಕ್ಷಿಣ ಭಾರತದ ಉಸ್ತುವಾರಿ ಸಿಟಿ ರವಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು.

ನಂತರ ಬಾಬುರಾವ್ ದೇಶಪಾಂಡೆ ಭವನದಲ್ಲಿರುವ ಗಣೇಶನ ಗುಡಿಯಲ್ಲಿ ನಾಮಪತ್ರಕ್ಕೆ ಮುನಿರತ್ನ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುನಿರತ್ನ, ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಪಕ್ಷದ ಸರ್ಕಾರವಿದೆ. ಅಭಿವೃದ್ದಿ ಕೆಲಸಗಳನ್ನು ಮಾಡುವವರು ಯಾರು ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ಜನ ನನ್ನ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳಲಿದ್ದೇವೆ:

ತುಳಸಿ ಮುನಿರಾಜುಗೌಡರ ಬೆಂಬಲಿಗರಲ್ಲಿ ಕೆಲವರು ಯುವ ಮೋರ್ಚಾಗೆ ರಾಜೀನಾಮೆ ಕೊಟ್ಟಿರುವುದು ಗೊತ್ತಾಗಿದೆ. ನಾನು ಪಕ್ಷ ಬಿಟ್ಟು ಬಂದಾಗ ಎಲ್ಲ ಕಾರ್ಪೋರೇಟರ್ ಗಳು ನನ್ನ ಜತೆ ಗಟ್ಟಿಯಾಗಿ ನಿಂತರು. ಹಾಗಾಗಿ ಅವರ ಬೆಂಬಲಿಗರು ಅವರ ಮೇಲೆ ಅಭಿಮಾನ ಇರೋದು ಸಹಜ. ಆದರೆ ಈ ಪಕ್ಷ ಒಂದು ಮನೆ ಇದ್ದಂತೆ. ಕೂತು ಮಾತನಾಡೋಣ, ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಬಗೆ ಹರಿಸಿಕೊಳ್ಳೋಣ ಎಂದರು.

ಜ್ಯೋತಿಷಿ ಮಾತು ಕೇಳಿ ಮಹಿಳಾ ಅಭ್ಯರ್ಥಿ ಹಾಕಿದ್ದಾರೆ:

ಜ್ಯೋತಿಷಿಗಳ ಮಾತು ಕೇಳಿ ಹೆಣ್ಣುಮಗಳನ್ನ ನನ್ನ ವಿರುದ್ದ ನಿಲ್ಲಿಸಿದ್ದಾರೆ. ಕುಸುಮಾ ಅವರಿಗೆ ಇದು ಮೊದಲ ಚುನಾವಣೆ ರಾಜಕೀಯದ ಅನುಭವ ಇಲ್ಲ. ನನಗೂ ನನ್ನ ಜ್ಯೋತಿಷಿಗಳು ಹೇಳಿದ್ದಾರೆ ನೀನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೀಯಾ ಎಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.