ETV Bharat / city

ಭಾವೈಕ್ಯತೆಯ ಪ್ರತೀಕ: 5 ತಲೆಮಾರುಗಳಿಂದ ಹಿಂದೂ ಕುಟುಂಬದಿಂದ ಮೊಹರಂ ಆಚರಣೆ

ದೊಡ್ಡಬಳ್ಳಾಪುರ ನಗರದ ನಗರ್ತರ ಪೇಟೆಯ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌರಮ್ಮ ವಂಶಸ್ಥರು ಸುಮಾರು 120 ವರ್ಷದಿಂದ (5 ತಲೆಮಾರು) ಮೊಹರಂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.

Muharram celebration by Hindu family
ಗೌರಮ್ಮ ವಂಶಸ್ಥರಿಂದ ಸಂಭ್ರಮದ ಮೊಹರಂ ಆಚರಣೆ
author img

By

Published : Aug 10, 2022, 11:06 AM IST

ದೊಡ್ಡಬಳ್ಳಾಪುರ: ನಗರದ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌರಮ್ಮ ವಂಶಸ್ಥರು 5 ತಲೆಮಾರುಗಳ ಮೊಹರಂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಮೊಹರಂ ಕೊನೆಯ ದಿನ ವಂಶಸ್ಥರೆಲ್ಲರೂ ಒಂದೆಡೆ ಸೇರಿ ಸಂಭ್ರಮದಿಂದ ಆಚರಿಸುತ್ತಾರೆ.

ಗೌರಮ್ಮ ವಂಶಸ್ಥರಿಂದ ಸಂಭ್ರಮದ ಮೊಹರಂ ಆಚರಣೆ

ದೊಡ್ಡಬಳ್ಳಾಪುರ ನಗರದ ನಗರ್ತರ ಪೇಟೆಯ ಲಿಂಗಾಯತ ಸಮುದಾಯಕ್ಕೆ ಸೇರಿದ ಗೌರಮ್ಮ ವಂಶಸ್ಥರಾದ ಜಿ.ಪಿ ಶಿವರುದ್ರಪ್ಪ ಅವರ ನೇತೃತ್ವದಲ್ಲಿ ಮೊಹರಂ ಆಚರಣೆ ಮಾಡಲಾಗುತ್ತಿದೆ. 120 ವರ್ಷಗಳ ಹಿಂದೆ ಶಿವರುದ್ರಪ್ಪ ಅವರ ಮುತ್ತಜ್ಜನಿಗೆ 16 ಕಣ್ಣಿನ ಬಾವಿಯಲ್ಲಿ ಚಿನ್ನದ ಹಸ್ತ ಸಿಕ್ಕಿತ್ತಂತೆ. ಅದನ್ನ ಮನೆಗೆ ತಂದ ಅವರು ಬಹಳ ಶ್ರದ್ಧೆ ಭಕ್ತಿಯಿಂದ ಮೊಹರಂ ಆಚರಣೆಯನ್ನ ಆರಂಭಿಸಿದ್ದಾರೆ. ಸದ್ಯ ಗೌರಮ್ಮ ವಂಶದ 5ನೇ ತಲೆಮಾರಿನವರು ಮೊಹರಂ ಆಚರಣೆ ಮಾಡುತ್ತಿದ್ದಾರೆ.

ಮೊಹರಂ ಆಚರಣೆಗಾಗಿ ಗೌರಮ್ಮ ವಂಶಸ್ಥರು ಗುಡಿ ಕಟ್ಟಿದ್ದಾರೆ. ಸ್ಥಳೀಯವಾಗಿ ಈ ಗುಡಿ ನಗರ್ತರ ಪೇಟೆಯ ಬಾಬಯ್ಯನ ಗುಡಿ ಎಂದೇ ಪ್ರಸಿದ್ದಿ ಪಡೆದಿದೆ. ಬಹುತೇಕ ಮುಸ್ಲಿಮರು ಬಾಬಯ್ಯನ ಗುಡಿಗೆ ಬಂದು ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಾರೆ. ಪ್ರತಿ ಶುಕ್ರವಾರ ಇಲ್ಲಿ ವಿಶೇಷ ಪೂಜೆ ಸಹ ಮಾಡಲಾಗುತ್ತದೆ.

ಮೊಹರಂ ಹಬ್ಬದಲ್ಲಿ ಗೌರಮ್ಮ ವಂಶಸ್ಥರು ಒಂದೇಡೆ ಸೇರುತ್ತಾರೆ. ಆಚರಣೆಯ 11 ದಿನ ಹಿಂದೂ ದೇವರುಗಳಿಗೆ ಪೂಜೆ ಮಾಡುವುದಿಲ್ಲ. ದೇವರ ಫೋಟೋಗಳಿಗೆ ಬಟ್ಟೆಯಿಂದ ಮರೆಮಾಡಿ ಮೊಹರಂ ಆಚರಣೆ ಮಾಡುತ್ತಾರೆ. 9ನೇ ದಿನ ಬಾಬಯ್ಯನ ಗುಡಿಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವರು. ಕುಟುಂಬದ ಹೆಣ್ಣು ಮಕ್ಕಳು ಸಹ ಮೊಹರಂ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ: ಮುದ್ದೇಬಿಹಾಳದಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.