ETV Bharat / city

ಪಾದರಾಯನಪುರದ ಕಿಡಿಗೇಡಿಗಳು ರಾಮನಗರ ಜೈಲಿನಿಂದ ಹಜ್ ಭವನಕ್ಕೆ ಶಿಫ್ಟ್... ಸಿಎಂಗೆ ಡಿಸಿಎಂ ಮಾಹಿತಿ ​

author img

By

Published : Apr 24, 2020, 1:22 PM IST

ರಾಮನಗರ ಜೈಲಿನಲ್ಲಿ ಇಟ್ಟಿರುವ ಪಾದರಾಯನಪುರ ಪ್ರಕರಣದ ಆರೋಪಿಗಳನ್ನು ಹಜ್ ಭವನಕ್ಕೆ ಸ್ಥಳಾಂತರಿಸಿದ ಕುರಿತು ಡಿಸಿಎಂ ಡಾ. ಅಶ್ವತ್ಥ್​​ ನಾರಾಯಣ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು.

move-to-haj-bhavan-from-ramanagar-jail
ಡಿಸಿಎಂ ಡಾ.ಅಶ್ವತ್ಥ ನಾರಾಯಣ್

ಬೆಂಗಳೂರು: ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ರಾಮನಗರ ಜೈಲಿನಿಂದ ಹಜ್ ಭವನಕ್ಕೆ ಸ್ಥಳಾಂತರ ಮಾಡಿರುವ ಕುರಿತು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವತ್ಥ್​ನಾರಾಯಣ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಗ್ರವಾದ ಮಾಹಿತಿ ನೀಡಿದರು.

ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಬಿಎಸ್​​ವೈ ಭೇಟಿ ಮಾಡಿದ ಅಶ್ವತ್ಥ್​ನಾರಾಯಣ್, ಪಾದರಾಯನಪುರ ಕಿಡಿಗೇಡಿಗಳ ಸ್ಥಳಾಂತರ ಕುರಿತು ಮಾಹಿತಿ ನೀಡಿದ್ರು. ಪುಂಡರ ಸ್ಥಳಾಂತರ ಜೊತೆಗೆ ಅವರಿಂದ ಸೋಂಕು ಹರಡದ ರೀತಿಯಲ್ಲಿ ರಾಮನಗರ ಜೈಲಿನಲ್ಲಿ ಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳನ್ನೇ ಇಲ್ಲೂ ಕೈಗೊಳ್ಳಲಾಗಿದೆ ಎಂಬುದರ ಕುರಿತು ವಿವರಿಸಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಡಿಸಿಎಂ, ಪಾದರಾಯನಪುರ ಕಿಡಿಗೇಡಿಗಳನ್ನು ಪರಪ್ಪನ ಅಗ್ರಹಾರದಲ್ಲಿಡಲು ಸಾಧ್ಯವಿರಲಿಲ್ಲ. ರಾಮನಗರ ಕಾರಾಗೃಹ ಚಿಕ್ಕದು. ಅಲ್ಲಿ ಇರಿಸಬೇಕಾದ ಅನಿವಾರ್ಯತೆ ಬಂತು. ಈಗ ಪಾದರಾಯನಪುರ ಕಿಡಿಗೇಡಿಗಳನ್ನು ಹಜ್ ಭವನಕ್ಕೆ ಸ್ಥಳಾಂತರಿಸಿ ಸೋಂಕಿತರಲ್ಲದವರನ್ನು ಕ್ವಾರಂಟೈನ್ ಮಾಡುತ್ತಿದ್ದೇವೆ ಎಂದರು.

ಡಿಸಿಎಂ ಡಾ.ಅಶ್ವತ್ಥ್​ನಾರಾಯಣ್

ಜನರ ಹಿತದೃಷ್ಟಿಯಿಂದ ಕಾರಾಗೃಹ ಬಳಕೆ ಆಗಬೇಕಿತ್ತು. ಹೀಗಾಗಿ ರಾಮನಗರ ಕಾರಾಗೃಹ ಬಳಕೆಯಾಗಿದೆ. ಎಲ್ಲರನ್ನೂ ಪರೀಕ್ಷೆ ಮಾಡಿಯೇ ಸ್ಥಳಾಂತರಿಸಲಾಗಿದೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಡಾ. ಅಶ್ವತ್ಥ್​ನಾರಾಯಣ್ ತಿರುಗೇಟು ನೀಡಿದರು.

ಪಾದರಾಯನಪುರ ಕಿಡಿಗೇಡಿಗಳಲ್ಲಿ ಮೊದಲು ಇಬ್ಬರಿಗೆ ಕೊರೊನಾ ದೃಢಪಟ್ಟಿತ್ತು. ಈಗ ಹೊಸದಾಗಿ ಮೂವರಲ್ಲಿ ಪತ್ತೆಯಾಗಿದೆ. ಲ್ಯಾಬ್ ವರದಿ ಈಗ ಬಂದಿದೆ. ಹೀಗಾಗಿ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಪ್ರಚೋದನಾತ್ಮಕ ಹೇಳಿಕೆ ನೀಡುವುದು ಯೋಗ್ಯವಲ್ಲ. ಅದನ್ನು ಬಿಟ್ಟು ಜನರ ಕಾರ್ಯ ಮಾಡಲಿ. ಡಿಕೆಶಿ ಅವರು ಸರ್ಕಾರಕ್ಕೆ ಉತ್ತಮವಾಗಿಯೇ ಸಹಕಾರ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಲಹೆ ಕೊಡಲಿ ಎಂದು ಡಿಸಿಎಂ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.