ETV Bharat / city

ವೈದ್ಯರ ನಿರ್ಲಕ್ಷ್ಯ ಆರೋಪ - ತಾಯಿ ಸಾವು, ಅನಾಥವಾದ ನವಜಾತ ಶಿಶು!

ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆ ವೈದ್ಯರ, ಸಿಬ್ಬಂದಿ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

mother died after delivery in Doddaballapura
ಹೆರಿಗೆ ಬಳಿಕ ತಾಯಿ ಸಾವು
author img

By

Published : Mar 11, 2022, 10:27 AM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ತಾಯಿ/ಬಾಣಂತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಸಾವನ್ನಪ್ಪಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪ ಮಾಡಿದ್ದು, ಇದೀಗ ತಾಯಿ ಇಲ್ಲದೇ ನವಜಾತ ಶಿಶು ಅನಾಥವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ಗ್ರಾಮದ ಸವಿತಾ(23) ಅವರನ್ನು ಹೆರಿಗೆಗಾಗಿ ದೊಡ್ಡಬಳ್ಳಾಪುರ ತಾಯಿ ಮಗು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಧಿಕ ರಕ್ತಸ್ರಾವದಿಂದ ಹೆರಿಗೆಯಾದ ಕ್ಷಣದಲ್ಲೇ ಸವಿತಾ ಸಾವನ್ನಪ್ಪಿದ್ದಾರೆ. ತಾಯಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶಗೊಂಡ ಮೃತಳ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.

ಹೆರಿಗೆ ಬಳಿಕ ತಾಯಿ ಸಾವು - ಕುಟುಂಸ್ಥರ ಆಕ್ರೋಶ

ಮೃತ ಸವಿತಾ ಎರಡು ವರ್ಷಗಳ ಹಿಂದೆ ಬೈರಾಪುರದ ರಮೇಶ್ ಅವರನ್ನು ಮದುವೆಯಾಗಿದ್ದರು. ಚೊಚ್ಚಲ ಗರ್ಭಿಣಿಯಾಗಿದ್ದ ವೇಳೆ ಆಕೆಯ ರೆಗ್ಯೂಲರ್ ಚೆಕ್ ಆಪ್ ಅನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಲಾಗುತ್ತಿತ್ತು. ಗುರುವಾರದಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ದೊಡ್ಡಬಳ್ಳಾಪುರದ ತಾಯಿ ಮಗು ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಾಯಿ ಹೊಟ್ಟೆಯಲ್ಲಿದ್ದ ಮಗು ಆಧಿಕ ತೂಕ ಇದ್ದ ಹಿನ್ನೆಲೆ ಸಹಜ ಹೆರಿಗೆ ಅಸಾಧ್ಯವಾಗಿತ್ತು.

ಆದರೆ, ವೈದ್ಯರು ಸಹಜ ಹೆರಿಗೆ ಆಗುತ್ತೆ ಎಂದು ಇಲ್ಲಿಯೇ ಉಳಿಸಿಕೊಂಡಿದ್ದಾರೆ. ಬೆಳಗ್ಗೆ 9ಗಂಟೆ ಸಮಯದಲ್ಲಿ ಹೆರಿಗೆಯಾದ ನಂತರ ಗರ್ಭಕೋಶದಲ್ಲಿ ತೀರ್ವ ರಕ್ತಸ್ರಾವ ಆಗಿ ಆರೋಗ್ಯದಲ್ಲಿ ಏರುಪೇರಾಗಿದೆ. ನಂತರ ವೈದ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಆದರೆ ಅವರು ಬೇರೆ ಆಸ್ಪತ್ರೆ ಹೋಗುವ ಮುನ್ನವೇ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕದ್ದ ಹಣದಲ್ಲಿ ಜೂಜಾಟ, 35ಕ್ಕೂ ಹೆಚ್ಚು ಕೇಸ್: ಹೆಕ್ಕಿದಷ್ಟೂ ಹೊರಬರುತ್ತಿರುವ ಕೃತ್ಯಗಳು - ದಂಗಾದ ಪೊಲೀಸರು

ಮೃತಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ, ಹೊಟ್ಟೆಯಲ್ಲಿದ್ದ ಮಗು 4 ಕೆಜಿಗೂ ಹೆಚ್ಚು ತೂಕ ಇದ್ದು, ಹೆರಿಗೆ ಮಾಡಿಸೋದು ಸವಾಲಿನ ಕೆಲಸವಾಗಿತ್ತು, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರೆ ನಾವು ಕರೆದುಕೊಂಡು ಹೋಗುತ್ತಿದ್ದೆವು. ಆದರೆ, ವೈದ್ಯರು ಇಲ್ಲಿಯೇ ಹೆರಿಗೆ ಮಾಡುವುದಾಗಿ ಧೈರ್ಯ ತುಂಬಿ ಕೊನೆಗೆ ಆಕೆಯ ಜೀವ ತೆಗೆದಿದ್ದಾರೆ.

ಹುಟ್ಟಿದ ಕ್ಷಣದಲ್ಲೇ ಮಗುವಿಗೆ ತಾಯಿ ಇಲ್ಲದಂತೆ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಸವಿತಾಳ ಸಾವಿಗೆ ಕಾರಣರೆಂದು ಆರೋಪಿಸಿ ಅಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ನಂತರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.