ಬೆಂಗಳೂರು: ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶ್ರಿನಗರ ಬಸ್ ನಿಲ್ದಾಣದ ಬಳಿಯ ಮನೆಯೊಂದರಲ್ಲಿ ನಡೆದಿದೆ.
ತಾಯಿ ರಾಜೇಶ್ವರಿ (43), ಮಾನಸ (17), ಭೂಮಿಕ (15) ಮೃತರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡ ಹಾಗೂ ಹೆಂಡತಿ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
![Bangalore](https://etvbharatimages.akamaized.net/etvbharat/prod-images/4112214_thughmb.jpg)
ಮಗಳು ಮಾನಸ ಆತ್ಮಹತ್ಯೆಗೂ ನಮ್ಮ ಸಾವಿಗೆ ನಮ್ಮ ತಂದೆ ಸಿದ್ದಯ್ಯನೇ ಕಾರಣ. ಎಲ್ಲರಿಗೂ ಒಳ್ಳೆ ತಂದೆ ಸಿಗಬೇಕು. ನಮ್ಮ ತಂದೆ ನಮ್ಮ ಲೈಫ್ನ್ನು ಹಾಳು ಮಾಡಿ ಬಿಟ್ಟ ಎಂದು ಬರೆದು ಹಾಕಿರುವ ವ್ಯಾಟ್ಯಾಪ್ ಸ್ಟೇಟಸ್ ವೈರಲ್ ಆಗಿದ್ದು, ಸದ್ಯ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.