ETV Bharat / city

ರಾಷ್ಟ್ರಪತಿಯಂತೆ ಉಪರಾಷ್ಟ್ರಪತಿಯೂ ಮಹಿಳೆಯೇ ಆಗಲಿ: ಮೋಟಮ್ಮ

ಉಪರಾಷ್ಟ್ರಪತಿ ಚುನಾವಣೆ ಪ್ರಚಾರದ ಮೇಳೆ ಮೋಟಮ್ಮ, ರಾಷ್ಟ್ರಪತಿ ಸ್ಥಾನಕ್ಕೆ ಮಹಿಳೆ ಏರಿದ್ದಾರೆ, ಉಪರಾಷ್ಟ್ರಪತಿಯೂ ಮಹಿಳೆಯೇ ಆಗಲಿ. ಈ ಬಗ್ಗೆ ಮೋದಿ ಅವರು ಚಿಂತನೆ ಮಾಡಿ ಮಾರ್ಗರೇಟ್ ಆಳ್ವ ಅವರನ್ನು ಬೆಂಬಲಿಸಿ ಒಮ್ಮತದಿಂದ ಆಯ್ಕೆ ಮಾಡಬಹುದಿತ್ತು ಎಂದರು.

motamma-press-meet
ಮೋಟಮ್ಮ
author img

By

Published : Jul 27, 2022, 3:52 PM IST

ಬೆಂಗಳೂರು : ದೇಶದ ರಾಷ್ಟ್ರಪತಿ ಮಾತ್ರವಲ್ಲ ಉಪರಾಷ್ಟ್ರಪತಿಯು ಮಹಿಳೆಯೇ ಆಗಬೇಕು ಎಂಬುದು ನಮ್ಮ ಆಶಯ ಎಂದು ಮಾಜಿ ಸಚಿವೆ ಮೋಟಮ್ಮ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ರಾಜ್ಯದವರೇ ಆದ ನುರಿತ ಹಾಗೂ ಮುತ್ಸದಿ ನಾಯಕಿ ಮಾರ್ಗರೇಟ್ ಆಳ್ವಾ ಅವರು ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ದೇಶದ ರಾಷ್ಟ್ರಪತಿಯಾಗಿ ದೌಪದಿ ಮುರ್ಮು ಅವರು ಆಯ್ಕೆಯಾಗಿದ್ದು, ಉಪರಾಷ್ಟ್ರಪತಿ ಸ್ಥಾನಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿ ಇತಿಹಾಸ ನಿರ್ಮಿಸಬೇಕು ಎಂಬುದು ನಮ್ಮ ಆಶಯ ಎಂದರು.

ಈ ವಿಚಾರವಾಗಿ ಮೋದಿ ಅವರ ಪಕ್ಷ ಕೂಡ ಮಾರ್ಗರೇಟ್ ಅವರಿಗೆ ಬೆಂಬಲಿಸಿ ಒಮ್ಮತದಿಂದ ಆಯ್ಕೆ ಮಾಡಬಹುದಿತ್ತು. ಇನ್ನೂ ಕಾಲ ಮಿಂಚಿಲ್ಲ ಇನ್ನಾದರೂ ಸರಿಯಾದ ತೀರ್ಮಾನ ಕೈಗೊಂಡು ಆಳ್ವಾ ಅವರಿಗೆ ಬೆಂಬಲಿಸಬೇಕು, ಹೆಚ್ಚಿನ ಸಂಖ್ಯೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಎಲ್ಲ ಸಂಸದರಿಗೆ ಮನವಿ ಮಾಡುತ್ತೇವೆ ಎಂದರು.

ರಾಷ್ಟ್ರಪತಿಯಂತೆ ಉಪರಾಷ್ಟ್ರಪತಿಯೂ ಮಹಿಳೆಯೇ ಆಗಲಿ

ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಮಾತನಾಡಿ, ರಾಜ್ಯದ ಹೆಣ್ಣುಮಗಳು ಉಪರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವುದೇ ಹೆಮ್ಮೆಯ ವಿಚಾರ, ಅವರ ಸುದೀರ್ಘ ಸೇವೆ ನಂತರ ಅವರಿಗೆ ಈ ಅವಕಾಶ ಸಿಕ್ಕಿದ್ದು, ಎಲ್ಲ ಸಂಸದರು ಮಾರ್ಗರೇಟ್ ಅವರನ್ನು ಬೆಂಬಲಿಸಬೇಕು. ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸ್ಥಾನದಲ್ಲಿ ಮಹಿಳೆಯರು ಆಯ್ಕೆಯಾಗಿ ದೇಶವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕು. ಆ ಸಾಮರ್ಥ್ಯ ಮಾರ್ಗರೇಟ್​ ಆಳ್ವಾ ಅವರಿಗೆ ಇದೆ ಎಂದು ನಂಬಿದ್ದೇವೆ. ಹೀಗಾಗಿ ಮಾರ್ಗರೇಟ್ ಆಳ್ವಾ ಅವರಿಗೆ ಬೆಂಬಲಿಸಿ ಇತಿಹಾಸ ಬರೆಯಬೇಕು ಎಂದರು.

ಇದನ್ನೂ ಓದಿ : ಪ್ರತಿಪಕ್ಷಗಳಿಂದ ಮುಂದುವರೆದ ಕೋಲಾಹಲ; ಮುಂಗಾರು ಅಧಿವೇಶನವೆಂಬ ಸಮಯ 'ವ್ಯರ್ಥ ಕಲಾಪ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.