ಬೆಂಗಳೂರು: ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರನ್ನು ಸರ್ಕಾರದ ಮುಖ್ಯ ಸಚೇತಕರಾಗಿ ನೇಮಿಸಿ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಆದೇಶಿಸಿದ್ದಾರೆ. ಈ ಮುನ್ನ ಮಹಾಂತೇಶ ಕವಟಗಿಮಠ ಪರಿಷತ್ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ದ್ವಿಸದಸ್ಯ ಬಲದ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕವಟಗಿಮಠ ಸೋಲು ಕಂಡಿದ್ದರು. ಹೀಗಾಗಿ ಸರ್ಕಾರಿ ಮುಖ್ಯ ಸಚೇತಕ ಸ್ಥಾನ ತೆರವಾಗಿತ್ತು.
ಇದನ್ನೂ ಓದಿ: ರಾಷ್ಟ್ರಲಾಂಛನ ದುರ್ಬಳಕೆ ಆರೋಪ: ಬಸವರಾಜ್ ಹೊರಟ್ಟಿಗೆ ಶೋಕಾಸ್ ನೋಟಿಸ್