ETV Bharat / city

ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ ಮಾಡಿದ ಎಂಟಿಬಿ ನಾಗರಾಜ್... - ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

ಮಹದೇವಪುರ ಬಳಿ ಇರುವ ಗರುಡಾಚಾರ್ ಪಾಳ್ಯದ ಆಶ್ರಯ ಲೇಔಟ್​ನಲ್ಲಿರುವ ಎಂಟಿಬಿ ನಿವಾಸದಲ್ಲಿ ಫೆರಾರಿ, ರೋಲ್ಸ್ ರಾಯ್ಸ್, ರೇಂಜ್ ರೋವರ್, ಫಾರ್ಚ್ಯೂನರ್, ಇನೋವಾ ಸೇರಿದಂತೆ ಎಂಟು ಐಷಾರಾಮಿ ಕಾರುಗಳಿಗೆ ಕುಟುಂಬ ಸಮೇತ ಸೇರಿ ಪೂಜೆ ಸಲ್ಲಿಸಿದರು.

mlc-mtb-nagaraj-ayudha-pooja-for-luxury-cars
ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ ಮಾಡಿದ ಎಂಟಿಬಿ ನಾಗರಾಜ್...
author img

By

Published : Oct 25, 2020, 5:43 PM IST

ಗರುಡಾಚಾರ್ ಪಾಳ್ಯ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಎಂಟಿಬಿ ತಮ್ಮ 20 ಕೋಟಿಗೂ ಹೆಚ್ಚು ಬೆಲೆಬಾಳುವ ಐಷಾರಾಮಿ ಕಾರುಗಳಿಗೆ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದರು.

ಐಷಾರಾಮಿ ಕಾರುಗಳಿಗೆ ಆಯುಧ ಪೂಜೆ ಮಾಡಿದ ಎಂಟಿಬಿ ನಾಗರಾಜ್...

ಮಹದೇವಪುರ ಬಳಿ ಇರುವ ಗರುಡಾಚಾರ್ ಪಾಳ್ಯದ ಆಶ್ರಯ ಲೇಔಟ್​ನಲ್ಲಿರುವ ಎಂಟಿಬಿ ನಿವಾಸದಲ್ಲಿ ಫೆರಾರಿ, ರೋಲ್ಸ್ ರಾಯ್ಸ್, ರೇಂಜ್ ರೋವರ್, ಫಾರ್ಚ್ಯೂನರ್, ಇನೋವಾ ಸೇರಿದಂತೆ ಎಂಟು ಐಷಾರಾಮಿ ಕಾರುಗಳಿಗೆ ಕುಟುಂಬ ಸಮೇತ ಸೇರಿ ಪೂಜೆ ಸಲ್ಲಿಸಿದರು.

ಪೂಜೆಯ ನಂತರ ಮಾತನಾಡಿದ ಎಂಟಿಬಿ ನಾಗರಾಜ್, ತಮ್ಮ ಕುಟುಂಬದವರು, ಬಂಧು ಬಳಗ ಹಾಗೂ ಕಾರ್ಯಕರ್ತರ ಜೊತೆ ಪ್ರತಿವರ್ಷ ದಸರಾವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತೆ. ಆದರೆ ಈ ವರ್ಷ ಕೊರೊನಾ ಇರುವುದರಿಂದ ಕೆಲವು ಜನರಿಗೆ ಮಾತ್ರ ಆಹ್ವಾನಿಸಿ ಸರಳವಾಗಿ ಹಬ್ಬ ಆಚರಣೆ ಮಾಡುತ್ತಿದ್ದೇವೆ ಎಂದರು. 1971ರಲ್ಲಿ ವೆಸ್ಪಾ ಸ್ಕೂಟರ್ ಮತ್ತು ಲಾರಿ ಖರೀದಿ ಮಾಡಿ ವ್ಯಾಪಾರ ಆರಂಭಿಸಿದ ಬಗ್ಗೆ ನೆನಪು ಮಾಡಿಕೊಂಡರು. ಆ ಲಾರಿ ಸ್ಕೂಟರ್ ನಿಂದ ಇಂದು ಐಷಾರಾಮಿ ಕಾರುಗಳನ್ನು ಪಡೆಯಲು ದೇವರು ಮಂಜುನಾಥನ ಆಶೀರ್ವಾದ ಎಲ್ಲಾ ಆಯಿತು ಎಂದು ತಿಳಿಸಿದರು.

ನಂತರ ಮಾತನಾಡಿದ ಎಂಟಿಬಿ ಪುತ್ರ ಮಾಜಿ ಪಾಲಿಕೆ ಸದಸ್ಯ ಪುರುಷೋತ್ತಮ್ ಫೆರಾರಿ, ರೋಲ್ಸ್ ರಾಯ್ಸ್, ರೇಂಜ್ ರೋವರ್ ನನ್ನ ಕನಸಿನ ಕಾರುಗಳು ತುಂಬಾ ಖುಷಿಯಾಗುತ್ತಿದೆ. ಈ ವರ್ಷ ನಮ್ಮ ಮನೆಗೆ ಎರಡು ದುಬಾರಿ ಬೆಲೆಯ ಕಾರುಗಳ ಆಗಮದಿಂದ ದಸರಾ ಹಬ್ಬ ಕಳೆ ಕಟ್ಟಿದೆ. ಆಯುಧ ಪೂಜೆ ಹಬ್ಬದ ವಾತಾವರಣ ಎದ್ದು ಕಾಣುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.