ETV Bharat / city

ಹಳ್ಳಿ-ಹಳ್ಳಿಗಳಲ್ಲೂ ಮದ್ಯ ಮಾರಾಟ : ಸರ್ಕಾರ ಮೌನವಹಿಸಿದೆಯೆಂದು ಶಾಸಕರ ಆಕ್ರೋಶ

ಈಗಾಗಲೇ ಪರಿಸ್ಥಿತಿ ಕೈಮೀರಿದೆ. ಈಗಲೂ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೊಡ್ಡ ಅನಾಹುತ ಕಾದಿದೆ. ಹಳ್ಳಿಗಾಡಿನಲ್ಲಿ ಮದ್ಯದ ಹಾವಳಿಯಿಂದ ಹೆಣ್ಣು ಮಕ್ಕಳು ಆತಂಕಗೊಂಡಿದ್ದಾರೆ. ಈ ಆತಂಕದಿಂದ ಮದ್ಯ ಮಾರಾಟವಾಗುವ ಜಾಗಗಳ ಮೇಲೆ ನುಗ್ಗಿ ದಾಳಿ ಮಾಡುವ ಪ್ರವೃತ್ತಿ ಬೆಳೆಯಬಹುದು ಎಂದು ಎಚ್ಚರಿಸಿದರು..

MLAs outrage on government on liquor Selling matter
ಮದ್ಯ ಮಾರಾಟ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಶಾಸಕರ ಆಕ್ರೋಶ
author img

By

Published : Dec 15, 2021, 4:26 PM IST

ಬೆಂಗಳೂರು/ಬೆಳಗಾವಿ : ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯದ ಹೊಳೆ ಹರಿಯುತ್ತಿದೆ. ತನ್ನ ಆದಾಯಕ್ಕಾಗಿ ಈ ಪಿಡುಗನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಪಕ್ಷಭೇದ ಮರೆತು ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಕಲಾಪದಲ್ಲಿ ನಡೆದಿದೆ.

ಪ್ರಶ್ನೋತ್ತರ ವೇಳೆಯಲ್ಲಿ ತುಕಾರಾಂ, ರೂಪಕಲಾ, ನಂಜೇಗೌಡ, ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು ಮಾತನಾಡಿದರು. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಇಂದು ರಾಜ್ಯದ ಪ್ರತಿ ಜಿಲ್ಲೆಯ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಆದರೆ, ಇದನ್ನು ನೋಡಿಯೂ ಸರ್ಕಾರ ಸುಮ್ಮನಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 1992ರಿಂದ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡಿಲ್ಲ ಎಂದು ಸರ್ಕಾರ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ 568 ಬಾರ್ ಅಂಡ್ ರೆಸ್ಟೋರೆಂಟ್​ಗಳಿಗೆ ಮಾತ್ರ ಪರವಾನಿಗೆ ನೀಡಿರುವುದಾಗಿ ಹೇಳುತ್ತಿದೆ. ಆದರೆ, ಇಂದು ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ.

ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ ಎಂದರೆ ಪರಿಸ್ಥಿತಿ ಯಾವ ಮಟ್ಟದಲ್ಲಿ ಆತಂಕಕಾರಿಯಾಗಿದೆ ಎಂಬುದನ್ನು ಊಹಿಸಬಹುದು. ಹೀಗೆ ಎಲ್ಲ ಕಡೆ ಮದ್ಯ ಮಾರಾಟವಾಗುತ್ತಿರುವುದರಿಂದ ಯುವ ಜನತೆ ಹಾಳಾಗುತ್ತಿದ್ದಾರೆ. ಸಂಸಾರಗಳು ಒಡೆದು ಹೋಗುತ್ತಿವೆ.

ಜನರ ಆರೋಗ್ಯ ಹದಗೆಟ್ಟು ಹೋಗುತ್ತಿದೆ. ಇವರು ನಿರ್ದಿಷ್ಟ ಜಾಗಗಳಿಂದ ನೂರು ಮೀಟರ್ ಅಂತರದಲ್ಲಿ ಮದ್ಯದಂಗಡಿಗಳು ಇರಬೇಕು ಎನ್ನುತ್ತಾರೆ. ಆದರೆ, ಅಂತಹ ಯಾವ ನಿಯಮವೂ ಜಾರಿಯಾಗುತ್ತಿಲ್ಲ. ಬೇಕಾದಲ್ಲಿ ಮದ್ಯ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗದಿರಬಹುದು. ಅವರು ಕೊಡುವ ಸವಲತ್ತು ತಲುಪದಿರಬಹುದು. ಆದರೆ, ಮದ್ಯ ಮಾತ್ರ ಎಲ್ಲೆಡೆ ತಲುಪುತ್ತಿದೆ. ಆದಾಯ ಹೆಚ್ಚಳವಾಗಬೇಕು ಎಂಬ ಕಾರಣಕ್ಕಾಗಿ ಇದನ್ನೆಲ್ಲ ನೋಡಿಕೊಂಡು ಸರ್ಕಾರ ಸುಮ್ಮನಿದೆ. ಇದು ಸರಿಯಲ್ಲ.

ಆದಾಯ ಬರುತ್ತದೆ ಎಂದು ಜನರ ಜೀವದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಈ ಮಧ್ಯೆ ಹಲವು ಕಡೆ ಕಲಬೆರಕೆ ಮದ್ಯವೂ ಸೇರಿಕೊಂಡಿದೆ. ಇದು ಇಲಾಖೆಯ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನವಹಿಸಿದ್ದಾರೆ ಎಂದು ದೂರಿದರು.

ಈಗಾಗಲೇ ಪರಿಸ್ಥಿತಿ ಕೈಮೀರಿದೆ. ಈಗಲೂ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ದೊಡ್ಡ ಅನಾಹುತ ಕಾದಿದೆ. ಹಳ್ಳಿಗಾಡಿನಲ್ಲಿ ಮದ್ಯದ ಹಾವಳಿಯಿಂದ ಹೆಣ್ಣು ಮಕ್ಕಳು ಆತಂಕಗೊಂಡಿದ್ದಾರೆ. ಈ ಆತಂಕದಿಂದ ಮದ್ಯ ಮಾರಾಟವಾಗುವ ಜಾಗಗಳ ಮೇಲೆ ನುಗ್ಗಿ ದಾಳಿ ಮಾಡುವ ಪ್ರವೃತ್ತಿ ಬೆಳೆಯಬಹುದು ಎಂದು ಎಚ್ಚರಿಸಿದರು.

ಇದನ್ನೂ ಓದಿ: ತಿಮ್ಮಪ್ಪ ಮೂರು ತರಹ ಕಾಣುವ ರೀತಿ ರಮೇಶ್ ಜಾರಕಿಹೊಳಿ ಮಾತಾಡ್ತಾರೆ: ಸತೀಶ್ ಜಾರಕಿಹೊಳಿ

ಶಾಸಕರ ಮಾತುಗಳಿಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ,‌ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಲಬೆರಕೆ ಮದ್ಯ ಮಾರಾಟವಾಗುವುದನ್ನು ತಡೆಯಲು ಗೌಪ್ಯ ದಾಳಿಗಳನ್ನು ನಡೆಸುವುದಾಗಿ ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.