ETV Bharat / city

ಚಾಮರಾಜಪೇಟೆ ಬಂದ್ ಸಂಪೂರ್ಣ ವಿಫಲ: ಶಾಸಕ ಜಮೀರ್ - ಚಾಮರಾಜಪೇಟೆ ಬಂದ್ ಕುರಿತು ಜಮೀರ್ ಪ್ರತಿಕ್ರಿಯೆ

ಚಂದ್ರು ಕೊಲೆ ಪ್ರಕರಣ ಸಂಬಂಧ ಚಾಮರಾಜಪೇಟೆ ಬಂದ್​ಗೆ ಕರೆ ಕೊಡಲಾಗಿತ್ತು. ಆದ್ರೆ ಬಂದ್​ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಜಮೀರ್ ಅಹಮದ್ ಹೇಳಿದರು.

MLA Zameer Ahmed
ಶಾಸಕ ಜಮೀರ್ ಅಹಮದ್
author img

By

Published : Apr 7, 2022, 6:52 PM IST

Updated : Apr 7, 2022, 7:05 PM IST

ಬೆಂಗಳೂರು: ಚಾಮರಾಜಪೇಟೆ ಬಂದ್ ಕರೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಜಮೀರ್ ಅಹಮದ್ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಛಲವಾದಿಪಾಳ್ಯದ ಚಂದ್ರು ಕೊಲೆ ಪ್ರಕರಣ ಸಂಬಂಧ ಚಾಮರಾಜಪೇಟೆ ಬಂದ್​ಗೆ ಕರೆ ಕೊಡಲಾಗಿತ್ತು. ಆದ್ರೆ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿಲ್ಲ. ಎಲ್ಲವೂ ಯಥಾ ಪ್ರಕಾರ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಇದನ್ನೂ ಓದಿ: ಶಿವಮೊಗ್ಗ: ಯುವಕನ ಮೇಲೆ ಗುಂಪಿನಿಂದ ಹಲ್ಲೆ, ಆಸ್ಪತ್ರೆಗೆ ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುರಿಸಿದ್ದಾರೆ. ಘಟನೆಯ ಮಾಹಿತಿಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‌ ಪಂತ್ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ. ಆದರೂ ಕೆಲ ವಿಕೃತ ಮನಸ್ಸಿನ ಸಂಘಟನೆಗಳು ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದಲೇ ಚಾಮರಾಜಪೇಟೆ ಬಂದ್​ಗೆ ಕರೆ ಕೊಟ್ಟಿದ್ದರು. ಆದರೆ ನಮ್ಮ ಕ್ಷೇತ್ರದ ಜನ ಬುದ್ಧಿವಂತರು. ಅವರಿಗೆ ಸತ್ಯ ತಿಳಿದಿದೆ ಎಂದು ಹೇಳಿದರು.

Last Updated : Apr 7, 2022, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.