ETV Bharat / city

ಫ್ಲೆಕ್ಸ್​​​​​​​​​ನಲ್ಲಿ ಶಾಸಕರ ಪೋಟೋ ನಾಪತ್ತೆ: ಡಿಸಿ ವಿರುದ್ಧ ಶಾಸಕ ವೆಂಕಟರಮಣಯ್ಯ ಗರಂ - mla venkataramanaiah angry on dc for not putting photo in flex

ಸಚಿವ ಆರ್. ಅಶೋಕ್ ಇಂದು ದೊಡ್ಡಬಳ್ಳಾಪುರ ನಗರದಲ್ಲಿ ತಾಯಿ ಮಗು ಆಸ್ಪತ್ರೆಯ ಬಳಿ 100 ಅಕ್ಸಿಜನೇಟೆಡ್ ಬೆಡ್​ಗಳ ಮೇಕ್ ಶಿಫ್ಟ್ ಆಸ್ಪತ್ರೆ ಗುದ್ದಲಿ ಪೂಜೆ ನೆರವೇರಿಸಿದರು. ಆದರೆ ಕಾರ್ಯಕ್ರಮದ ಫ್ಲೆಕ್ಸ್​​​ನಲ್ಲಿ ಶಾಸಕ ಟಿ. ವೆಂಕಟರಮಣಯ್ಯನವ ಫೋಟೋ ಹಾಕಿರಲಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮದೆ ಪೋಟೋ ಹಾಕದಿದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ವೆಂಕಟರಮಣಯ್ಯ
ಶಾಸಕ ವೆಂಕಟರಮಣಯ್ಯ
author img

By

Published : May 31, 2021, 4:09 PM IST

ದೊಡ್ಡಬಳ್ಳಾಪುರ : ಆಸ್ಪತ್ರೆಯ ಗುದ್ದಲಿ ಪೂಜೆ ಕಾರ್ಯಕ್ರಮದ ಫ್ಲೆಕ್ಸ್​​ನಲ್ಲಿ ತಮ್ಮ ಫೋಟೋ ಇಲ್ಲದಿದ್ದಕ್ಕೆ ಶಾಸಕ ಟಿ. ವೆಂಕಟರಮಣಯ್ಯ ಜಿಲ್ಲಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆಯಿತು.

ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಆರ್. ಅಶೋಕ್ ನಗರದಲ್ಲಿ ಇಂದು ತಾಯಿ ಮಗು ಆಸ್ಪತ್ರೆಯ ಬಳಿ 100 ಅಕ್ಸಿಜನೇಟೆಡ್ ಬೆಡ್​ಗಳ ಮೇಕ್ ಶಿಫ್ಟ್ ಆಸ್ಪತ್ರೆಯ ಗುದ್ದಲಿ ಪೂಜೆ ನೆರವೇರಿಸಿದರು. ಆದರೆ ಕಾರ್ಯಕ್ರಮದ ಫ್ಲೆಕ್ಸ್​​​ನಲ್ಲಿ ಶಾಸಕ ಟಿ. ವೆಂಕಟರಮಣಯ್ಯನವರ ಫೋಟೋ ಹಾಕಿರಲಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಮ್ಮದೇ ಪೋಟೋ ಹಾಕದಿದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಫ್ಲೆಕ್ಸ್​​​​​​​​​ನಲ್ಲಿ ಶಾಸಕರ ಪೋಟೋ ನಾಪತ್ತೆ

ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಮತ್ತು ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಅವರು, ಫ್ಲೆಕ್ಸ್​​​​​ನಲ್ಲಿ ಫೋಟೋ ಯಾಕೆ ಹಾಕಿಲ್ಲ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರನ್ನ ತರಾಟೆಗೆ ತೆಗೆದುಕೊಂಡು.

ತಮಗೆ ಬೇಕಾದವರ ಭಾವಚಿತ್ರಗಳನ್ನ ಮಾತ್ರ ಹಾಕಿ, ಉಳಿದವರನ್ನು ಕಡೆಗಣಿಸಿದ್ದೀರಾ. ಅಧ್ಯಕ್ಷತೆ ನಾನು ವಹಿಸುತ್ತಿದ್ದರೂ ನನ್ನ ಹೆಸರು ಹಾಗೂ ಪೋಟೋ ಪ್ಲೆಕ್ಸ್ ನಲ್ಲಿ ಇಲ್ಲ ಎಂದು ವೆಂಕಟರಮಣಯ್ಯ ಅಸಮಾಧಾನ ಹೊರಹಾಕಿದರು.

ಡಿಸಿ ಕೆ. ಶ್ರೀನಿವಾಸ್ ಶಾಸಕರನ್ನ ಸಮಾಧಾನ ಪಡಿಸುವ ಯತ್ನ ನಡೆಸಿದ್ದಾರೆ. ಸದ್ಯ ಜನಪ್ರತಿನಿಧಿಗಳ ಫೋಟೋ ರಾಜಕೀಯ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಗಿದ್ದು ಮಾತ್ರ ನಿಜ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.