ETV Bharat / city

ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿ - MTB Nagaraj

ಹೊಸಕೋಟೆಯ ಹೊರಗೆ ಗರುಡಾಚಾರ್ ಪಾಳ್ಯದಿಂದ ಬಂದವರು ನಮ್ಮ ಸಂಪ್ರದಾಯವನ್ನು ಹಾಳು ಮಾಡಿದ್ದಾರೆ. ಶಾಸಕರ ಹಕ್ಕನ್ನು ಮುರಿದು, ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಪ್ರಸಿದ್ಧ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ ಎಂದು ಎಂಟಿಬಿ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದರು.

ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ
author img

By

Published : May 4, 2022, 9:39 AM IST

ಹೊಸಕೋಟೆ: ಶಾಸಕರನ್ನು ಬಿಟ್ಟು ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಹೊಸಕೋಟೆಯ ಪ್ರಸಿದ್ಧ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ನಿರ್ವಹಣೆ ಕೆಲಸ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದರು.

ಹೊಸಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಬೆಂಗಳೂರು ಕರಗದಂತೆ ಹೊಸಕೋಟೆ ಕರಗ ಮತ್ತು ರಥೋತ್ಸವಕ್ಕೆ ಇತಿಹಾಸವಿದೆ. ಇದನ್ನು 1906ರಲ್ಲಿ ಮೈಸೂರು ಒಡೆಯರು ಇಲ್ಲಿಗೆ ಬಂದು ಪ್ರಾರಂಭಿಸಿದ್ದರು. ನಾವು ಕಳೆದ ಐವತ್ತು ವರ್ಷಗಳಿಂದ ಸಂಪ್ರದಾಯವಾಗಿ ರಥೋತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ತಾಲೂಕಿನಲ್ಲಿ ಯಾರು ಶಾಸಕರಾಗಿರುತ್ತಾರೋ ಅವರು ಕರಗದ ನಿರ್ವಹಣೆ ಮಾಡಲು ಒಂದು ಸಮಿತಿ ಮಾಡಿ, ಅದಕ್ಕೆ ಒಬ್ಬ ಕನ್ವಿನೆಂಟ್‌ರನ್ನು ಆಯ್ಕೆ ಮಾಡಿ ಹಬ್ಬಕ್ಕೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಾರೆ. ಆದರೆ ಈಗ ಬೇರೆ ಎಲ್ಲಿಂದಲೋ ನಮ್ಮ ಕ್ಷೇತ್ರಕ್ಕೆ ಬಂದು ಸಂಪ್ರಾದಾಯಗಳನ್ನ ಮುರಿಯುತ್ತಿದ್ದಾರೆ ಎಂದು ಎಂಟಿಬಿ ವಿರುದ್ಧ ದೂರಿದರು.

ಹೊಸಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ

ಹೊಸಕೋಟೆಯ ಹೊರಗೆ ಗರುಡಚಾರ್ ಪಾಳ್ಯದಿಂದ ಬಂದವರು ನಮ್ಮ ಸಂಪ್ರದಾಯವನ್ನ ಹಾಳು ಮಾಡಿದ್ದಾರೆ. ತಾಲೂಕಿನ ಶಾಸಕರ ಹಕ್ಕನ್ನ ಮುರಿದು, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು, ಸರ್ಕಾರ ಮತ್ತು ಅಧಿಕಾರವನ್ನ ದುರುಪಯೋಗಪಡಿಸಿಕೊಂಡು, ಅಧಿಕಾರಿಗಳನ್ನ ಕೈ ಗೊಂಬೆಗಳಂತೆ ಇಟ್ಟುಕೊಂಡು ತಾಲೂಕಿನ ಸಂಪ್ರದಾಯದವನ್ನ ಹಾಳು ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್ ಅವರ ಹೆಸರು ಹೇಳದೇ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರ‌ ದುರುಪಯೋಗ ಮಾಡಿಕೊಂಡಿದ್ದರಿಂದ ಕೆಲವು ಲೋಪಗಳು ನಡೆದಿದೆ. ಇದನ್ನ ಸಹಿಸಿಕೊಂಡು ನಮ್ಮ ತಾಲೂಕಿಗೆ ಮತ್ತು ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ರಥೋತ್ಸವ ನಡೆಸಲು ನಾವು ಒಗ್ಗಟ್ಟಿನಿಂದ ಕೆಲಸ ಮಾಡಲು ತಿರ್ಮಾನಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳು ಜಲಾವೃತ, ಕೆಲವೆಡೆ ವಿದ್ಯುತ್ ಕಡಿತ, ಬೆಳೆಹಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.