ಬೆಂಗಳೂರು: ಎಲ್ಲರಿಗೂ ಅವರದ್ದೇಯಾದ ತಾಕತ್ ಇದ್ದೇ ಇರುತ್ತದೆ. ಈಗ ತಾಕತ್ತು ಬಗ್ಗೆ ಪ್ರಶ್ನೆ ಬೇಡ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಾಕತ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಡಿಕೆಶಿ ತಾಕತ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ತಾಕತ್ ಅನ್ನು ಇಲ್ಲಿ ಪ್ರದರ್ಶನ ಮಾಡೋದು ಬೇಡ. ಅವರು ತಾಕತ್ತನ್ನು ಕೆಲಸದಲ್ಲಿ ತೋರಿಸಲಿ ಎಂದು ಟಾಂಗ್ ನೀಡಿದರು. ಮೇಕೆದಾಟು ಪಾದಯಾತ್ರೆ ಮಾಡೇ ಮಾಡುತ್ತೇವೆ ಅಂತ ಹೇಳ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಮಾಡದವರು ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಒಂದು ಬದ್ಧತೆ ಇರಬೇಕು. ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಡಿಕೆಶಿ ಹೇಳಿಕೆ:
ನಾವು ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ. ಇದನ್ನು ನಿಲ್ಲಿಸೋಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇನ್ನೊಂದು ಜನ್ಮ ಹುಟ್ಟಿ ಬರಬೇಕು. ತಾಕತ್ ಇದ್ದರೆ ಬಂಧಿಸಲಿ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ಸವಾಲು ಹಾಕಿದ್ದರು.
ಇದನ್ನೂ ಓದಿ: Watch... ಮೇಕೆದಾಟು ಪಾದಯಾತ್ರೆ ಮಾಡಿಯೇ ತೀರುತ್ತೇವೆ, ತಾಕತ್ ಇದ್ದರೆ ಬಂಧಿಸಲಿ: ಡಿಕೆಶಿ ಗುಡುಗು