ETV Bharat / city

ಅಧಿಕಾರಿಗಳಿಂದ ಸರ್ಕಾರಿ ಭೂಮಿ ಕಬಳಿಕೆ: ಶಾಸಕ ಎ.ಟಿ.ರಾಮಸ್ವಾಮಿ ಗಂಭೀರ ಆರೋಪ - ವಿಧಾನಸಭೆಯಲ್ಲಿ ಭೂಕಬಳಿಕೆ ವಿಚಾರ

ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಕಬಳಿಕೆ ಮಾಡುತ್ತಿರುವ ಗಂಭೀರ ವಿಚಾರವನ್ನು ಶಾಸಕ ಎ.ಟಿ.ರಾಮಸ್ವಾಮಿ ವಿಧಾನಸಭೆಯ ಗಮನಕ್ಕೆ ತಂದರು.

mla-ramaswamy
ರಾಮಸ್ವಾಮಿ
author img

By

Published : Mar 7, 2022, 8:15 PM IST

ಬೆಂಗಳೂರು: ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಕಬಳಿಕೆ ಮಾಡುತ್ತಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 4 ದಿನಗಳಲ್ಲಿ ಜಮೀನು ಮಂಜೂರು ಮಾಡಲಾಗುತ್ತಿದೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ಆಗ್ರಹಿಸಿದರು.

ವಿಧಾನಸಭೆಯಲ್ಲಿ ನಿಯಮ 69ರ ಅಡಿ ಕಂದಾಯ ಇಲಾಖೆಯಲ್ಲಾಗುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ವಿಚಾರ ಪ್ರಸ್ತಾಪಿಸಿದ ಅವರು, ಬೆಂಗಳೂರು ‌ಪೂರ್ವ ತಾಲೂಕಿನ ಬಿದರಹಳ್ಳಿ ಗ್ರಾಮದ ಸರ್ವೇ ನಂಬರ್ 195 ರ ಜಮೀನು ವಿವಾದಕ್ಕೆ 23-6-20 ರಂದು ಮರುವಿಚಾರಣೆಗೆ ಕೊಟ್ಟು ಅದೇ ದಿನದಂದು ಆದೇಶ ನೀಡಲಾಗಿದೆ. ಜಮೀನು ಮೂಲತಃ ಮಂಜೂರಾದ ಜಮೀನಾಗಿದ್ದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜಮೀನು ಮಾರಾಟ ಮಾಡಲಾಗಿದೆ ಎಂದರು.

2 ದಿನಗಳಲ್ಲಿ ಆದೇಶ ಹೊರಡಿಸಿರುವುದು ಸಂಶಯದಾಯಕವಾಗಿದೆ. ಇದು ಭೂಗಳ್ಳರ ಪರವಾದ ಆದೇಶವಾಗಿದೆ. ಹಳೆಯ ಕೈ ಬರಹದ ಆಧಾರದಲ್ಲಿ‌ ಮುಂದಿನ ಕ್ರಮಕ್ಕೆ ವರದಿ ಮಾಡಿದ್ದಾರೆ. ಪೂರ್ವ ಕಚೇರಿಯಲ್ಲಿ ಮೂಲ ದಾಖಲೆ ಲಭ್ಯವಿಲ್ಲ ಎಂದು ಹೇಳಿದ್ದಾರೆ. ಪೂರ್ವ ತಾಲೂಕು ಕೆ.ಆರ್.ಪುರ ಹೋಬಳಿ, ಕ್ಯಾಲ್ಸನಳ್ಳಿ ಸರ್ವೇ ನಂಬರ್ 11 ರಲ್ಲಿ ನಾಲ್ಕು ಎಕರೆ ಜಮೀನನ್ನು ಕೂಡ ಇದೇ ರೀತಿ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ಈಗಲ್ಟನ್ ಯಾವ ರಾಜಕಾರಣಿಯದ್ದೋ?: ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​,​ ಭಾರೀ ಪ್ರಮಾಣದ ಜಮೀನನ್ನು ಪಡೆದುಕೊಂಡು ನಿರ್ಮಿಸಲಾಗಿರುವ ಈಗಲ್​ಟನ್​ ರೆಸಾರ್ಟ್​ ಯಾವ ರಾಜಕಾರಣಿಯದ್ದೋ ಗೊತ್ತಿಲ್ಲ. ರೆಸಾರ್ಟ್​ನ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಸರ್ಕಾರ ಈವರೆಗೂ ವಶಕ್ಕೆ ಪಡೆದಿಲ್ಲ ಎಂದು ಬಸನಗೌಡ ಯತ್ನಾಳ್ ವಾಗ್ದಾಳಿ ‌ನಡೆಸಿದರು.

ಗೋಮಾಳದ ಜಮೀನನ್ನು ನುಂಗುವುದೇ ವಕ್ಫ್ ಬೋರ್ಡ್​ನ ಕೆಲಸವಾಗಿದೆ. ನಾನು ಅನೇಕ ಬಾರಿ ಈ ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಯಾವೊಬ್ಬ ಅಧಿಕಾರಿಯೂ ಉತ್ತರಿಸಿಲ್ಲ. ಅಧಿಕಾರಿಗಳು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಸರ್ಕಾರಕ್ಕೆ ಕೀರ್ತಿ ತರುವ ಕೆಲಸವಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಖಳನಾಯಕ ಯಾರೆಂದು ಗೊತ್ತಾಗಲಿ: ಎ.ಟಿ.ರಾಮಸ್ವಾಮಿ ಅವರ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ಮಾಜಿ ಸ್ಪೀಕರ್​ ರಮೇಶ್​ಕುಮಾರ್, ಆಡಳಿತದಲ್ಲಿ ಒಬ್ಬ ಅಸಿಸ್ಟೆಂಟ್ ಕಮಿಷನರ್ ಇಷ್ಟೆಲ್ಲಾ ಮಾಡೋಕೆ ಸಾಧ್ಯಾನೇ ಇಲ್ಲ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದನ್ನು ಹೊರತರಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಬಿಡಿಎ ಅಧ್ಯಕ್ಷ ವಿಶ್ವನಾಥ್ ವಿಧಾನಸಭೆಗೆ ಗೈರಾಗಬಹುದೇ?: ವಿವರಣೆ ಕೇಳಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.