ETV Bharat / city

ಶಿವರಾಮ್ ಕಾರಂತ್ ಬಡಾವಣೆ ಭೂ ಸ್ವಾಧೀನ ವಿಚಾರ ಉತ್ತರ ಸಿಗದಿದ್ದರೆ ಪ್ರತಿಭಟನೆ: ಎಂ.ನಾರಾಯಣಸ್ವಾಮಿ ಎಚ್ಚರಿಕೆ - ಕಾಂಗ್ರೆಸ್ ಪಕ್ಷದ ಸಚೇತಕ ಎಂ.ನಾರಾಯಣಸ್ವಾಮಿ

ಡಾ.ಕೆ.ಶಿವರಾಮ್ ಕಾರಂತ್ ಬಡಾವಣೆ ಭೂ ಸ್ವಾಧೀನಕ್ಕೆ ರೈತರ ಆಕ್ಷೇಪ ವಿಚಾರವಾಗಿ ಸಿಎಂ ಉತ್ತರ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಸಚೇತಕ ಎಂ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

mla narayanaswamy shivaram karanth extension land
ಶಿವರಾಮ್ ಕಾರಂತ್ ಬಡಾವಣೆ ಭೂ ಸ್ವಾಧೀನ ವಿಚಾರ ಉತ್ತರ ಸಿಗದಿದ್ದರೆ ಪ್ರತಿಭಟನೆ: ನಾರಾಯಣಸ್ವಾಮಿ ಎಚ್ಚರಿಕೆ
author img

By

Published : Sep 21, 2021, 1:56 AM IST

ಬೆಂಗಳೂರು: ವಿಧಾನ ಪರಿಷತ್​ನ ಸೋಮವಾರ ಕಲಾಪ ಮುಕ್ತಾಯ ಸಂದರ್ಭ ಕಾಂಗ್ರೆಸ್ ಪಕ್ಷದ ಸಚೇತಕ ಎಂ.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಡಾ.ಕೆ.ಶಿವರಾಮ್ ಕಾರಂತ್ ಬಡಾವಣೆ ಭೂ ಸ್ವಾಧೀನಕ್ಕೆ ರೈತರ ಆಕ್ಷೇಪ ವಿಚಾರವಾಗಿ ನಿಯಮ 330ರ ಮೇರೆಗೆ ವಿಷಯ ಪ್ರಸ್ತಾಪಿಸಿದ ಎಂ.ನಾರಾಯಣಸ್ವಾಮಿ ಉತ್ತರ ನೀಡಲು ಸಿಎಂ, ಸಭಾನಾಯಕ ಇಲ್ಲದರಿಂದ ಗರಂ ಆದರು.

ತಾವು ಕಳೆದ ವಾರವೇ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದೆ. ಮುಂದಿನ ವಾರ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು, ಸಿಎಂ ಇದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ಗದ್ದಲ ಮಾಡುವುದಾಗಿ ಎಚ್ಚರಿಸಿದ್ದರು.

ಶುಕ್ರವಾರ ಮಧ್ಯಾಹ್ನ ಕಲಾಪ ಮುಕ್ತಾಯವಾಗುವ ಸಂದರ್ಭ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವಕಾಶ ನೀಡುವ ಭರವಸೆ ನೀಡಿದ್ದರು. ಆದರೆ ಇಂದು ಕಡೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡಿದಾಗ ಉತ್ತರ ನೀಡಲು ಸಿಎಂ ಇಲ್ಲವೇ ಸಭಾನಾಯಕರು ಇಲ್ಲದಿರುವುದಕ್ಕೆ ನಾರಾಯಣಸ್ವಾಮಿ ಗರಂ ಆದರು.

ಕಳೆದ ವಾರವೂ ಉತ್ತರ ಸಿಗದೆ ಮುಂದೂಡಿದ್ದೀರಿ, ಮತ್ತೆ ಇಂದು ಮುಂದೂಡಿಕೆ ಮಾಡುತ್ತಿದ್ದಿರಾ? ಸಿಎಂ ಬೊಮ್ಮಾಯಿ ಮೇಲ್ಮನೆಗೆ ಬರುವುದೇ ಇಲ್ಲ. ಮೇಲ್ಮನೆಗೆ ಗೌರವ ನೀಡಿ ಸದಸ್ಯರ ಪ್ರಶ್ನೆಗೆ ಸಿಎಂ ಉತ್ತರಿಸಬೇಕು.

ಮಂಗಳವಾರ ಪ್ರಶ್ನೆಗೆ ಸಿಎಂರಿಂದ ಉತ್ತರ ಸಿಗದಿದ್ದರೆ ಸದನದ ಬಾವಿಗಿಳಿದು ಪ್ರತಿಭಟಿಸುತ್ತೇನೆ ಎಂದು ನಾರಾಯಣಸ್ವಾಮಿ ಉತ್ತರಿಸಿದರು. ಸಿಎಂಗೆ ಈ ಬಗ್ಗೆ ಸೂಚಿಸುವುದಾಗಿ ತಿಳಿಸಿದ ಸಭಾಪತಿ ಹೊರಟ್ಟಿ ವಿಧಾನಪರಿಷತ್ ಕಲಾಪ ಮಂಗಳವಾರ ಬೆಳಗ್ಗೆ 10.30ಕ್ಕೆ ಮುಂದೂಡಿದರು.

ಇದನ್ನೂ ಓದಿ: ಪರಸ್ಪರ ಕಾಲೆಳೆದುಕೊಂಡ ಕಾಂಗ್ರೆಸ್- ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಸಲಹೆ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.