ಬೆಂಗಳೂರು: ಇವತ್ತು ಬೆಳಗ್ಗೆ ಸಾಗರಿದಿಂದ ರೋಗಿಯೊಬ್ಬರ ಪ್ಯಾರಾಲಿಸೀಸ್ ಆಗಿ ನಿಮ್ಹಾನ್ಸ್‌ಗೆ 7 ಗಂಟೆಗೆ ಕರೆದುಕೊಂಡು ಬರಲಾಗಿದೆ. 7 ಗಂಟೆಯಿಂದ 10 ಗಂಟೆಗೆ 1 ಬೆಡ್ ಕೊಡಿಸಲು ಪ್ರಯತ್ನಿಸಿದೆ. ಆದ್ರೆ ಆಸ್ಪತ್ರೆಯವರು ದಾಖಲು ಮಾಡಿಕೊಂಡಿಲ್ಲ. ಹೆಲ್ತ್ ಕಮಿಷನರ್ ಜೊತೆ ಮಾತಾಡಿದೆ. ಆರೋಗ್ಯ ಇಲಾಖೆ ಆಯುಕ್ತರು, ನಿಮ್ಹಾನ್ಸ್ ನಿರ್ದೇಶಕರಿಗೆ ಮಾತನಾಡಿದರೂ ದಾಖಲು ಮಾಡಿಕೊಂಡಿಲ್ಲ. ವೆಂಟಿಲೇಟರ್ ಇಲ್ಲ ಅಂತಾರೆ. ರಾಜ್ಯದಲ್ಲಿ ಇನ್ನೂ ವೆಂಟಿಲೇಟರ್ ಸಮಸ್ಯೆ ಇದಿಯಾ ಎಂದು ಪ್ರಶ್ನಿಸಿದರು.
ನಿಮ್ಹಾನ್ಸ್ ಒಂದು ಒಳ್ಳೆ ಸಂಸ್ಥೆ. ರೋಗಿಗೆ ಬ್ರೈನ್ ಹ್ಯಾಮರೇಜ್ ಆಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದವರು ಇದೀಗ ಹಾಲಿ ಸದಸ್ಯ. ತಮಗೆ ನೋಟಿಸ್ ಕೊಟ್ಟಿದ್ದಾಗ ಆರೋಗ್ಯ ಸಚಿವರನ್ನು ಕರೆಸಿದ್ದೀರಿ. ಇದೀಗ ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದೂಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಹಾಲಪ್ಪ ಸದನದಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಸುಧಾಕರ್, ನಿಮ್ಹಾನ್ಸ್ ಬಹಳ ಪ್ರತಿಷ್ಠಿತ ಸಂಸ್ಥೆ. ಕೇಂದ್ರ ಸರ್ಕಾರ ವಿಶೇಷವಾಗಿ ಅನುದಾನ ನೀಡುತ್ತೆ. ರಾಜ್ಯ ಸರ್ಕಾರವೂ ವರ್ಷದಲ್ಲಿ 70 ರಿಂದ 80 ಕೋಟಿ ಅದರ ನಿಮ್ಹಾನ್ಸ್ ನಿರ್ವಹಣೆಗೆ ಕೊಡುತ್ತದೆ. ನಿಮ್ಹಾನ್ಸ್‌ಗೆ ಒಳರೋಗಿಗಳು ಕೇವಲ ಕರ್ನಾಟಕದಿಂದ ಬರುವುದಿಲ್ಲ. ಇಡೀ ದಕ್ಷಿಣ ಭಾರತದಿಂದ ಬರುತ್ತಾರೆ.
ಅದು ಯಾವಾಗಲೂ ಪುಲ್ ಆಗಿರುತ್ತದೆ. ರೋಗಿಯ ಬಗ್ಗೆ ನನಗೆ ಮಾಹಿತಿ ಬಂದ ಕೂಡಲೇ ನಿರ್ದೇಶಕರಿಗೆ ಕರೆ ಮಾಡಿ ಪ್ರಯತ್ನ ಮಾಡಿದೆವು. ಅಲ್ಲಿದ್ದ ಎಲ್ಲಾ ರೋಗಿಗಳು ವೆಂಟಿಲೇಟರ್‌ನಲ್ಲಿದ್ದ ಕಾರಣ ರೋಗಿಯನ್ನು ಸೆಂಟ್ಸ್ ಜಾನ್‌ಗೆ ಶಿಫ್ಟ್ ಮಾಡಲಾಗಿದೆ ಎಂದರು.
ಪ್ಲೀಸ್ ವೆಂಟಿಲೇಟರ್ ವ್ಯವಸ್ಥೆ ಮಾಡಿ
ಕೇಂದ್ರ, ರಾಜ್ಯ ಸರ್ಕಾರದಿಂದ ನಡೆಸುತ್ತಿರುವ ನಿಮ್ಹಾನ್ಸ್‌ಗೆ 10 ವೆಂಟಿಲೇಟರ್ ಕೊಡಿ ಎಂದ ಹರತಾಳು ಹಾಲಪ್ಪ, ನನ್ನ ಹೆಂಡತಿ ಅವರ ಅಕ್ಕನನ್ನು ಕಳೆದುಕೊಂಡಿದ್ದೇನೆ. ವೆಂಟಿಲೇಟರ್ ಇಲ್ಲದೇ ನನ್ನ ಹೆಂಡತಿ ತಮ್ಮನನ್ನು ಕಳೆದುಕೊಂಡಿದ್ದೇನೆ. ಈಗ ಗ್ರಾಮ ಪಂಚಾಯಿತಿ ಸದಸ್ಯ ಸಾಯ್ತಾ ಇದ್ದಾನೆ ಎಂದು ಭಾವುಕರಾದರು.
ಈ ವೇಳೆ ಎದ್ದು ನಿಂತು ಮಾತನಾಡಿದ ಸಿಎಂ ಬೊಮ್ಮಾಯಿ, ಅತಿ ಹೆಚ್ಚು ವೆಂಟಿಲೇಟರ್ ಇರುವುದೇ ನಿಮ್ಹಾನ್ಸ್‌ನಲ್ಲಿ ಎಂದು ಸ್ಪಷ್ಟನೆ ನೀಡಿದರು. ನಿಮ್ಹಾನ್ಸ್ ನಿರ್ದೇಶನಕರೊಂದಿಗೆ ಮಾತನಾಡಿ ವೆಂಟಿಲೇಟರ್ ಕೊಡಿಸುವ ವ್ಯವಸ್ಥೆ ಮಾಡಿಸುತ್ತೇನೆ ಎಂದರು.