ETV Bharat / city

ಸೂರ್ಯ, ಚಂದ್ರರು ಇರೋವರೆಗೂ ನಿರಾಣಿ ಸಿಎಂ ಆಗಲ್ಲ: ಬಸನಗೌಡ ಪಾಟೀಲ್​ ಯತ್ನಾಳ್ - ಮರುಗೇಶ್​ ನಿರಾಣಿ ಸಿಎಂ ಬಗ್ಗೆ ಯತ್ನಾಳ್​ ಹೇಳಿಕೆ

ಸಿಎಂ ಆಗೋದಿಕ್ಕೆ ನಿರಾಣಿ ಸೂಟ್ ಹೊಲೆಸಿಕೊಂಡಿದ್ದಾರೆಂಬ ಯತ್ನಾಳ್​ರ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ನಾನು ಸೂಟ್ ಹೊಲೆಸಿಕೊಂಡಿದ್ದೇನೆ. ಇಲ್ಲದಿದ್ದರೆ ಸೂಟ್ ಇಲ್ಲದೇ ನಿತ್ಯ ಹೇಗೆ ಓಡಾಡಲಿ ಎಂದು ಯತ್ನಾಳ್​ ಹೇಳಿಕೆಗೆ ಸಚಿವರು ತಿರುಗೇಟು ನೀಡಿದರು..

yatnal-reaction-
ಪಾಟೀಲ್​ ಯತ್ನಾಳ್
author img

By

Published : Jan 21, 2022, 5:44 PM IST

ಬೆಂಗಳೂರು : ಸೂರ್ಯ, ಚಂದ್ರ ಇರುವವರೆಗೂ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುಡುಗಿದರೆ, ದೊಡ್ಡವರ ಬಗ್ಗೆ ಮಾತನಾಡಲ್ಲ ಎಂದು ಸಚಿವ ಮುರುಗೇಶ್​ ನಿರಾಣಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಮುರುಗೇಶ್ ನಿರಾಣಿ ಸೂಟು, ಬೂಟು ಹೊಲಿಸಿಕೊಂಡಿದ್ದರು. ಈಗ ನಿರಾಣಿಯವರ ಸೂಟು, ಬೂಟು ಮಾರಾಟಕ್ಕಿಡಲಾಗಿದೆ.

ಅಮೆರಿಕಾದಲ್ಲಿ ಇವುಗಳನ್ನು ಹರಾಜಿಗೆ ಇಡುತ್ತಾರೆ. ಯಾರಾದ್ರೂ ಸಿಎಂ ಆಗಬೇಕು ಅಂದುಕೊಂಡಿದ್ದರೆ ಸೂಟು, ಬೂಟು ಖರೀದಿಸಬಹುದು ಎಂದು ಸಚಿವ ನಿರಾಣಿ ವಿರುದ್ಧ ಯತ್ನಾಳ್ ವ್ಯಂಗ್ಯವಾಡಿದರು.

ಇದೇ ವೇಳೆ ಸೂರ್ಯ, ಚಂದ್ರರು ಇರೋವರೆಗೂ ಸಚಿವ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಯತ್ನಾಳ್ ಭವಿಷ್ಯ ನುಡಿದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ನಿರ್ಗಮಿಸುತ್ತಿದ್ದಂತೆ ಸಿಎಂ ಗೃಹ ಕಚೇರಿಗೆ ಆಗಮಿಸಿದ ಸಚಿವ ಮುರುಗೇಶ್​ ನಿರಾಣಿ ಅವರಲ್ಲಿ ಯತ್ನಾಳ್​ ಹೇಳಿಕೆಯ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಗರಂ ಆದ ಸಚಿವರು, ಯತ್ನಾಳ್ ತುಂಬಾ ದೊಡ್ಡವರು. ದೊಡ್ಡವರ ಬಗ್ಗೆ ನಾನು ಮಾತಾಡಲ್ಲ. ಸಿಎಂ ಆಗೋದು ಬಿಡೋದು ನನ್ನ ಕೈಯಲ್ಲಿ ಇಲ್ಲ ಎಂದು ಸಿಟ್ಟಿಂದಲೇ ಪ್ರತಿಕ್ರಿಯೆ ನೀಡಿದರು.

ಸಿಎಂ ಆಗೋದಿಕ್ಕೆ ನಿರಾಣಿ ಸೂಟ್ ಹೊಲೆಸಿಕೊಂಡಿದ್ದಾರೆಂಬ ಯತ್ನಾಳ್​ರ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ನಾನು ಸೂಟ್ ಹೊಲೆಸಿಕೊಂಡಿದ್ದೇನೆ. ಇಲ್ಲದಿದ್ದರೆ ಸೂಟ್ ಇಲ್ಲದೇ ನಿತ್ಯ ಹೇಗೆ ಓಡಾಡಲಿ ಎಂದು ಯತ್ನಾಳ್​ ಹೇಳಿಕೆಗೆ ಸಚಿವರು ತಿರುಗೇಟು ನೀಡಿದರು.

ಇದನ್ನೂ ಓದಿ: ಜನ ಮೈಮರೆತರೆ ಲಾಕ್​​​​ಡೌನ್ ಅನಿವಾರ್ಯವಾಗಬಹುದು : ಆರಗ ಜ್ಞಾನೇಂದ್ರ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.