ETV Bharat / city

ಕಾಂಗ್ರೆಸ್‌ ಪಾದಯಾತ್ರೆ ಮುಂದುವರೆಸಿದ್ರೇ ಯಾರೂ ಇರುತ್ತಿರಲಿಲ್ಲ.. ಎಲ್ಲರೂ ದೇವರ ಬಳಿ ಹೋಗ್ತಿದ್ದರು.. ಯತ್ನಾಳ್

ಕೂಡಲಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ. ಹರಿಹರ ಹಾಗೂ 3ನೇ ಪೀಠ ನಿರಾಣಿ ಪೀಠಗಳು. ಕೂಡಲಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ..

yatnal-reaction
ಯತ್ನಾಳ್​ ಸುಳಿವು
author img

By

Published : Jan 21, 2022, 6:06 PM IST

ಬೆಂಗಳೂರು : ಬದಲಾವಣೆ ಜಗದ ನಿಯಮ. ಯುಗಾದಿ ವೇಳೆಗೆ ಬದಲಾವಣೆ ಖಚಿತ. ಬದಲಾವಣೆಯಾಗದಿದ್ದಲ್ಲಿ ಅದನ್ನು ಯುಗಾದಿ, ಸಂಕ್ರಮಣ ಎಂದು ಯಾಕೆ ಕರೆಯಬೇಕು ಎಂದು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯುಗಾದಿಗೆ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ.

ಸಿಎಂ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಿಲ್ಲಿಗೆ ಹೋಗುವ ಚಟ ಇದೆ. ಹಳೆಯ ಸ್ನೇಹಿತರಿದ್ದಾರೆ. ಅವರೊಂದಿಗೆ ಭೇಟಿ ಮಾಡಿ ಬರುತ್ತೇವೆ. ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ. ಒಳ್ಳೆಯ ಆಡಳಿತ ನೀಡಲಿ ಎಂದು ಸಂಪುಟ ವಿಸ್ತರಣೆ ಕುರಿತು ಯತ್ನಾಳ್ ಹೇಳಿದರು.

ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ವಿಜಯೇಂದ್ರ ಅವರಂಥ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಯುಗಾದಿ ಹೊತ್ತಿಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ ಎಂದರು.

ನಿರಾಣಿ ಪೀಠ : ಕೂಡಲಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ. ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ. ಹರಿಹರ ಹಾಗೂ 3ನೇ ಪೀಠ ನಿರಾಣಿ ಪೀಠಗಳು. ಕೂಡಲಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ ಎಂದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಿಎಂಗೆ ಅಭಿನಂದನೆ : ವೀಕೆಂಡ್ ಕರ್ಪ್ಯೂ ತೆರವು ಮಾಡಿದ್ದಕ್ಕೆ ಸಿಎಂ ಹಾಗೂ ಸಚಿವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿನಂದನೆ ಸಲ್ಲಿಸಿದರು. ಕೊರೊನಾ ವಾರಾಂತ್ಯದಲ್ಲಿ ಮಾತ್ರ ಬರುವುದಿಲ್ಲ. ಇದನ್ನು ಕೆಲವರು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು ಎಂದರು.

ಸರ್ಕಾರದ ಕಾನೂನು ಪ್ರಕಾರ ರಾತ್ರಿ ವೇಳೆ ಜನರು ಓಡಾಡಬಾರದು. ಕಾಂಗ್ರೆಸ್ ಪಾದಯಾತ್ರೆಗೆ ಅವಕಾಶ ಕೊಡಬಾರದಿತ್ತು. ಒಂದು ವೇಳೆ ಕಾಂಗ್ರೆಸ್​ನವರು ಪಾದಯಾತ್ರೆ ಇನ್ನೂ ಮುಂದುವರೆಸಿದ್ದರೆ ಯಾರೂ ಇರುತ್ತಿರಲಿಲ್ಲ. ದೇವರ ಹತ್ತಿರ ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸೂರ್ಯ, ಚಂದ್ರರು ಇರೋವರೆಗೂ ನಿರಾಣಿ ಸಿಎಂ ಆಗಲ್ಲ: ಬಸನಗೌಡ ಪಾಟೀಲ್​ ಯತ್ನಾಳ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.