ETV Bharat / city

'ಮಿಷನ್-2020': ಘನತ್ಯಾಜ್ಯ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್ - ಬಿಬಿಎಂಪಿ ಘನತ್ಯಾಜ್ಯ ಸಮಸ್ಯೆ ನಿವಾರಣೆ

ಕಸದ ಸಮಸ್ಯೆಗೆ ಬ್ರೇಕ್ ಹಾಕುವ ಬಗ್ಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಬೆಂಗಳೂರು ಮಿಷನ್-2020ಕ್ಕೆ ಸಂಬಂಧಿಸಿದಂತೆ ನಾಗರಿಕರ ಜೊತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು.

mission-2020-bbmp-master-plan-for-solid-waste-solutions
ಬಿಬಿಎಂಪಿ
author img

By

Published : Dec 26, 2020, 8:25 PM IST

ಬೆಂಗಳೂರು: ಮಿಷನ್-2020ಕ್ಕೆ ಸಂಬಂಧಿಸಿದಂತೆ ನಾಗರಿಕರ ಭಾಗವಹಿಸುವಿಕೆಯನ್ನೂ ಬಳಸಿಕೊಂಡು ಕಸದ ಸಮಸ್ಯೆಗೆ ಬ್ರೇಕ್ ಹಾಕುವ ಬಗ್ಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ನಾಗರಿಕರ ಜೊತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು.

ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಲ್ಲಿ 750ರಿಂದ 1000 ಮನೆಗೊಂದರಂತೆ 4,200 ಬ್ಲಾಕ್​ಗಳನ್ನು ರಚಿಸಲಾಗಿದೆ. ಈ ಪೈಕಿ ಬ್ಲಾಕ್ ಮಟ್ಟದಲ್ಲಿ ಶುಚಿ ಮಿತ್ರನನ್ನು ಗುರುತಿಸುವುದು, ಲಿಂಕ್ ವರ್ಕರ್ಸ್​ಗಳ ಮೂಲಕ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವುದು, ಪ್ರತಿ ವಾರ್ಡ್ ಮಟ್ಟದಲ್ಲಿ ಮಾರ್ಷಲ್, ಕಿರಿಯ ಆರೋಗ್ಯ ಪರಿವೀಕ್ಷಕ ಹಾಗೂ ವಾರ್ಡ್​ಗೊಬ್ಬ ಸ್ವಯಂ ಸೇವಕರ ಮೂಲಕ ಅರಿವು ಮೂಡಿಸುವುದು, ಅದಲ್ಲದೆ ವಲಯಕ್ಕೊಬ್ಬ ಸ್ವಯಂ ಸೇವಕರನ್ನು ಗುರುತಿಸುವುದು.

ಓದಿ-ಜಾಮೀನು ಹೊಸ ಅಪರಾಧಗಳಿಗೆ ನೀಡುವ ಲೈಸನ್ಸ್ ಅಲ್ಲ: ಆರೋಪಿಗಳಿಗೆ ಹೈಕೋರ್ಟ್ ಎಚ್ಚರಿಕೆ!

ಜೊತೆಗೆ ಘನತ್ಯಾಜ್ಯದ ಬಗ್ಗೆ ಸೂಕ್ತ ತರಬೇತಿ ನೀಡಲು ವಿಧಾನಸಭಾ ಕ್ಷೇತ್ರಕ್ಕೊಬ್ಬ ಮಾಸ್ಟರ್ ಟ್ರೈನರ್ ಗುರುತಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು. ಪ್ರಮುಖವಾಗಿ ಸ್ಥಳೀಯ ಸಾರ್ವಜನಿಕರು, ಸ್ಥಳಿಯ ನಾಗರಿಕ ಸಂಸ್ಥೆಗಳು, ಆರ್.ಡಬ್ಲೂ.ಎ.ಗಳನ್ನು ಇದರಲ್ಲಿ ಭಾಗಿಯಾಗಿಸಿಕೊಂಡು ಕಸದ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಿ, ಸ್ವಚ್ಛ ಬೆಂಗಳೂರು ಮಾಡಲು ಕ್ರಮ ವಹಿಸಬೇಕೆಂದು ಆಡಳಿತಗಾರರಾದ ಗೌರವ್ ಗುಪ್ತಾ ಹಾಗೂ ವಿಶೇಷ ಆಯುಕ್ತ ರಂದೀಪ್ ಸಭೆಯಲ್ಲಿ ತಿಳಿಸಿದರು.

ಸದ್ಯ ಬೊಮ್ಮನಹಳ್ಳಿ ವಲಯದ ಹೆಚ್.ಎಸ್.ಆರ್. ಲೇಔಟ್​​ನಲ್ಲಿ ಒಂದು ಕಲಿಕಾ ಕೇಂದ್ರವಿದ್ದು, ಎಲ್ಲಾ ವಲಯದಲ್ಲೊಂದು ಕಲಿಕಾ ಕೇಂದ್ರ ಸ್ಥಾಪನೆ ಮಾಡಿ ಕಸದಿಂದ ಗೊಬ್ಬರ ತಯಾರಿಸುವ, ಕಸ ವಿಂಗಡಣೆ ಮಾಡುವ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.