ಬೆಂಗಳೂರು: ಮಹಾನಗರವನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಲಾಕ್ಡೌನ್ ಬೇಕಾ ಬೇಡವಾ ಎಂಬ ವಿಷಯವಾಗಿ ಇಂದು ಸಿಎಂ ತೀರ್ಮಾನಿಸುತ್ತಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮಹಾಲಕ್ಷ್ಮಿ ಲೇಔಟ್ನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಜಿಲ್ಲೆಗಳಲ್ಲಿ ಲಾಕ್ಡೌನ್ ಅವಶ್ಯಕತೆ ಇಲ್ಲ ಅನಿಸತ್ತೆ. ಆದ್ರೆ ಅಂತಿಮ ತೀರ್ಮಾನ ಸಿಎಂ ತಗೋತಾರೆ. ಈಗ ಬೆಂಗಳೂರಲ್ಲಿ ಮಾಡಿರುವ ಲಾಕ್ಡೌನ್ ಎರಡನೇ ಹಂತದಲ್ಲಿ ಆಗಿರೋದು. ಕೊವೀಡ್ ಚೈನ್ ಲಿಂಕ್ ಕಟ್ ಮಾಡುವ ಸಲುವಾಗಿ ಈ ನಿರ್ಧಾರ ಮಾಡಿದ್ದೇವೆ ಎಂದರು.
ನಮಗೆ ಜನರ ಸಹಕಾರ ತುಂಬಾ ಅವಶ್ಯಕ. ಅವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯ. ಹತ್ತು ವರ್ಷದ ಮಕ್ಕಳು, ಎಪ್ಪತ್ತು ವರ್ಷ ದಾಟಿದವರು ಮನೆಯಲ್ಲೇ ಇದ್ದು ಸಹಕಾರ ನೀಡಿ. ಅನಾರೋಗ್ಯ ಪೀಡಿತರು ಮನೆಯಲ್ಲೇ ಇದ್ದರೆ ಉತ್ತಮ ಎಂದು ಸಚಿವ ಸುರೇಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.