ETV Bharat / city

ಒಮಿಕ್ರಾನ್‌ ಸೋಂಕಿತರ ಸಂಪರ್ಕಿತರೆಲ್ಲರೂ 2 ಡೋಸ್ ಲಸಿಕೆ ಪಡೆದಿದ್ದಾರೆ: ಸಚಿವ ಸುಧಾಕರ್

ಒಮಿಕ್ರಾನ್​ ಸೋಂಕಿತರ ಸಂಪರ್ಕಿತರೆಲ್ಲರೂ ಎರಡೂ ಡೋಸ್​ ವ್ಯಾಕ್ಸಿನ್​ ಪಡೆದಿದ್ದು ಅವರಿಗೆ ವೈರಸ್​ ಹರಡಿರುವ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ, ಎರಡು ಲಸಿಕೆ ಪಡೆದವರಿಗೆ ಈ ವೈರಸ್​ ಹರಡುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದರು.

minister-sudhakar-statement-on-omicron
ಸಚಿವ ಸುಧಾಕರ್
author img

By

Published : Dec 6, 2021, 1:06 PM IST

Updated : Dec 6, 2021, 1:28 PM IST

ಬೆಂಗಳೂರು: ಒಮಿಕ್ರಾನ್ ಕುರಿತು ಬೇರೆ ರಾಜ್ಯದ ವರದಿ ಬಂದಿದ್ದು, ನಮ್ಮ ರಾಜ್ಯದಲ್ಲಿ ಸದ್ಯ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ‌. ಆದರೆ ಸೋಂಕಿತ ಸಂಪರ್ಕಿತರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಸಮಸ್ಯೆ ತೀವ್ರತೆ ಕಂಡು ಬಂದಿಲ್ಲ. ಅವರೆಲ್ಲರೂ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

ಕೋಲಾರ ಪ್ರವಾಸಕ್ಕೂ ಮುನ್ನ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಬೌರಿಂಗ್ ಆಸ್ಪತ್ರೆಯ ನಿರ್ದೇಶಕರೊಂದಿಗೆ ಸಂಪರ್ಕದಲ್ಲಿದ್ದು, ಅವರ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಎಲ್ಲ ಸಂಪರ್ಕಿತರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ‌. ಈ ಮೂಲಕ ಲಸಿಕೆ ಪಡೆದವರಲ್ಲಿ ರೋಗದ ತೀವ್ರತೆ ಇರೋಲ್ಲ ಅನ್ನೋದಕ್ಕೆ ಇದೇ ಉತ್ತಮ ಉದಾಹರಣೆ. ಕೇವಲ ಒಂದು ಡೋಸ್ ಲಸಿಕೆ ಪಡೆದರೆ ರೋಗ ನಿರೋಧಕ ಶಕ್ತಿ ಬರೋದಿಲ್ಲ, ಎರಡು ಡೋಸ್ ತೆಗೆದುಕೊಂಡಾಗ ಮಾತ್ರ ಸಂಪೂರ್ಣ ವ್ಯಾಕ್ಸಿನೇಷನ್‌ ಆಗುವುದು ಎಂದು ಸಚಿವರು ಹೇಳಿದರು.

ಒಮಿಕ್ರಾನ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ:

ಒಮಿಕ್ರಾನ್ ಕುರಿತು ಕೇಂದ್ರದಿಂದ ಹೆಚ್ಚುವರಿ ನಿರ್ದೇಶನ ನೀಡಲಾಗಿದೆಯೇ ಎಂಬ ಕುರಿತು ಮಾತಾಡಿದ ಸಚಿವರು, ಒಮಿಕ್ರಾನ್​ಗೆ ದೊಡ್ಡ ವ್ಯಾಖ್ಯಾನ ಕೊಡುವಂತಹ/ಆತಂಕಪಡುವ ಅಗತ್ಯವಿಲ್ಲ. ಯಾಕೆಂದರೆ​ ಪರಿಣಾಮಕಾರಿಯಾಗಿದ್ದ ಡೆಲ್ಟಾ ಸೋಂಕನ್ನು ಎದುರಿಸಿದ್ದೇವೆ. ಡೆಲ್ಟಾ ರೂಪಾಂತರಿಗೆ ಹೋಲಿಸಿದರೆ ಒಮಿಕ್ರಾನ್ ಹರಡುವಿಕೆಯಲ್ಲಿ ಮುಂದಿದೆ ಅನ್ನೋದು ಬಿಟ್ಟರೆ ತೀವ್ರತೆ ಎಲ್ಲೂ ನೋಡಿಲ್ಲ. ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾದಲ್ಲಿ ಗಮನಿಸಿದಾಗ ಒಮಿಕ್ರಾನ್ ತೀವ್ರತೆ ಏನೂ ಇಲ್ಲ. ಇದರ ಲಕ್ಷಣಗಳು ಮೃದುವಾಗಿದೆ‌. ಹೀಗಾಗಿ ಆತಂಕ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದರು.

ವಿಮಾನ ಹಾರಾಟಕ್ಕೆ ನಿರ್ಬಂಧ:

ಅಂತಾರಾಷ್ಟ್ರೀಯ ವಿಮಾನ ಓಡಾಟ ಕೇಂದ್ರ ಸರ್ಕಾರದ ನಿರ್ಣಯವಾಗಿದ್ದು, ಅದನ್ನು ನಾವು ನಿರ್ಬಂಧ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಕುರಿತು ಅಧ್ಯಯನ ಮಾಡ್ತಿದ್ದು, ಯಾವ ರೀತಿ ಕ್ರಮ ಕೈಗೊಳ್ಳಬೇಕೆಂದು ವರದಿ ಬರಲಿದೆ. ರೂಪಾಂತರಿ ಪ್ರಭಾವ ಬೀರುತ್ತಾ ಎಂಬುದರ ವರದಿ ಬಂದ ನಂತರವೇ ಕ್ರಮ ಕೈಗೊಳ್ಳಲು ಸಾಧ್ಯ, ಅಲ್ಲಿಯವರೆಗೆ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದರು.

ಮೂರನೇ ಅಲೆ ಭೀತಿ:

ಯಾವುದೇ ಸಾಂಕ್ರಾಮಿಕ ರೋಗದ ಇತಿಹಾಸವನ್ನು ನೋಡಿದಾಗ ಎರಡನೇ ಅಲೆ ದೊಡ್ಡ ಪ್ರಮಾಣದಲ್ಲಿ ಇರುತ್ತೆ‌. ಮೂರು ಮತ್ತು ನಾಲ್ಕನೇ ಅಲೆ ಕಡಿಮೆ ಪ್ರಮಾಣದಲ್ಲಿ ಇರುತ್ತೆ. ಇದು ಹಿಂದಿನ ಸಾಂಕ್ರಾಮಿಕ ರೋಗಗಳು ಬಂದಾಗ ಇದೇ ರೀತಿಯಲ್ಲಿ ಇದ್ದವು. ಹೀಗಾಗಿ ಆತಂಕ ಪಡುವುದು ಬೇಡ ಅಂತ ತಿಳಿಸಿದರು.

ಮಕ್ಕಳಲ್ಲಿ ಸೋಂಕು:

ಮಕ್ಕಳಲ್ಲಿ ರೋಗದ ತೀವ್ರತೆ ಕಂಡು ಬಂದಿಲ್ಲ‌. ಎರಡನೇ ಅಲೆಯಲ್ಲಿ ಡೆಲ್ಟಾ ಸೋಂಕು ಕಂಡು ಬಂದಾಗ, ಅಷ್ಟು ಪರಿಣಾಮ ಬೀರಲಿಲ್ಲ. ಡೆಲ್ಟಾ ಹೋಲಿಕೆ ಮಾಡಿದರೆ ಒಮಿಕ್ರಾನ್ ತೀವ್ರತೆ ಕಡಿಮೆ, ಒಂದು ವೇಳೆ ಮಕ್ಕಳಿಗೆ ಸೋಂಕು ಬಂದರು ಪರಿಣಾಮಕಾರಿಯಾಗಿ ಇರೋಲ್ಲ ಎಂದು ತಜ್ಞರು, ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ ಎಂದರು.

Last Updated : Dec 6, 2021, 1:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.