ETV Bharat / city

ಲಾಕ್​ಡೌನ್ ಸಡಿಲಿಕೆ ದುರ್ಬಳಕೆಯಾದರೆ ಮತ್ತೆ ಕಠಿಣ ಕ್ರಮ: ಸುಧಾಕರ್ ಎಚ್ಚರಿಕೆ - minister sudhakar,

ರಾಜ್ಯದಲ್ಲಿ ಕೊರೊನಾ ಕೇಸ್​ಗಳು ಸಂಖ್ಯೆ ಕಡಿಮೆಯಾದ ಹಿನ್ನೆಲೆ ಲಾಕ್​ಡೌನ್ ಸಡಿಲಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಅನ್​ಲಾಕ್​ ದುರುಪಯೋಗ ಆದ್ರೆ ಮತ್ತೆ ಕಠಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್​ ಎಚ್ಚರಿಕೆ ರವಾನಿಸಿದ್ದಾರೆ.

ಸಚಿವ ಸುಧಾಕರ್
ಸಚಿವ ಸುಧಾಕರ್
author img

By

Published : Jun 10, 2021, 10:20 PM IST

Updated : Jun 10, 2021, 10:53 PM IST

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ಜೂನ್ 14 ರಿಂದ 21ರ ವರೆಗೆ ಅಲ್ಪ ಪ್ರಮಾಣದ ವಿನಾಯಿತಿ ನೀಡುತ್ತಿದ್ದು, ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಪಾಸಿಟಿವಿಟಿ ದರ ಹೆಚ್ಚಳಕ್ಕೆ ಕಾರಣವಾದಲ್ಲಿ ಮತ್ತೆ ಕಠಿಣ ಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಪಾಸಿಟಿವಿಟಿ ದರ ಹೆಚ್ಚಿರುವ 11 ಜಿಲ್ಲೆ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಿರ್ಬಂಧದಲ್ಲಿ ಅಲ್ಪ ಪ್ರಮಾಣದ ಸಡಿಲಿಕೆ ಮಾಡಲಾಗುತ್ತಿದೆ. ಸಡಿಲಿಕೆ ಜನತೆಯ ಅನುಕೂಲಕ್ಕಾಗಿ ಮಾಡಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಜನರು ಮನಸ್ಸೋಇಚ್ಛೆ ವರ್ತಿಸಿದಲ್ಲಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸದೇ ಹೋದಲ್ಲಿ ಮತ್ತೆ ಲಾಕ್ ಡೌನ್ ಕಠಿಣ ಕ್ರಮ ಜಾರಿ ತರಬೇಕಾಗಲಿದೆ. ಇದನ್ನು ಮನಗಂಡು ಜನರು ಸಡಿಲಿಕೆ ವೇಳೆ ಸೋಂಕು ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಲಾಕ್​ಡೌನ್ ಸಡಿಲಿಕೆ ದುರ್ಬಳಕೆಯಾದರೆ ಮತ್ತೆ ಕಠಿಣ ಕ್ರಮ: ಸುಧಾಕರ್ ಎಚ್ಚರಿಕೆ

ಸದ್ಯ ಜೂನ್ 21 ರವರೆಗೆ ಅನ್ವಯವಾಗುವಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ನಂತರ ಮತ್ತೆ ಸಭೆ ನಡೆಸಿ ಮುಂದಿನ ಅನ್​ಲಾಕ್ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.

(11 ಜಿಲ್ಲೆಗಳಲ್ಲಿ ಲಾಕ್​​ಡೌನ್ ಮುಂದುವರಿಕೆ​...ಉಳಿದೆಡೆ ಬೆಳಗ್ಗೆ 6 ರಿಂದ 2 ಗಂಟೆವರೆಗೆ ಅನ್​​​ಲಾಕ್​​ ಜಾರಿ)

Last Updated : Jun 10, 2021, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.