ETV Bharat / city

'RSS ದೇಶದ್ರೋಹದ ಕೆಲಸ ಮಾಡಿಲ್ಲ';ಹೆಚ್‌ಡಿಕೆ ಹೇಳಿಕೆಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು - ಬೆಂಗಳೂರು

ಆರ್‌ಎಸ್‌ಎಸ್‌ ಹೇಗೆ ಕೆಲಸ ಮಾಡುತ್ತದೆ, ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುತ್ತದೆ ಎಂದು ತಿಳಿದು ಆಘಾತವಾಯಿತು ಎಂಬ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಂಡು ನಂತರ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸತ್ಯವನ್ನು ತಿಳಿದುಕೊಂಡು ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

minister shobha karandlaje reaction on hd kumaraswamy statement about rss
'ಆರ್‌ಎಸ್‌ಎಸ್ ದೇಶದ್ರೋಹದ ಕೆಲಸ ಮಾಡಿಲ್ಲ'; ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು
author img

By

Published : Oct 6, 2021, 3:18 PM IST

ಬೆಂಗಳೂರು: ಆರ್‌ಎಸ್‌ಎಸ್ ಒಂದು ರಾಷ್ಟ್ರೀಯ ಸಂಘಟನೆ, ದೇಶಭಕ್ತ ಸಂಘಟನೆ. ಆರ್‌ಎಸ್‌ಎಸ್ ನಿಷೇಧಿಸಲು ಹಲವಾರು ನಾಯಕರು ಪ್ರಯತ್ನಪಟ್ಟರು. ಆದರೆ, ಅವರು ಯಶಸ್ವಿಯಾಗಲಿಲ್ಲ. ಆರ್‌ಎಸ್‌ಎಸ್‌ ಮೇಲೆ ದೇಶದ್ರೋಹದ ಆರೋಪ ಇಲ್ಲ. ದೇಶಭಕ್ತಿಯನ್ನು ಹೆಚ್ಚಿಸುವ ಕೆಲಸ, ಯುವಕರನ್ನು ಈ ಮಾದರಿಯಲ್ಲಿ ತಯಾರು ಮಾಡುವ ಒಂದು ಸಂಘಟನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕಂದ್ಲಾಜೆ ತಿರುಗೇಟು ನೀಡಿದ್ದಾರೆ.

'ಆರ್‌ಎಸ್‌ಎಸ್ ದೇಶದ್ರೋಹದ ಕೆಲಸ ಮಾಡಿಲ್ಲ'; ಮಾಜಿ ಸಿಎಂ ಹೆಚ್‌ಡಿಕೆ ಹೇಳಿಕೆಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು

ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳಬೇಕು. ತಿಳಿದು ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಸತ್ಯ ತಿಳಿದುಕೊಂಡು ನಂತರ ಮಾತನಾಡಲಿ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್ ಸಂಘ ದೇಶದ್ರೋಹ ಮಾಡಿಲ್ಲ, ಗಡಿಯಲ್ಲಿ ಅಥವಾ ದೇಶದಲ್ಲಿ ದ್ರೋಹ ಮಾಡಿದ ಉದಾಹರಣೆ ಇಲ್ಲ. ದೇಶದ ಜನ, ಸುಪ್ರೀಂಕೋರ್ಟ್ ಸಂಘಟನೆಯನ್ನು ಒಪ್ಪಿಕೊಂಡಿದ್ದಾರೆ. ಒಳ್ಳೆ ಕೆಲಸ ಮಾಡುವವರಿಗೆ ವಿರೋಧ ಬರುವುದು ನಿಜ. ಕುರ್ಚಿಯ ಆಸೆಗಾಗಿ ಮಾತನಾಡಿದರೆ ಉತ್ತರ ಹೇಳಲ್ಲ. ದೇಶದ ಬಗ್ಗೆ ಕೆಲಸ ಮಾಡಿದರೆ ವಿರೋಧ ಬರುವುದು ನಿಜ.

ಇದು ಮಣ್ಣಿನ ಗುಣವೂ ಹೌದು. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ. ಪುರಾಣ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ಕ್ಷುಲ್ಲಕ ಹೇಳಿಕೆ ಕೊಡುವವರಿಗೆ ಉತ್ತರ ನೀಡಲು ಆಗಲ್ಲ. ಬುದ್ಧಿವಂತರು ಯುಪಿಎಸ್‌ಸಿ ಸೇರಿದರೆ ದೇಶ ದ್ರೋಹ ಹೇಗೆ ಆಗುತ್ತದೆ. ಬುದ್ಧಿವಂತರು ಆರ್‌ಎಸ್‌ಎಸ್‌ಗೆ ಬರಬಾರದು ಎಂದಿಲ್ಲ. ಮೊದಲು ಅವರು ಆರ್‌ಎಸ್‌ಎಸ್ ಬಗ್ಗೆ ಅಧ್ಯಯನ ಮಾಡಬೇಕು ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ ಬಿಡದಿಯಲ್ಲಿ ಆರ್‌ಎಸ್‌ಎಸ್ ಬಗ್ಗೆ ಓದಿ ಈ ಸಂಘಟನೆ ಹೇಗೆ ಕೆಲಸ ಮಾಡುತ್ತದೆ, ಚುನಾಯಿತ ಸರ್ಕಾರಗಳನ್ನು ಹೇಗೆ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುತ್ತದೆ ಎಂದು ತಿಳಿದು ಆಘಾತವಾಯಿತು ಎಂಬ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ದೇಶದಲ್ಲಿ ಇರೋದು ಬಿಜೆಪಿ ಅಲ್ಲ..ಆರ್​ಎಸ್​ಎಸ್​ ಸರ್ಕಾರ: ಹೆಚ್​ಡಿಕೆ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.