ETV Bharat / city

ಲಾಕ್​​​ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ: ಸಚಿವ ಆರ್. ಅಶೋಕ್ ಸ್ಪಷ್ಟನೆ - ಕರ್ನಾಟಕ ಕೋವಿಡ್​ ಪ್ರಮಾಣ

ರಾಜ್ಯದ ಆರೂವರೆ ಕೋಟಿ ಜನರನ್ನು ಕಷ್ಟಕ್ಕೆ ದೂಡುವುದಿಲ್ಲ. ತಜ್ಞರ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ. ಲಾಕ್​​ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

Minister R Ashok on lockdown in Karnataka
ಅಶೋಕ್
author img

By

Published : Jan 17, 2022, 1:48 PM IST

ಬೆಂಗಳೂರು: ಕೋವಿಡ್ ಸೋಂಕು ಕಡಿಮೆಯಾದರೆ ನಿರ್ಬಂಧಗಳನ್ನು ಸಡಿಲಗೊಳಿಸಬಹುದು. ಆದರೆ, ಲಾಕ್​​ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಯಾವ ಕ್ರಮ ತರಗೆದುಕೊಳ್ಳಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಲಾಗುವುದು. ಸೌಲಭ್ಯ ಕುರಿತಂತೆ ಚರ್ಚೆಯಾಗಲಿದೆ ಎಂದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್

ಕೋವಿಡ್ ಪ್ರಮಾಣ ಹೆಚ್ಚಾಗಿದೆ. ಆದರೆ ಸಾವಿನ ಪ್ರಮಾಣ ಕಡಿಮೆಯಿದೆ. ಬೇರೆ ರಾಜ್ಯಗಳಲ್ಲೂ ಕೋವಿಡ್ ಸೋಂಕು ತಗ್ಗುತ್ತಿದೆ. ಸೋಂಕು ಕಡಿಮೆಯಾದರೆ ನಿರ್ಬಂಧಗಳ ರಿಲ್ಯಾಕ್ಸ್ ಮಾಡಬಹುದು. ಯಾರಿಗೋ ಒಬ್ಬರ ಲಾಭಕ್ಕಾಗಿ ರಿಲ್ಯಾಕ್ಸ್ ಇಲ್ಲ. ಹೋಟೆಲ್ ಮಾಲಿಕರಾಗಲಿ, ಬೇರೆ ಯಾರೇ ಆಗಲಿ, ನಾವು ಅವರ ಒತ್ತಡಕ್ಕೆ ಮಣಿಯೋಕೆ ಆಗಲ್ಲ.

ರಾಜ್ಯದ ಆರೂವರೆ ಕೋಟಿ ಜನರನ್ನು ಕಷ್ಟಕ್ಕೆ ದೂಡುವುದಿಲ್ಲ. ವೀಕೆಂಡ್ ಕರ್ಪ್ಯೂ ಮಾಡುವ ಮನಸ್ಥಿತಿ ನಮಗಿಲ್ಲ. ಆದರೆ ತಜ್ಞರ ಸಲಹೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ವೀಕೆಂಡ್‌ ಕರ್ಫ್ಯೂನಿಂದ ಜನಸಾಮಾನ್ಯರಿಗೆ ಸಂಕಷ್ಟ.. ಸರ್ಕಾರ ಇದನ್ನ ಹಿಂಪಡೆಯಲಿ.. ಯು ಟಿ ಖಾದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.