ETV Bharat / city

ಮೂರು ರಾಜ್ಯಗಳಿಗೆ ’ಅಧ್ಯಯನ ಪ್ರವಾಸ’ಕ್ಕೆ ತೆರಳಲಿದ್ದಾರೆ ಸಚಿವ ಪ್ರಭು ಚವ್ಹಾಣ್​ - Prabhu Chauhan going to three states

ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಅಧ್ಯಯನ ಪ್ರವಾಸಕ್ಕೆ ತೆರಳಲಿದ್ದಾರೆ.

Minister Prabhu Chauhan will go for study tour in three states
ಮೂರು ರಾಜ್ಯಗಳಿಗೆ ಅಧ್ಯಯನ ಪ್ರವಾಸಕ್ಕೆ ತೆರಳಲಿದ್ದಾರೆ ಸಚಿವ ಪ್ರಭು ಚೌಹಾಣ್
author img

By

Published : Dec 25, 2021, 8:01 PM IST

ಬೆಂಗಳೂರು: ಶೀಘ್ರದಲ್ಲೇ ಅನುಷ್ಠಾನ ಆಗಲಿರುವ ಜಿಲ್ಲೆಗೊಂದು ಗೋಶಾಲೆ ಮತ್ತು ರಾಜ್ಯದಲ್ಲಿರುವ ಖಾಸಗಿ ಗೋಶಾಲೆಗಳನ್ನು ಆತ್ಮನಿರ್ಭರವಾಗಿಸಲು ಹಾಗೂ ಪಶುಪಾಲನೆಯಲ್ಲಿ ತೊಡಗಿದವರ ಆದಾಯ ಹೆಚ್ಚಿಸಲು ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್​ ಅಧ್ಯಯನ ಪ್ರವಾಸಕ್ಕೆ ತೆರಳಲಿದ್ದಾರೆ.

ವಾರಾಣಸಿಯಲ್ಲಿನ ಅತ್ಯಾಧುನಿಕ ಬಯೋಗ್ಯಾಸ್ ಘಟಕ ಹಾಗೂ ಗೋಶಾಲೆಗಳಿಗೆ ಸಚಿವರು ಭೇಟಿ ನೀಡಲಿದ್ದು, ಅಲ್ಲಿನ ಅಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲಿದ್ದಾರೆ. ಅದರಂತೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಂದ್​ನಿಂದ ಯಾರಿಗೆ ಅನಾನುಕೂಲ: ಹೆಚ್​ಡಿಕೆ ಪ್ರಶ್ನೆ

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆರಂಭವಾಗಲಿರುವ ಗೋಶಾಲೆಗಳಲ್ಲಿ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಬೇರೆ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಅಭಿವೃದ್ಧಿ ಮಾದರಿಗಳನ್ನು ನಮ್ಮ ರಾಜ್ಯದಲ್ಲಿಯೂ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಸಚಿವರು ಅವಲೋಕಿಸಲಿದ್ದಾರೆ. ಪಶುಪಾಲನೆ ಜೊತೆಗೆ ಗೋ ಆಧಾರಿತ ಕೃಷಿ, ಮತ್ತು ಗವ್ಯ ಉತ್ಪನ್ನಗಳ ಮಾರುಕಟ್ಟೆ ಮತ್ತು ತಯಾರು ಮಾಡುವ ವಿಧಾನಗಳ ಬಗ್ಗೆ ಸಚಿವರು ಮೂರು ರಾಜ್ಯಗಳಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.