ETV Bharat / city

ಡಿ.ಕೆ.ಶಿವಕುಮಾರ್- ಸಚಿವ ಈಶ್ವರಪ್ಪ ಟಾಕ್ ವಾರ್...ರಣರಂಗವಾದ ವಿಧಾನಸಭೆ!! - ಸಚಿವ ಈಶ್ವರಪ್ಪ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದಸ್ಯರು ಮಾತನಾಡುವ ಮೈಕ್ ಬಂದ್ ಮಾಡಿಸಿದ ಸ್ಪೀಕರ್, ಈ ಮೂಲಕ ಗದ್ದಲ ನಿಯಂತ್ರಣಕ್ಕೆ ಪ್ರಯತ್ನ ಪಟ್ಟರು. ಸ್ಪೀಕರ್ ಮಾತು ಕೇಳದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಈಶ್ವರಪ್ಪ ಮೇಲೆ ಮುಗಿಬಿದ್ದರು. ಇದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು.

assambly
ರಣರಂಗವಾದ ವಿಧಾನಸಭೆ
author img

By

Published : Feb 16, 2022, 5:36 PM IST

Updated : Feb 16, 2022, 6:14 PM IST

ಬೆಂಗಳೂರು: ರಾಷ್ಟ್ರಧ್ವಜದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿಚಾರವಾಗಿ ಆಡಳಿತ, ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ, ಕೋಲಾಹಲ ಉಂಟಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು.

ಸದನದಲ್ಲಿ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸದಸ್ಯರು ಮಾತನಾಡುವ ಮೈಕ್ ಬಂದ್ ಮಾಡಿಸಿದ ಸ್ಪೀಕರ್, ಈ ಮೂಲಕ ಗದ್ದಲ ನಿಯಂತ್ರಣಕ್ಕೆ ಪ್ರಯತ್ನ ಪಟ್ಟರು. ಸ್ಪೀಕರ್ ಮಾತು ಕೇಳದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಈಶ್ವರಪ್ಪ ಮೇಲೆ ಮುಗಿಬಿದ್ದರು. ಇದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದರು.

ಡಿ.ಕೆ.ಶಿವಕುಮಾರ್- ಸಚಿವ ಈಶ್ವರಪ್ಪ ಟಾಕ್ ವಾರ್

ನಡೆದಿದ್ದೇನು? : ಇದಕ್ಕೂ ಮುನ್ನ ರಾಷ್ಟ್ರಧ್ವಜ ವಿಚಾರವಾಗಿ ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ನೀಡಬಾರದು. ನಮ್ಮ ಪಕ್ಷದ ಎಲ್ಲರೂ ಮಾತನಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಸಲಹೆ ಕೊಟ್ಟು ಡಿ.ಕೆ.ಶಿವಕುಮಾರ್ ವಾಪಸ್ ಬರುತ್ತಿದ್ದಾಗ ಸಿಟ್ಟಿಗೆದ್ದ ಈಶ್ವರಪ್ಪ ಸದನ ಏನು ನಿನ್ನ ಅಪ್ಪನದಾ? ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.

ಇದರಿಂದ ಕೆರಳಿದ ಶಿವಕುಮಾರ್, ಸಿದ್ದರಾಮಯ್ಯ ಕುರ್ಚಿ ಮಧ್ಯದ ಜಾಗದಿಂದ ತೂರಿ ಬಂದು ತಾಕತಿದ್ದರೆ ಬಾರೋ ಎಂದು ತೋಳಿನ ಶರ್ಟ್ ಎಳೆದುಕೊಂಡರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌, ಶಿವಕುಮಾರ್ ಎಲ್ಲಿ ಇದ್ದಿರೀ?. ಏನು ಮಾತನಾಡುತ್ತಿದ್ದಿರಿ, ನೆನಪಿದೆಯೇ ? ಎಂದು ಪ್ರಶ್ನಿಸಿದರು.

ಆಗ ಕಾಂಗ್ರೆಸ್ ಶಾಸಕರು ಈಶ್ವರಪ್ಪ ಅವರ ಮುಂದೆ ಬಂದು ಘೋಷಣೆ ಕೂಗಿದಾಗ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ಸದಸ್ಯರ ಮಧ್ಯೆ ಕೈ ಕೈ ಮಿಲಾಯಿಸುವ ಸ್ಥಿತಿ ನಿರ್ಮಾಣವಾಯಿತು.

ರಣರಂಗವಾದ ವಿಧಾನಸಭೆ

ಸಚಿವರ ರಕ್ಷಣೆಗೆ ಬಂದ ಮಾರ್ಷಲ್​ಗಳು: ಕಾಂಗ್ರೆಸ್ ಸದಸ್ಯರು ಒಮ್ಮೆಲೇ ಸಚಿವ ಈಶ್ವರಪ್ಪರತ್ತ ತೆರಳಿ ವಾಗ್ವಾದ ನಡೆಸಿದಾಗ ಕೈಮೀರುವಂತ ಪರಿಸ್ಥಿತಿ ನಿರ್ಮಾಣವಾಯಿತು. ಸಂದರ್ಭ ಅರಿತ ಮಾರ್ಷಲ್​ಗಳು ಅಡ್ಡಗಟ್ಟಿ ಈಶ್ವರಪ್ಪ ಅವರಿಗೆ ರಕ್ಷಣೆ ನೀಡಿದರು.

ಆದರೂ, ಕಾಂಗ್ರೆಸ್ ಸದಸ್ಯರ ಕೋಪ ತಣ್ಣಗಾಗಲಿಲ್ಲ. ಏರುಧ್ವನಿಯಲ್ಲಿ ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಏಕವಚನ, ಕೆಟ್ಟ ಪದಗಳೂ ಕೇಳಿ ಬಂದವು. ಈ ಸಂದರ್ಭದಲ್ಲಿ ಸಚಿವರೆಲ್ಲಾ ಈಶ್ವರಪ್ಪಗೆ ಬೆಂಗಾವಲಾಗಿ ನಿಂತು ರಕ್ಷಿಸಿದರು. ನಂತರ, ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಸಿಟ್ಟು ಹೊರಹಾಕಿ ಸದನದಿಂದ ಹೊರನಡೆದರು.

ಪ್ರಶ್ನೋತ್ತರ ಕಲಾಪ ಮುಗಿದ ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಿಲುವಳಿ ಸೂಚನೆ ಅಡಿ ವಿಷಯ ಮಂಡಿಸಲು ಅವಕಾಶ ಮಾಡಿಕೊಟ್ಟರು. ಈ ವೇಳೆ, ಮಾತನಾಡಿದ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ದೇಶದ್ರೋಹಕ್ಕೆ ಸಮ. ಕೂಡಲೇ ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಮುಖ್ಯಮಂತ್ರಿಗಳು ವಜಾ ಮಾಡಬೇಕಾಗಿತ್ತು ಎಂದು ಆಗ್ರಹಿಸಿದರು.

ರಣರಂಗವಾದ ವಿಧಾನಸಭೆ

ಸಿ ಟಿ ರವಿ- ಸಿದ್ದರಾಮಯ್ಯ ಜಟಾಪಟಿ: ಈ ಮಧ್ಯೆ ಎದ್ದುನಿಂತ ಶಾಸಕ ಸಿ.ಟಿ. ರವಿ ಅವರು, ಕಾಶ್ಮೀರದಲ್ಲಿ ಜನರ ಕೈಗೆ ಬಂದೂಕು ನೀಡಿ ದೇಶದ್ರೋಹದ ಕೆಲಸ ಮಾಡುತ್ತಿರುವವರು ಕಾಂಗ್ರೆಸ್ಸಿಗರು ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ರವಿ ಅವರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.

ಬಳಿಕ ಸಚಿವ ಈಶ್ವರಪ್ಪರವರಿಗೆ ಮಾತನಾಡಲು ಸಭಾಧ್ಯಕ್ಷರು ಅವರು ಅವಕಾಶ ನೀಡಿದ್ದು, ಕಾಂಗ್ರೆಸ್ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಈಶ್ವರಪ್ಪ ಮಾತನಾಡಲು ಮುಂದಾದಾಗ ಡಿ.ಕೆ. ಶಿವಕುಮಾರ್ ಅವರು, ದೇಶದ್ರೋಹಿ ಎಂದು ಮೂದಲಿಸಿದ್ದರಿಂದ ಈಶ್ವರಪ್ಪ ಕೆಂಡಾಮಂಡಲವಾಗಿ ನೀನು ರಾಷ್ಟ್ರ ದ್ರೋಹಿ, ಜೈಲಿಗೆ ಹೋಗಿ ಬಂದವ ನೀನು, ನಿನ್ನಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದರಿಂದ ಕೆರಳಿದ ಡಿ.ಕೆ. ಶಿವಕುಮಾರ್, ಈಶ್ವರಪ್ಪ ವಿರುದ್ಧ ಏಕವಚನ ಪದಪ್ರಯೋಗ ಮಾಡಿದರು. ಡಿ ಕೆ ಶಿವಕುಮಾರ್​ ಅವರು, ದೇಶದ್ರೋಹಿ ಎಂದು ಕರೆದಿದ್ದಕ್ಕೆ ಕೋಪಗೊಂಡ ಈಶ್ವರಪ್ಪ 'ನೀನು ರಾಷ್ಟ್ರದ ಅತಿ ದೊಡ್ಡ ಲೂಟಿಕೋರ. ಕನಕಪುರದಿಂದ ದೆಹಲಿಯವರೆಗೆ ಬಂಡೆ ಕಳ್ಳಸಾಗಣೆ ಮಾಡಿದ್ದೀಯ. ನೀನು ಈಗ ಬೇಲ್ ಮೇಲೆ ಇದ್ದೀಯಾ, ಯಾವಾಗ ಮತ್ತೆ ಜೈಲಿಗೆ ಹೋಗುತ್ತೀಯಾ ಗೊತ್ತಿಲ್ಲ' ಎಂದು ಛೇಡಿಸಿದರು.

ಈಶ್ವರಪ್ಪ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ: ಈ ಮಧ್ಯೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸ್ವಯಂ ಪ್ರೇರಣೆಯಿಂದ ಸಂಪುಟದಿಂದ ಕೈ ಬಿಟ್ಟು ರಾಷ್ಟ್ರ ದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.

ಧ್ವಜ ಸಂಹಿತೆ ಪ್ರಕಾರ, ಇದು ಮೂರರಿಂದ ಐದು ವರ್ಷದವರೆಗಿನ ಶಿಕ್ಷಾರ್ಹ ಅಪರಾಧ ಮತ್ತು ದೇಶ ದ್ರೋಹಕ್ಕೆ ಸಮಾನವಾದ ಅಪರಾಧ. ಇಷ್ಟು ದಿನವಾದರೂ ಅವರು ಈ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು. ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದು ನಿಂದಿಸಿದ್ದು, ಬಿಜೆಪಿ ಸದಸ್ಯರನ್ನು ಕೆರಳಿಸಿತು. ಗೃಹ ಸಚಿವ ಆರಗ ಜ್ಞಾನೇಂದ್ರ ಕೆಂಪುಕೋಟೆಯಲ್ಲಿ ಖಲಿಸ್ತಾನ ಧ್ವಜ ಹಾರಿಸಿದ್ದನ್ನು ನೀವು ಸಮರ್ಥಿಸಿದ್ದೀರಿ ಎಂದು ಹೇಳಿದರು. ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಹೋದವರನ್ನು ಕಾಂಗ್ರೆಸ್ ಗುಂಡಿಟ್ಟು ಕೊಂದಿದೆ ಎಂದು ಸಿ.ಟಿ‌. ರವಿ ಆರೋಪಿಸಿದರು. ಇದರಿಂದ ಸದನದಲ್ಲಿ ತೀವ್ರ ಗದ್ದಲ ನಿರ್ಮಾಣವಾಯಿತು.

ಸದನ ತಹಬಂದಿಗೆ ಬಂದು ಚರ್ಚೆ ನಡೆಯುತ್ತಿರುವಾಗ ಗೃಹ ಸಚಿವ ಜ್ಞಾನೇಂದ್ರ 'ಈಗಾಗಲೇ ಕಾಂಗ್ರೆಸ್​ ಹಿಜಾಬ್​ನಿಂದ‌ ಹೈರಾಣಾಗಿದೆ. ಅದನ್ನು ಮರೆಮಾಚುವುದಕ್ಕೆ ಧ್ವಜದ ವಿಚಾರ ತೆಗೆದಿದ್ದಾರೆ ಎಂದು ಹೇಳಿದ್ದರಿಂದ ಸದನದಲ್ಲಿ ಮತ್ತೆ ಗದ್ದಲ ಉಂಟಾಯಿತು.

ಓದಿ: ರಿಮೋಟ್​ ಕಂಟ್ರೋಲ್​ ಸರ್ಕಾರ ತೊಲಗಿಸಿ.. ಗಾಂಧಿ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ..

Last Updated : Feb 16, 2022, 6:14 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.