ETV Bharat / city

ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಕ್ಯಾಬಿನೆಟ್​​ ಒಪ್ಪಿಗೆ - karnataka industrial policy

ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಅನುಮೋದನೆ ಸಿಕ್ಕಿದ್ದು, ಇದು ರಾಜ್ಯದ ಕೈಗಾರಿಕಾ ಇತಿಹಾಸದಲ್ಲಿ ಮಹತ್ತರ ಬದಲಾವಣೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಭರವಸೆ ನೀಡಿದ್ದಾರೆ.

ministers pressmeet
ಸಚಿವರ ಸುದ್ದಿಗೋಷ್ಠಿ
author img

By

Published : Jun 25, 2020, 3:37 PM IST

ಬೆಂಗಳೂರು: ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ ತಿದ್ದುಪಡಿಗೆ ಅನುಮೋದನೆ ದೊರೆತಿದ್ದು, ಈ ತಿದ್ದುಪಡಿಯಿಂದ ಕೈಗಾರಿಕಾ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್​ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಸಚಿವರ ಸುದ್ದಿಗೋಷ್ಠಿ

ಕ್ಯಾಬಿನೆಟ್​ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಉನ್ನತ ಮಟ್ಟದ ಸಮಿತಿ ಹಾಗೂ ಜಿಲ್ಲಾಮಟ್ಟದ ಸಮಿತಿ ಇದೆ. ಈ ಸಮಿತಿಗಳು ಅನುಮತಿ ನೀಡಿದರೆ ಆ ಭೂಮಿಯಲ್ಲಿ ತಕ್ಷಣ ಕೈಗಾರಿಕೆ ಪ್ರಾರಂಭ ಮಾಡಲು ಹೊಸ ಕಾನೂನು ಅನುವು ಮಾಡಿಕೊಡಲಿದೆ ಎಂದರು.

ಸ್ವಯಂ ದೃಢೀಕರಣ‌ ಪತ್ರ ಪಡೆದು ಕೈಗಾರಿಕೆ ಪ್ರಾರಂಭಿಸಬಹುದಾಗಿದ್ದು, ಗುಜರಾತ್ ಮತ್ತು ರಾಜಸ್ತಾನದಲ್ಲಿ ಈ ಕಾನೂನು ಇದೆ. ಇದು ಎಲ್ಲಾ ಕೈಗಾರಿಕೆಗಳಿಗೂ ಇದು ಅನ್ವಯ ಆಗಲಿದೆ. ಜೊತೆಗೆ ವಿದ್ಯುತ್ ವಾಹನ ತಯಾರಿಕಾ ಕೈಗಾರಿಕೆಗಳಿಗೆ ಕಂದಾಯ ಇಲಾಖೆ ಸ್ಟಾಂಪ್ ಡ್ಯೂಟಿಯಿಂದ ವಿನಾಯಿತಿ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.