ETV Bharat / city

ಕನಕ ಜಯಂತಿ ಮಾಡಿದ್ದು ಕುರುಬರ ಮತ ಪಡೆಯೋಕಲ್ಲ : ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು - ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ

ನವೆಂಬರ್ 21 ರಂದು ಬೆಂಗಳೂರಿನಲ್ಲಿ ಒಬಿಸಿ ಮೋರ್ಚಾದ ಎರಡೂವರೆ ಸಾವಿರ ಜನರ ಸಭೆ ನಡೆಯಲಿದೆ. ಈ ಸಭೆಯನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲು ಇಷ್ಟ ಇಲ್ಲ. ಭವಿಷ್ಯದ ಸಂಘಟನೆ ದೃಷ್ಟಿಯಿಂದ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ ಎಂದು ಈಶ್ವರಪ್ಪ ತಿಳಿಸಿದರು..

ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದ ಈಶ್ವರಪ್ಪ

author img

By

Published : Oct 27, 2021, 3:12 PM IST

ಬೆಂಗಳೂರು : ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಾತಿ ಬಗ್ಗೆ ಮಾತನಾಡುತ್ತಿದೆ. ಕಂಬಳಿ ಬಗ್ಗೆ ಮಾತನಾಡಲು ಅವರಿಗೆ ನಾಚಿಕೆ ಆಗಲ್ವಾ?. ಅಷ್ಟು ಇಷ್ಟು ಸಂಖ್ಯೆಯ ಕುರುಬರು ನಮ್ಮ ಜತೆ ಇರಲಿ ಎನ್ನುವ ಕಾರಣಕ್ಕೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ.

ಕನಕ ಜಯಂತಿ ಮಾಡಿದ್ದು ಕುರುಬರ ಮತ ಪಡೆಯೋಕೆ ಅಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದ ಈಶ್ವರಪ್ಪ
ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದ ಈಶ್ವರಪ್ಪ

ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಜವಾಬ್ದಾರಿಗಳ ಮೂಲಕ ಹಿಂದುಳಿದ ವರ್ಗಗಳಿಗೆ ಶಕ್ತಿಯನ್ನು ಕೊಟ್ಟಿದ್ದೇವೆ.

ಹಿಂದುಳಿದ, ದಲಿತರಿಗೆ ಅತೀ ಹೆಚ್ಚು ಸೌಲಭ್ಯಗಳನ್ನು ಕೊಡಬೇಕು ಅಂತಾದರೆ ಹಿಂದುಳಿದ ವರ್ಗಗಳ ನಾಯಕರು ಚಟುವಟಿಕೆ ಜಾಸ್ತಿ ಮಾಡಬೇಕು. ಸೈದ್ಧಾಂತಿಕವಾಗಿ ಬಿಜೆಪಿ ವಿಚಾರವನ್ನು ತೆಗೆದುಕೊಂಡು ಸಾಕಷ್ಟು ವರ್ಷ ಕೆಲಸ ಮಾಡಿದ್ದೇವೆ ಎಂದರು.

ಮೊದಲು ಹಿಂದುಳಿದವರು, ದಲಿತರು ಕಾಂಗ್ರೆಸ್ ಜತೆ ಇದ್ದರು. ಆದರೆ, ಈಗ ಅವರಲ್ಲಿ ಶೇ. 80ರಷ್ಟು ಜನ ಬಿಜೆಪಿ ಜೊತೆ ಇದ್ದಾರೆ. ರಾಷ್ಟ್ರೀಯವಾದಿ ಚಿಂತನೆಯ ಮುಸ್ಲಿಂ ಜನರೂ ಬಿಜೆಪಿ ಜೊತೆ ಇದ್ದಾರೆ. ಇದು ಬಿಜೆಪಿಯ ಚಿಂತನೆ, ಅಭಿವೃದ್ಧಿ ಕಾರ್ಯಗಳ ಫಲವಾಗಿದೆ ಎಂದರು.

ಏನೂ ಮಾಡದ ಬೇರೆ ಪಕ್ಷಗಳು ಹಿಂದುಳಿದ ವರ್ಗಗಳ ಉದ್ಧಾರ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹಿಂದುಳಿದ ವರ್ಗದ ಎಲ್ಲಾ ಸ್ವಾಮೀಜಿಗಳು ಕೂಡ ಬಿಜೆಪಿ ಸರ್ಕಾರ ಇದ್ದಾಗ ಹಣ ಕೊಟ್ಟಿದೆ ಎಂದು ಹೇಳುತ್ತಾರೆ.

ಉಪಚುನಾವಣೆ ಮುಗಿದ ಬಳಿಕ ಹಿಂದುಳಿದ, ದಲಿತ ಮಠಗಳಿಗೆ ಸರ್ಕಾರದಿಂದ ಹಣ ಕೊಡಿಸುತ್ತೇವೆ. ಬಿಜೆಪಿ ಸರ್ಕಾರ ನುಡಿದಂತೆ ನಡೆಯುತ್ತದೆ ಎನ್ನುವುದಕ್ಕೆ ಸ್ವಾಮೀಜಿಗಳು ಬರುತ್ತಿರುವುದೇ ಸಾಕ್ಷಿ ಎಂದರು.

ನವೆಂಬರ್ 21 ರಂದು ಬೆಂಗಳೂರಿನಲ್ಲಿ ಒಬಿಸಿ ಮೋರ್ಚಾದ ಎರಡೂವರೆ ಸಾವಿರ ಜನರ ಸಭೆ ನಡೆಯಲಿದೆ. ಈ ಸಭೆಯನ್ನು ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಲು ಇಷ್ಟ ಇಲ್ಲ. ಭವಿಷ್ಯದ ಸಂಘಟನೆ ದೃಷ್ಟಿಯಿಂದ ಏನು ಮಾಡಬೇಕೋ ಅದನ್ನು ಮಾಡಲಾಗುತ್ತದೆ ಎಂದು ಈಶ್ವರಪ್ಪ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.