ETV Bharat / city

ರೋಗಿಗಳ ಸಮಸ್ಯೆ ಆಲಿಸದ ಖಾಸಗಿ ಆಸ್ಪತ್ರೆಗಳಿಗೆ ಸಚಿವ ಬೈರತಿ ಖಡಕ್ ಎಚ್ಚರಿಕೆ - ಬೈರತಿ ಬಸವರಾಜ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಸಚಿವ ಬೈರತಿ ಬಸವರಾಜ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು, ಆಸ್ಪತ್ರೆ ವಿರುದ್ಧ ಆರೋಪಗಳನ್ನು ಮಾಡಿದರು.

Warning
Warning
author img

By

Published : Apr 27, 2021, 10:07 PM IST

Updated : Apr 27, 2021, 10:53 PM IST

ಮಹದೇವಪುರ: ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಯಾವುದು ಸರಿಯಿಲ್ಲ, ಸಚಿವ ಭೈರತಿ ಬಸವರಾಜ್ ಭೇಟಿ ವೇಳೆ ಅಳಲು ತೋಡಿಕೊಂಡ ಸೋಂಕಿತ ಕುಟುಂಬಸ್ಥರು.

ರೋಗಿಗಳ ಸಮಸ್ಯೆ ಆಲಿಸದ ಖಾಸಗಿ ಆಸ್ಪತ್ರೆಗಳಿಗೆ ಸಚಿವ ಬೈರತಿ ಖಡಕ್ ಎಚ್ಚರಿಕೆ

ಇಂದು ಸಚಿವ ಬೈರತಿ ಬಸವರಾಜ್ ಅವರು ಮಹದೇವಪುರ ವಲಯದ 6 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡರು, ಆಸ್ಪತ್ರೆ ವಿರುದ್ಧ ಸಮಸ್ಯೆಗಳ ಹೇಳಿಕೊಂಡರು. ವಿಕಲಚೇತನನೊಬ್ಬ ತನ್ನ ತಾಯಿಗೆ ಕೋವಿಡ್ ಇಲ್ಲದಿದ್ದರೂ ಚಿಕಿತ್ಸೆ ನೀಡಲು ಮುಂದೆ ಬರುತ್ತಿಲ್ಲ ಎಂದು‌ ಹೇಳಿದಾಗ ಆಸ್ಪತ್ರೆ ಸಿಬ್ಬಂದಿಯನ್ನು ಕರೆಸಿ ತಕ್ಷಣ ಚಿಕಿತ್ಸೆ ಕೊಡಿಸಿದರು. ಮತ್ತೊಬ್ಬ ಓಡಿಶಾ ಮೂಲದ ವ್ಯಕ್ತಿ ಕೋವಿಡ್ ನಿಂದ ಮರಣಹೊಂದಿದ್ದಾರೆ. ಆದರೆ ಶವ ನೀಡುತ್ತಿಲ್ಲ ಅಂತ ಹೇಳಿದಾಗ ಅವರಿಗೆ ಧನ ಸಹಾಯ ಮಾಡಿ ಕೋವಿಡ್ ನಿಂದ ಸತ್ತರೆ ಬಾಡಿ ನಿಮಗೆ ನೀಡೋದಿಲ್ಲ ನಮ್ಮ ವಲಯ ವ್ಯಾಪ್ತಿಯ ಚಿತಾಗಾರದಲ್ಲಿ ಬರ್ನ್ ಮಾಡಿಸುವುದಾಗಿ ಹೇಳಿ ತಹಶೀಲ್ದಾರ್ ಅಜಿತ್ ರೈ ಅವರಿಗೆ ಜವಾಬ್ದಾರಿ ವಹಿಸಿದರು.

ಆಸ್ಪತ್ರೆ ಸಿಬ್ಬಂದಿ ರೋಗಿಯ ಆರೋಗ್ಯದ ಬಗ್ಗೆ ಕುಟುಂಬಸ್ಥರಿಗೆ ತಿಳಿಸದೇ, ಮೃತಪಟ್ಟ ನಂತರ ಕುಟುಂಬಸ್ಥರ ಬಳಿ ಬಂದು ನಿಮ್ಮ ಕಡೆಯವರು ಮೃತಪಟ್ಟಿದ್ದಾರೆ ಬಾಡಿ ತೆಗೆದುಕೊಂಡು ಹೋಗಿ ಎಂದು ಏಕಾಏಕಿ ಹೇಳುತ್ತಾರೆ. ಯಾವ ರೀತಿ ಸಿಬ್ಬಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಯಾವ ಆಧಾರದ ಮೇಲೆ ಈ ಆಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಬರಬೇಕು ಎಂದು ಸಚಿವರನ್ನು ಹಲಸೂರಿನ ಜೋಗುಪಾಳ್ಯ ನಿವಾಸಿ ಪ್ರಶ್ನೆ ಮಾಡಿದರು. ಇದಕ್ಕೆ ಆಸ್ಪತ್ರೆ ಆಡಳಿತ ಮುಖ್ಯಸ್ಥರನ್ನು ಕರೆಸಿ ಯಾಕೆ ಈ ರೀತಿ ಮಾಡ್ತೀರಾ ಒಂದು ಜೀವಕ್ಕೆ ಬೆಲೆ ಕೊಡಿ ಕುಟುಂಬಸ್ಥರು ಕರೆ ಮಾಡಿದಾಗ ರೋಗಿಯ ಬಗ್ಗೆ ಅವರ ಆರೋಗ್ಯದ ಬಗ್ಗೆ ತಿಳಿಸಿ ಏಕಾಏಕಿ ಮೃತಪಟ್ಟಿದ್ದಾರೆ ಎಂದು ಹೇಳಿದರೆ ಏನು ಅರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಎರಡು ಮೂರು ದಿನಗಳಲ್ಲಿ ಮತ್ತೆ ಭೇಟಿ ಮಾಡುತ್ತೇನೆ ಇದೇ ರೀತಿ ಸಮಸ್ಯೆಗಳು ಬಂದರೆ ಮತ್ತು ದೂರುಗಳು ಬಂದರೆ ಆಸ್ಪತ್ರೆಯನ್ನು ಮುಚ್ಚಿಸುವುದಾಗಿ ಖಡಕ್ಕಾಗಿ ತಿಳಿಸಿದರು.

Last Updated : Apr 27, 2021, 10:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.