ETV Bharat / city

ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರ ವಜಾ: ಕಾರಣ ತಿಳಿದುಕೊಳ್ಳುತ್ತೇನೆ ಎಂದ ಸಚಿವ ನಾಗೇಶ್ - ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ

ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರ ವಜಾಗೆ ಕಾರಣ ತಿಳಿದುಕೊಳ್ಳುತ್ತೇನೆ ಎಂದು ಸಚಿವ ನಾಗೇಶ್ ಹೇಳಿದರು.

Minister BC Nagesh reaction, ITI factory workers remove issue,  Minister BC Nagesh news, ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರ ವಜಾ, ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ, ಸಚಿವ ಬಿಸಿ ನಾಗೇಶ್ ಸುದ್ದಿ,
ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರ ವಜಾಗೆ ಕಾರಣ ತಿಳಿದುಕೊಳ್ಳುತ್ತೇನೆ ಎಂದ ನಾಗೇಶ್
author img

By

Published : Mar 8, 2022, 2:21 PM IST

ಬೆಂಗಳೂರು: ನಗರದ ಐಟಿಐ ಕಾರ್ಖಾನೆಯಲ್ಲಿ ಕೆಲಸಗಾರರನ್ನು ವಜಾಗೊಳಿಸುರುವುದರ ಬಗ್ಗೆ ಸೂಕ್ತ ಮಾಹಿತಿ ಪಡೆದು, ನಿರ್ಧಾರ ಕೈಗೊಳ್ಳುವುದಾಗಿ ಸಚಿವ ಬಿ.ಸಿ. ನಾಗೇಶ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್​ನಲ್ಲಿ ನಿಯಮ 72ರ ಅಡಿ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಈ ಪ್ರಶ್ನೆಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಇಲಾಖೆಯಲ್ಲಿ ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ.

ಆದರೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಕೋರಲಾಗಿ, ಸದರಿಯವರು ಈ ಕೆಳಕಂಡಂತೆ ಮಾಹಿತಿ ನೀಡಿರುತ್ತಾರೆ. ಸದಸ್ಯರು ಸಾಕಷ್ಟು ಒತ್ತಾಯ ಮಾಡಿರುವ ಹಿನ್ನೆಲೆ ಕೂಡಲೇ ಈ ಬಗ್ಗೆ ಮಾತುಕತೆ ನಡೆಸಿ, ಅವರ ಸಮಸ್ಯೆ ಏನೆಂದು ಅರಿತು, ಕೆಲಸದಿಂದ ವಜಾಗೊಳಿಸಿದ್ದರ ಹಿಂದೆ ಸೂಕ್ತ ಕಾರಣ ಲಭಿಸದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರಕಾಶ್ ರಾಥೋಡ್ ಮಾತನಾಡಿ, ಕೋವಿಡ್ ಅವಧಿಯಲ್ಲಿ 3 ಸಾವಿರ ವೆಂಟಿಲೇಟರ್ ನಿರ್ಮಿಸಿದವರು ವಜಾ ಆಗಿದ್ದಾರೆ. ಅವರಿಗೆ ನ್ಯಾಯ ಸಿಗಬೇಕು. ಸರ್ಕಾರದ ಪರವಾಗಿ ಸಚಿವರು ಉತ್ತರ ಕೊಡಬೇಕು. ನಾನೂ ಸಹ ಒಂದು ಸಮಯದಲ್ಲಿ ಇಲ್ಲಿ ಕೆಲಸ ಮಾಡಿದ್ದೆ. ನನ್ನ ಜತೆ ಕೆಲಸ ಮಾಡಿದ್ದ ಹಲವು ಮಂದಿ ಈಗ ಉದ್ಯೋಗ ಕಳೆದುಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಇವರು ಸುಮಾರು 30ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ 80 ಕಾರ್ಮಿಕರನ್ನು ಏಕಾಏಕಿ ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿದ್ದು, ಶೋಚನೀಯ ಸಂಗತಿಯಾಗಿದೆ. ಈ ಕಾರ್ಮಿಕರು ಕೇವಲ ಐ.ಟಿ.ಐ. ಕೆಲಸವನ್ನು ನಂಬಿ ಕುಟುಂಬ ನಿರ್ವಹಣೆ ಮಾಡಿ ಕೊಂಡಿರುವುದರಿಂದ ಅವರ ಕುಟುಂಬವು ಬೀದಿಪಾಲಾಗಿರುತ್ತದೆ. ಆದುದರಿಂದ ಈಗಾಗಲೇ ವಜಾಗೊಳಿಸಿರುವ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳುವ ಕುರಿತು ಗಮನ ಸೆಳೆಯುತ್ತಿದ್ದೇನೆ ಎಂದರು.

ದರ್ಜಿಗಳ ಸಮಸ್ಯೆ ಬಗೆಹರಿಸಿ : ದರ್ಜಿಗಳನ್ನು(ಟೇಲರ್) ಅಸಂಘಟಿತ ವಲಯದಿಂದ ಸಂಘಟಿತ ವಲಯಕ್ಕೆ ತರುವ ಯತ್ನ ಮಾಡುತ್ತೇವೆ. ಆದರೆ, ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹಾಗೂ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ನಿಯಮ 72ರ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಸಂಘಟಿತ ಕಾರ್ಮಿಕರನ್ನು ಪತ್ತೆ ಮಾಡಿ ನೋಂದಣಿ ಮಾಡಿಸುವ ಕಾರ್ಯ ನಡೆಯುತ್ತಿದೆ. ವರ್ಷದ ಕೊನೆಯಲ್ಲಿ 1.7 ಲಕ್ಷ ಮಂದಿ ನೋಂದಣಿ ಮಾಡಿಸುತ್ತೇವೆ. ಪ್ರತ್ಯೇಕ ನಿಗಮ ಸ್ಥಾಪನೆ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಸಿಎಂ ಜತೆ ಪ್ರಸ್ತಾಪಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಪ್ರತಿಪಕ್ಷಗಳ ಒತ್ತಾಯ ಹಿನ್ನೆಲೆ ಗಂಭೀರತೆ ಅರಿತು ಚಿಂತನೆ ನಡೆಸುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.