ETV Bharat / city

ಹೋಂ ಐಸೋಲೇಷನ್ ಕೋವಿಡ್‌ ಸೋಂಕಿತರಿಗೆ ಮೆಡಿಸಿನ್‌ ಕಿಟ್ ; ಔಷಧಿಗಳ ಪಟ್ಟಿ ಇಲ್ಲಿದೆ

ತಜ್ಞರ ಸಲಹೆ ಮೇರೆಗೆ 6 ಮೆಡಿಸಿನ್ ಬಳಸಲು ನಿರ್ಧಾರ ಮಾಡಲಾಗಿದೆ. 5 ಮಾತ್ರೆಗಳು ಹಾಗೂ ಒಂದು ಕಫ್ ಸಿರಪ್ ನೀಡಲು ನಿರ್ಧಾರಿಸಲಾಗಿದೆ. ಸೀಸನ್ ಫ್ಲ್ಯೂ ಇರುವುದರಿಂದ ಹಾಗೂ ಸೋಂಕಿತರಲ್ಲಿ ಹೆಚ್ಚು ನೆಗಡಿ, ಕೆಮ್ಮು ಹೆಚ್ಚಾಗಿ ಕಂಡು ಬರ್ತಿರೋ ಹಿನ್ನೆಲೆ ಕಾಫ್ ಸಿರಪ್‌ ನೀಡಲು ನಿರ್ಧಾರ ಮಾಡಲಾಗಿದೆ..

medical kit for who home isolation in covid positive
ಹೋಂ ಐಸೋಲೇಷನ್ ಕೋವಿಡ್‌ ಸೋಂಕಿತರಿಗೆ ಮೆಡಿಸಿನ್‌ ಕಿಟ್; ಔಷಧಿಗಳ ಪಟ್ಟಿ ಇಲ್ಲಿದೆ...
author img

By

Published : Jan 18, 2022, 12:25 PM IST

Updated : Jan 18, 2022, 1:24 PM IST

ಬೆಂಗಳೂರು : ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಲಕ್ಷ ದಾಟಿದರೂ ಸದ್ಯ ಬಹುತೇಕ ಸೋಂಕಿತರು ಮನೆಯ ಆರೈಕೆಯಲ್ಲೇ ಗುಣಮುಖರಾಗುತ್ತಿದ್ದಾರೆ. ಕಡಿಮೆ ರೋಗದ ಲಕ್ಷಣಗಳನ್ನು ಹೊಂದಿರುವವರು ಬಹುತೇಕ ಸೋಂಕಿತರು ಹೋಂ ಐಸೋಲೇಷನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಹೋಂ ಐಸೋಲೇಷನ್ ಕೋವಿಡ್‌ ಸೋಂಕಿತರಿಗೆ ಮೆಡಿಸಿನ್‌ ಕಿಟ್ ; ಔಷಧಿಗಳ ಪಟ್ಟಿ ಇಲ್ಲಿದೆ

ಇತ್ತ ಆರೋಗ್ಯಾಧಿಕಾರಿಗಳು ಇದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ಹೋಂ ಐಸೋಲೇಷನ್ ಸೋಂಕಿತರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಹೀಗಾಗಿ, ಹೋಂ ಐಸೋಲೇಷನ್ ರೋಗಿಗಳಿಗೆ ಪ್ರತ್ಯೇಕ ಕಿಟ್ ನೀಡಲು ತಯಾರಿ ನಡೆದಿದೆ. ಪ್ರಮುಖವಾಗಿ 6 ಮೆಡಿಸನ್‌ಗಳನ್ನು ಹೊಂದಿರೋ ಐಸೋಲೇಷನ್ ಕಿಟ್‌ಗಳ ತಯಾರಿಯನ್ನ ಆರೋಗ್ಯ ಇಲಾಖೆ ಮಾಡಿದೆ.

ತಜ್ಞರ ಸಲಹೆ ಮೇರೆಗೆ 6 ಮೆಡಿಸಿನ್ ಬಳಸಲು ನಿರ್ಧಾರ ಮಾಡಲಾಗಿದೆ. 5 ಮಾತ್ರೆಗಳು ಹಾಗೂ ಒಂದು ಕಫ್ ಸಿರಪ್ ನೀಡಲು ನಿರ್ಧಾರಿಸಲಾಗಿದೆ. ಸೀಸನ್ ಫ್ಲ್ಯೂ ಇರುವುದರಿಂದ ಹಾಗೂ ಸೋಂಕಿತರಲ್ಲಿ ಹೆಚ್ಚು ನೆಗಡಿ, ಕೆಮ್ಮು ಹೆಚ್ಚಾಗಿ ಕಂಡು ಬರ್ತಿರೋ ಹಿನ್ನೆಲೆ ಕಾಫ್ ಸಿರಪ್‌ ನೀಡಲು ನಿರ್ಧಾರ ಮಾಡಲಾಗಿದೆ. ಹಾಗಾದ್ರೆ, ತಜ್ಞರು ಸೂಚಿಸಿರೋ ಆ ಆರು ಔಷಧಿಗಳು ಯಾವುವು? ಎಷ್ಟು ಕೊಡ್ತಾರೆ ಏನೆಲ್ಲ ಇರಲಿದೆ ಕಿಟ್‌ನಲ್ಲಿ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.

ಔಷಧಿ-ಪ್ರಮಾಣ
1. ಪ್ಯಾರಾಸಿಟಮಾಲ್ 500mg - 20ಮಾತ್ರೆ
2. ವಿಟಮಿನ್ ಸಿ 500mg - 10 ಮಾತ್ರೆ
3. ಝಿಂಕ್ ಸೆಟ್ 50mg - 5 ಮಾತ್ರೆ
4. ಲೆವೋಟ್ರೈಸೈನ್ 10mg - 5 ಮಾತ್ರೆ
5. ಪಾಂಟಪ್ರೋಝೇಲ್ 40mg - 5 ಮಾತ್ರೆ
6. ಆ್ಯಂಟಿ- ಟುಸಿವ್ ಕಾಫ್ ಸಿರಪ್- 1 ಬಾಟಲ್‌
7. ಮೆಡಿಸನ್‌ಗಳ ಜೊತೆ ಮೂರು ಲೇಯರ್ ಇರುವ 10 ಫೇಸ್ ಮಾಸ್ಕ್ ಹಾಗೂ 50Mlನ ಸ್ಯಾನಿಟೈಸರ್ ಬಾಟಲ್ ನೀಡಲಿದ್ದಾರೆ‌.

ಇದೆಲ್ಲವನ್ನ ಒಬ್ಬ ರೋಗಿಗೆ 5 ದಿನಗಳಿಗೆ ಮಾತ್ರ ನೀಡಲಾಗುತ್ತೆ‌‌. ಒಂದು ವೇಳೆ ಹೋಂ ಐಸೋಲೇಷನ್‌ನಲ್ಲಿ ಗುಣಮುಖರಾಗಿಲ್ಲ ಅಂದರೆ ಸ್ಥಳೀಯ ಆಸ್ಪತ್ರೆಗೆ ದಾಖಲು ಆಗಬಹುದಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ: ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು

Last Updated : Jan 18, 2022, 1:24 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.