ETV Bharat / city

'ಮಾದಕ' ನಟಿಯರಿಗೆ ವೈದ್ಯಕೀಯ ಪರೀಕ್ಷೆ: ರಾಗಿಣಿಗೆ ಲೋ ಬಿ.ಪಿ, ಸಂಜನಾಗೆ ಉಸಿರಾಟದ ತೊಂದರೆ..! - kc general hospital

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲ ನಂಟು ಆರೋಪದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ragini, sanjana
ರಾಗಿಣಿ, ಸಂಜನಾ
author img

By

Published : Sep 10, 2020, 12:18 PM IST

Updated : Sep 10, 2020, 1:00 PM IST

ಬೆಂಗಳೂರು: ಚಂದನವನಕ್ಕೆ ಡ್ರಗ್ಸ್ ನಂಟು ಆರೋಪದ ತನಿಖೆ ದಿನದಿಂದ ದಿನಕ್ಕೆ ಚುರುಕಾಗುತ್ತಿದೆ. ಮಾದಕಲೋಕದಲ್ಲಿ ಡ್ರಗ್ಸ್ ನಂಟಿನ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆರೋಪದಲ್ಲಿ ಸಿಲುಕಿರುವ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಸಿಸಿಬಿ ಇನ್ಸ್​​ಪೆಕ್ಟರ್ ಅಂಜುಮಾಲಾ ಅವರ ನಿಗಾವಣೆಯಲ್ಲಿ ಬೆಂಗಳೂರಿನ ಕೆ.ಸಿ. ಜನರಲ್​ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅದರ ಅಂಗವಾಗಿ ಇಬ್ಬರ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ನಟಿ ರಾಗಿಣಿಗೆ ಕಡಿಮೆ ರಕ್ತದೊತ್ತಡ ಇರುವ ಕಾರಣದಿಂದ ಬಿ.ಪಿ. ಚೆಕಪ್​ ಮಾಡಲಾಗಿದೆ.

ವೈದ್ಯಕೀಯ ಪರೀಕ್ಷೆಗೆ ರಾಗಿಣಿ, ಸಂಜನಾ

ರಾಗಿಣಿಗೆ ಗ್ಯಾಸ್ಟ್ರಿಕ್​ ಸಮಸ್ಯೆಯಿದೆ. ಸಂಜನಾಗೂ ಜೀರ್ಣಕ್ರಿಯೆ ಹಾಗೂ ಉಸಿರಾಟದ ತೊಂದರೆಯಿದ್ದು, ಇನ್ನೂ ಹಲವು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಸದ್ಯಕ್ಕೆ ಇಬ್ಬರೂ ನಟಿಯರು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿಯೇ ಇದ್ದು, ಇದಾದ ನಂತರ ಎಫ್​ ಎಸ್​ಎಲ್​ ಕಚೇರಿಯಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

Last Updated : Sep 10, 2020, 1:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.