ETV Bharat / city

ಡಿಕೆಶಿ ಕೂಡ 75ನೇ ವರ್ಷಕ್ಕೆ ಕಾರ್ಯಕ್ರಮ ಮಾಡಲಿ, ನಾವೆಲ್ಲಾ ಭಾಗಿಯಾಗುತ್ತೇವೆ: ಎಂ.ಬಿ.ಪಾಟೀಲ್

ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ಕೊಡಬಾರದು ಅನ್ನುವುದು ಅವೈಜ್ಞಾನಿಕ. ಕೆಲವು ಅಜೆಂಡಾ ಜಾರಿಗೆ ತರಲು ಸರ್ಕಾರ ಹೊರಟಿದೆ. ಆಹಾರ ಪದ್ಧತಿ ವಿಚಾರ ತಜ್ಞರಿಂದ ಪಡೆಯಬೇಕು. ಸರ್ಕಾರ ಮನಸ್ಸಿಗೆ ಬಂದಂತೆ ಜಾರಿ ಮಾಡಬಾರದು. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತದೆ ಎಂದು ಎಂಬಿ ಪಾಟೀಲ್ ಸಲಹೆ ನೀಡಿದರು.

MBPATIL
MBPATIL
author img

By

Published : Jul 15, 2022, 4:01 PM IST

ಬೆಂಗಳೂರು: ಡಿ.ಕೆ.ಶಿವಕುಮಾರ್ ಕೂಡ 75 ವರ್ಷಕ್ಕೆ ಕಾರ್ಯಕ್ರಮ ‌ಮಾಡಲಿ. ಈಗ ಅರವತ್ತು ವರ್ಷ ತುಂಬಿದೆ, ಷಷ್ಠಿಪೂರ್ತಿ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಸಂಬಂಧ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯರ 75ನೇ ಹುಟ್ಟುಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ.

ರಾಹುಲ್ ಗಾಂಧಿ ಕೂಡ ಭಾಗವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆಗೆ ಭಾಗಿಯಾಗಬೇಕಾದ ಅಗತ್ಯ ಇರಲಿಲ್ಲ. ಈಗಾಗಲೇ ಅವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಆಗಿದೆ. ಕಾಂಗ್ರೆಸ್ ಪಕ್ಷ ಪೂರ್ತಿಯಾಗಿ ಇದರಲ್ಲಿ ಭಾಗಿಯಾಗುತ್ತದೆ. ಇದು ಕಾಂಗ್ರೆಸ್ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.

ವ್ಯಕ್ತಿ ಪೂಜೆ ಮಾಡುತ್ತಿಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ. ಇಲ್ಲಿ ಮದುಮಗ ಅಂದ್ರೆ ಸಿದ್ದರಾಮಯ್ಯ. ಹಾಗಾಗಿ ಕಾರ್ಯಕ್ರಮದಲ್ಲಿ ಮುಖ್ಯವಾಗಿರ್ತಾರೆ. ನನಗೂ 75 ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ಡಿಕೆಶಿಗೆ 75 ವರ್ಷ ಆದಾಗ ಕಾರ್ಯಕ್ರಮ ಮಾಡೋಣ. ನಾವೆಲ್ಲ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಈಗಲೇ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ: ಮಳೆ ಸಂದರ್ಭದಲ್ಲಿ ಬಿಜೆಪಿ ಚಿಂತನ ಮಂಥನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಸೋಲಿನ ಭೀತಿ ಆರಂಭ ಆಗಿದೆ. ಹಾಗಾಗಿ ಚಿಂತನ ಮಂಥನ ಸಭೆ ಮಾಡ್ತಾ ಇದ್ದಾರೆ. ಜನರ ಸಮಸ್ಯೆ ಬಿಜೆಪಿಗೆ ಬೇಕಿಲ್ಲ. ಈಗಾಗಲೇ ಬಿಜೆಪಿ ಸೋಲುತ್ತೆ ಅಂತ ಆಂತರಿಕ ವರದಿ ಬಂದಿದೆ. ಆದ್ದರಿಂದ ಗೆಲ್ಲುವುದರ ಬಗ್ಗೆ ಸಭೆ ಮಾಡುತ್ತಿದ್ದಾರೆ.

ಆದ್ರೆ ಈಗ ಸಭೆ ಮಾಡಿ ಯಾವುದೇ ಪ್ರಯೋಜನ ಇಲ್ಲ. ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಪರಿಹಾರ ಸಿಕ್ಕಿಲ್ಲ. ಮಾಧ್ಯಮಗಳು ಬೇಕಾದರೆ ಕ್ರಾಸ್ ಚೆಕ್ ಮಾಡಲಿ. ಪರಿಹಾರ ಕಣ್ಣೋರಿಸುವ ತಂತ್ರ ಆಗಬಾರದು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಕಾರಿನ ಮೇಲೆ ಹಣ ಎಸೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವೈಯುಕ್ತಿಕವಾಗಿ ಸಿದ್ದರಾಮಯ್ಯ ಸಂತ್ರಸ್ತರಿಗೆ ಹಣ ಕೊಟ್ಟಿದ್ದಾರೆ. ತೆಗೆದುಕೊಳ್ಳೋದು ಬಿಡೋದು ಅವರಿಗೆ ಸೇರಿದ್ದು. ಅವರಿಗೆ ಕನ್ಫ್ಯೂಸ್ ಆಗಿರಬಹುದು. ಅದಕ್ಕೆ ವಾಪಸ್ ಕೊಟ್ಟಿರಬಹುದು. ಸರ್ಕಾರದ ಮೇಲೆ ಒತ್ತಡ ತರಲು ಪ್ರಯತ್ನ ಮಾಡ್ತಾರೆ. ಪರಿಹಾರ ಕೊಡುವ ಬಗ್ಗೆ ಸಿದ್ರಾಮಯ್ಯ ಮಾಡ್ತಾರೆ ಎಂದರು.

ಪರಿಣತರಿಂದ ಸಲಹೆ ಪಡೆಯುವುದು ಉತ್ತಮ: ಶಾಲಾಮಕ್ಕಳಿಗೆ ಮೊಟ್ಟೆ ನೀಡಬಾರದು ಎಂಬ ವರದಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪರಿಣತ ನ್ಯೂಟ್ರಿಶಿಯನ್ ಇದ್ದಾರೆ. ಸರ್ಕಾರ ಅವರ ಅಭಿಪ್ರಾಯ ಪಡೆಯಬೇಕು. ನಾವು ಸಣ್ಣವರಿದ್ದಾಗಿನಿಂದ ಹಾಲು ಕುಡಿದು ಬೆಳೆದಿದ್ದೇವೆ. ಈಗ ಹಾಲು ಮೊಟ್ಟೆ ಕೊಡಬಾರದು ಅನ್ನುವುದು ಅವೈಜ್ಞಾನಿಕ.

ಕೆಲವು ಅಜೆಂಡಾ ಜಾರಿಗೆ ತರಲು ಸರ್ಕಾರ ಹೊರಟಿದೆ. ಆಹಾರ ಪದ್ಧತಿ ವಿಚಾರ ತಜ್ಞರಿಂದ ಪಡೆಯಬೇಕು. ಸರ್ಕಾರ ಮನಸ್ಸಿಗೆ ಬಂದಂತೆ ಜಾರಿ ಮಾಡಬಾರದು. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತದೆ ಎಂದು ಸಲಹೆ ನೀಡಿದರು.

(ಇದನ್ನೂ ಓದಿ: ಸಿದ್ದರಾಮೋತ್ಸವ ಒಂಟಿಕೊಪ್ಪಲ್​ ಪಂಚಾಂಗದಲ್ಲಿ ಸೇರಿಸೋದೊಂದೇ ಬಾಕಿ : ಶ್ರೀನಿವಾಸ ಪ್ರಸಾದ್ ಲೇವಡಿ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.