ETV Bharat / city

ಸಿಗ್ನಲ್ ಫ್ರೀ ಕಾರಿಡಾರ್ ಕಾಮಗಾರಿ ಪರಿಶೀಲಿಸಿದ ಮೇಯರ್​: ಅಧಿಕಾರಿಗಳ ವಿರುದ್ಧ ಗರಂ

author img

By

Published : Jun 25, 2019, 10:44 PM IST

ನಾಯಂಡಹಳ್ಳಿ ಜಂಕ್ಷನ್​ನಿಂದ ಜೆ.ಡಿ.ಮರ ಹಾಗೂ ಸಿಲ್ಕ್ ಬೋಡ್೯ ಜಂಕ್ಷನ್​ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಸದ್ಯ ಕಾಮಗಾರಿಯ ಶೇಕಡ 80 ರಷ್ಟು ಪೂರ್ಣಗೊಂಡಿದ್ದು, ಜುಲೈ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

mayor_

ಬೆಂಗಳೂರು: ಬಿಬಿಎಂಪಿ ಮೇಯರ್​ ಗಂಗಾಂಬಿಕೆ ಅವರು ಮೈಸೂರು ರಸ್ತೆಯ ಡಾ.ಮುತ್ತುರಾಜ್ ಜಂಕ್ಷನ್ ಬಳಿಯ ಸಿಗ್ನಲ್ ಫ್ರೀ ಕಾರಿಡಾರ್ ಕೆಳ ಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.

ನಾಯಂಡಹಳ್ಳಿ ಜಂಕ್ಷನ್​ನಿಂದ ಜೆ.ಡಿ.ಮರ ಹಾಗೂ ಸಿಲ್ಕ್ ಬೋಡ್೯ ಜಂಕ್ಷನ್​ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಇದರ ಒಂದು ಭಾಗವಾದ ಡಾ.ಮುತ್ತುರಾಜ್ ಜಂಕ್ಷನ್ ಬಳಿ ರೂ.17.82 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

277 ಮೀಟರ್ ಉದ್ದದ ಕೆಳ ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು, ಜಂಕ್ಷನ್ ಬಳಿ ಬೆಸ್ಕಾಂನಿಂದ ಯುಜಿ ಕೇಬಲ್ ಅಳವಡಿಕೆ ವಿಳಂಬವಾಯ್ತು ಅಲ್ಲದೆ ಜಲಮಂಡಳಿ ಕಾಮಗಾರಿಯಿಂದಲೂ ವಿಳಂಬವಾಯ್ತು. ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಬೃಹತ್ ಬಂಡೆ ಅಡ್ಡ ಬಂದು, ನಿವಾಸಿಗಳು ಅದನ್ನು ಬ್ಲಾಸ್ಟ್ ಮಾಡಲು ಬಿಡಲಿಲ್ಲ. ಅದಕ್ಕಾಗಿ ಬಂಡೆ ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರೆಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಾಮಗಾರಿಯ ವಿಳಂಬವಾಗಿದೆ ಎಂದರು.

ಸದ್ಯ ಕಾಮಗಾರಿಯು ಶೇಕಡ 80 ರಷ್ಟು ಪೂರ್ಣಗೊಂಡಿದ್ದು, ಜುಲೈ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಜತೆಗೆ, ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಮಡು ಜಂಕ್ಷನ್, ಫುಡ್ ವಲ್ಡ್೯ ಜಂಕ್ಷನ್, ಕಾಮಾಕ್ಯ ಜಂಕ್ಷನ್ ಸೇರಿ 1ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಗಾಗಿ 125 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಆನಂತರ, ಮೇಯರ್ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚರಂಡಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ಸರಿಯಾಗಿ ನಿರ್ಮಿದಿರುವುದನ್ನು ಗಮನಿಸಿದ ಮಹಾಪೌರರು, ಕೂಡಲೇ ಸಂಬಂಧಪಟ್ಟ ಅಭಿಯಂತರರ ಮೇಲೆ ಶಿಸ್ತು ಕ್ರಮ ಕೈಕೊಳ್ಳುವಂತೆ ಸೂಚಿಸಿದರು. ಕಾಮಗಾರಿ ಪುನರ್​ನಿರ್ಮಾಣ ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡಲು ಸೂಚಿಸಿದರು.

ಈ ವೇಳೆ, ಗಾಳಿ ಆಂಜನೇಯ ದೇವಸ್ಥಾನದ ಹತ್ತಿರ ಸ್ಕೈ ವಾಕ್ ನಿರ್ಮಾಣವನ್ನು ಅನಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಾಪೌರರು ಈ ಬಗ್ಗೆ ಮತ್ತೆ ಸ್ಥಳೀಯರ ಅಭಿಪ್ರಾಯ ಪಡೆದು ಕ್ರಮ ಜರಗಿಸುವಂತೆ ಸೂಚಿಸಿದರು.

Intro:ಮುತ್ತುರಾಜ್ ಜಂಕ್ಷನ್ ಸಿಗ್ನಲ್ ಫ್ರೀ ಕಾರಿಡಾರ್ ಜುಲೈ ತಿಂಗಳಲ್ಲಿ ಉದ್ಘಾಟನೆ- ಕಾಮಗಾರಿಯಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಮೇಯರ್ ಗರಂ
ಬೆಂಗಳೂರು- ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಜೆ.ಡಿ.ಮರ ಹಾಗೂ ಸಿಲ್ಕ್ ಬೋಡ್೯ ಜಂಕ್ಷನ್ ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಒಂದು ಭಾಗವಾದ ಡಾ.ಮುತ್ತುರಾಜ್ ಜಂಕ್ಷನ್ ಬಳಿ ರೂ.17.82 ಕೋಟಿ ವೆಚ್ಚದ್ದಲ್ಲಿ ನಿರ್ಮಿಸುತ್ತಿರುವ ಕೆಳ ಸೇತುವೆ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲಿಸಿದರು.

ಕೆಳ ಸೇತುವೆಯ ಉದ್ದವು 277 ಮೀಟರ್ ಉದ್ದವಿದ್ದು, ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು, ಮಹಾಪೌರರಾಗಿ ಮೊದಲ ದಿನವೆ ಸದರಿ ಜಂಕ್ಷನ್ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಿದ್ದೆ ಎಂದರು. ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು ಸದರಿ ಜಂಕ್ಷನ್ ಬಳಿ ಬೆಸ್ಕಾಂ ವತಿಯಿಂದ ಯುಜಿ ಕೇಬಲ್ ಅಳವಡಿಕೆ ವಿಳಂಬವಾಯ್ತು, ಅಲ್ಲದೆ ಜಲಮಂಡಳಿ ಕಾಮಗಾರಿಯಿಂದಾಗಿ ವಿಳಂಬವಾಗಿದ್ದರಿಂದ, ಟ್ರಾಫಿಕ್ ಡೈವರ್ಸನ್ ಗೆ ಸಮಯ ತೆಗೆದುಕೊಂಡಿತು ಎಂದರು.

ಅಲ್ಲದೆ ಕಾಮಗಾರಿ ಸ್ಥಳದಲ್ಲಿ ಬೃಹತ್ ಬಂಡೆ ಅಡ್ಡ ಬಂದು,
ನಿವಾಸಿಗಳು ಸದರಿ ಬಂಡೆಯನ್ನು ಬ್ಲಾಸ್ಟ್ ಮಾಡಲು ಬಿಡದೆ, ಇದ್ದುದರಿಂದ ವೈಜ್ಞಾನಿಕ ರೀತಿಯಲ್ಲಿ ಅಕ್ಕ ಪಕ್ಕದ ಮನೆಗಳಿಗೆ ತೊಂದರೆ ಆಗದ ರೀತಿಯಲ್ಲಿ ಬಂಡೆ ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರೆಸಲಾಗಿದೆ. ಅದ್ದರಿಂದ ಕಾಮಗಾರಿಯ ವಿಳಂಬವಾಗಿದೆ ಎಂದರು. ಆದರೂ ಕಾಮಗಾರಿಯು ಶೇಕಡ 80% ಪ್ರಗತಿಯಾಗಿದ್ದು, ಇದೇ ಜುಲೈ 2019 ರೊಳಗೆ ಸದರಿ ಜಂಕ್ಷನ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಅಲ್ಲದೇ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯ ಇಟ್ಟು ಮಡು ಜಂಕ್ಷನ್, ಫುಡ್ ವಲ್ಡ್೯ ಜಂಕ್ಷನ್, ಕಾಮಾಕ್ಯ ಜಂಕ್ಷನ್ ಗಳು ಸೇರಿ 1ಕಿ.ಮೀ ಉದ್ದದ ಮೇಲು ಸೇತುವೆ ನಿರ್ಮಾಣದ ಕಾಮಗಾರಿಗೆ 125. ಕೋಟಿ ವೆಚ್ಚದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಗೆ ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ

ನಂತರ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ವೈಟ್ ಟಾಪಿಂಗ್ ಕಾಮಗಾರಿಯ ವೇಳೆ ನಿರ್ಮಿಸಿದ್ದ ಚರಂಡಿಯನ್ನು ಪರಿಶೀಲನೆ ನಡೆಸಿದರು. ಡ್ರೈನ್ ಕಾಮಗಾರಿಯನ್ನು ಸರಿಯಾಗಿ ನಿರ್ಮಿಸದೇ ಇರುವುದನ್ನು ಗಮನಿಸಿದ ಮಹಾಪೌರರು, ಕೂಡಲೇ ಸಂಬಂದಪಟ್ಟ ಅಭಿಯಂತರರ ಮೇಲೆ ಶಿಸ್ತಿನ ಕ್ರಮ ತೆಗೆದು ಕೊಳ್ಳುವಂತೆ ಹಾಗೂ ಕಾಮಗಾರಿಯನ್ನು ಪುನರ್ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿಯಲು ಹಾಗೂ ಡ್ರೈನ್ ಕವರ್ ಗಳನ್ನು ಅಚ್ಚು ಕಟ್ಟಾಗಿ ನಿರ್ಮಿಸುವಂತೆ ಸೂಚಿಸಿದರು.

ಅಲ್ಲದೇ, ಗಾಳಿ ಆಂಜನೇಯ ದೇವಸ್ಥಾನ ದ ಹತ್ತಿರ ಸ್ಕೈ ವಾಕ್ ನಿರ್ಮಾಣ ವನ್ನು ಅನಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಅದನ್ನು ತೆರವು ಗೊಳಿಸಿ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದರು, ಇದಕ್ಕೆ ಸ್ಪಂದಿಸಿದ ಮಹಾಪೌರರು ಈ ಬಗ್ಗೆ ಮತ್ತೆ ಸ್ಥಳೀಯ ರ ಅಭಿಪ್ರಾಯ ಪಡೆದು ಕ್ರಮ ಜರಗಿಸುವಂತೆ ಸೂಚಿಸಿದರು.

ಸೌಮ್ಯಶ್ರೀ
KN_Bng_03_25_mayor_inspection_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.