ಬೆಂಗಳೂರು: ದೇಶದಲ್ಲಿ ಮುಂಚೂಣಿಯಲ್ಲಿರುವ ಫ್ಯಾಷನ್ ಬ್ರಾಂಡ್ಗಳಲ್ಲಿ ಒಂದಾಗಿರುವ ಮ್ಯಾಕ್ಸ್ ಫ್ಯಾಷನ್ ನಿನ್ನೆ ನಗರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿರುವ ಮ್ಯಾಕ್ಸ್ ಸ್ಟೋರ್ನಲ್ಲಿ ಹಬ್ಬಕ್ಕಾಗಿ ಹೊಸ ಕಲೆಕ್ಷನ್ ಬಿಡುಗಡೆ ಮಾಡಿದೆ.
ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಮತ್ತು ಮ್ಯಾಕ್ಸ್ ಫ್ಯಾಷನ್ ಕರ್ನಾಟಕ ಮತ್ತು ಗೋವಾದ ಪ್ರಾದೇಶಿಕ ಮುಖ್ಯಸ್ಥ ಪಿಯೂಷ್ ಶರ್ಮಾ ಈ ಹೊಸ ಕಲೆಕ್ಷನ್ ಬಿಡುಗಡೆ ಮಾಡಿದರು. ಹೊಸ ಹೊಸ ವಿನ್ಯಾಸಗಳ ಉಡುಗೆಗಳ ಜತೆಗೆ ಮ್ಯಾಕ್ಸ್ ಫ್ಯಾಷನ್ ದೀಪಾವಳಿ ಹಬ್ಬದ ನಿಮಿತ್ತ ಹೊಸ ಲೋಗೋವನ್ನೂ ಸಹ ಬಿಡುಗಡೆ ಮಾಡಿತು. ಜೊತೆಗೆ 'ದಿವಾಳಿ ಖುಷಿಯೋವಾಲಿ’ ಎಂಬ ಆಕರ್ಷಕ ಟ್ಯಾಗ್ಲೈನ್ ಸಹ ಬಿಡುಗಡೆ ಮಾಡಿತು. ಮಿಸ್ಟಿಕಲ್ ಬ್ಲೂಮ್, ಬನಾರಸ್ ಟೇಲ್ಸ್ ಮತ್ತು ಸಿಂಧೂರಿ ಎಂಬ ಮೂರು ಹೊಸ ಶ್ರೇಣಿಯ ಕಲೆಕ್ಷನ್ಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ.
ಈ ಹೊಸ ಸಂಗ್ರಹದ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಮ್ಯಾಕ್ಸ್ ಫ್ಯಾಷನ್ ಪ್ರಾದೇಶಿಕ ಮುಖ್ಯಸ್ಥ ಪಿಯೂಷ್ ಶರ್ಮಾ, ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ಈಗಿನ ಫ್ಯಾಷನ್ಗೆ ಒಪ್ಪುವಂತಹ ರೀತಿಯ ಕಲೆಕ್ಷನ್ಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಒಂದೇ ಸೂರಿನಡಿ ಇಡೀ ಕುಟುಂಬಕ್ಕೆ ಅಗತ್ಯವಾಗಿರುವ ಉಡುಪುಗಳನ್ನು ನೀಡುತ್ತಿದ್ದೇವೆ ಎಂದರು.
ಇನ್ನು ನಟಿ ಶ್ರೀನಿಧಿ ಶೆಟ್ಟಿ ಮಾತನಾಡಿ, ಹಬ್ಬಕ್ಕೂ ಮುನ್ನ ನಡೆಯುವ ಪ್ರಕ್ರಿಯೆಗಳಲ್ಲಿ ಶಾಪಿಂಗ್ ಅತ್ಯಂತ ಅವಿಸ್ಮರಣೀಯವಾದ ಕ್ಷಣ. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಹತ್ತು ಹಲವಾರು ಉಡುಪುಗಳು ಲಭ್ಯವಿರುವ ಈ ಸಂಗ್ರಹವನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ. ಇದರಲ್ಲಿ ಆಕರ್ಷಕವಾದ ಪ್ರಿಂಟ್ಗಳು ಮತ್ತು ವಿನ್ಯಾಸಗಳಿವೆ. ಈ ಹಿನ್ನೆಲೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಇವು ಸೂಕ್ತವಾದ ಉತ್ಪನ್ನಗಳಾಗಿವೆ. ದೇಶದಲ್ಲಿ ಅತ್ಯುತ್ತಮವಾದ ವಿನ್ಯಾಸ ಮತ್ತು ಫ್ಯಾಷನ್ ಒದಗಿಸುತ್ತಿರುವ ಮ್ಯಾಕ್ಸ್ಅನ್ನು ಇಷ್ಟ ಪಡುತ್ತೇನೆ ಎಂದು ಹೇಳಿದರು.