ETV Bharat / city

ಸರಗಳ್ಳನಿಂದ ಕೊಲೆ: ಬಂಧಿಸಿ ವಿಚಾರಿಸಿದಾಗ ಬಯಲಿಗೆ ಬಂತು ಮತ್ತೊಂದು ಕೃತ್ಯ - ಅನ್ಸಾರಿ ಹಾಗೂ ಪ್ರದೀಪ್ ಬಂಧಿತರು

ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ, 65 ವರ್ಷದ ನಿರ್ಮಲಾ ಮೇರಿ ಎಂಬುವರ ಮನೆಗೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಆಕೆಯ ಸರ ಕಸಿಯಲು ಆರೋಪಿ ಪ್ರಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಮಹಿಳೆ ಜೋರಾಗಿ ಕೂಗಿಕೊಂಡಿದ್ದರು. ಹೀಗೆ ಕಿರುಚಾಡುತ್ತಿದ್ದಂತೆ ಕಬ್ಬಿಣದ ರಾಡ್​ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ 50 ಗ್ರಾಂ ಚಿನ್ನಾಭರಣ ಕಸಿದು ಆರೋಪಿ ಕಾಲ್ಕಿತ್ತಿದ್ದ.

bommanahalli
ಬೆಂಗಳೂರು
author img

By

Published : Dec 27, 2020, 7:56 PM IST

ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಕೇರಳದಿಂದ ನಗರಕ್ಕೆ ಬಂದು ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ದೆಯನ್ನು ಕೊಲೆ ಮಾಡಿದ್ದ ಆರೋಪಿ ಹಾಗೂ ಆತನ ಸಹಚರ ಸೇರಿದಂತೆ ಇಬ್ಬರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಅನ್ಸಾರಿ ಹಾಗೂ ಸ್ಥಳೀಯ ನಿವಾಸಿ ಪ್ರದೀಪ್ ಬಂಧಿತರು. ಅನ್ಸಾರಿ ವಿರುದ್ಧ ಸರಗಳ್ಳತನ ಸೇರಿದಂತೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತ ಪೊಲೀಸರ ಭೀತಿಯಿಂದ ತಪ್ಪಿಸಿಕೊಳ್ಳಲು ನಗರದಲ್ಲಿ ವಾಸ್ತವ್ಯ ಹೂಡಿದ್ದಾನೆ. ಮತ್ತೆ ಹಳೆ ಕಾಯಕವನ್ನೇ ಮುಂದುವರಿಸಿದ್ದ ಈತ ಬಾಡಿಗೆ ಮನೆ ಕೇಳುವ ನೆಪದಲ್ಲಿ ಒಂಟಿ ಮಹಿಳೆಯನ್ನು ಗುರಿಯಾಗಿಸಿ ಸರಗಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದ.

ಇದೇ ರೀತಿ ಬೊಮ್ಮನಹಳ್ಳಿಯ ಠಾಣಾ ವ್ಯಾಪ್ತಿಯೊಂದರಲ್ಲಿ 65 ವರ್ಷದ ನಿರ್ಮಲಾ ಮೇರಿ ಎಂಬುವರ ಮನೆಗೆ ಬಾಡಿಗೆ ಮನೆ ಕೇಳುವ ನೆಪದಲ್ಲಿ ಆಕೆಯ ಸರ ಕಸಿಯಲು ಪ್ರಯತ್ನಿಸಿದ್ದಾನೆ. ಇದಕ್ಕೆ ಪ್ರತಿರೋಧ ಒಡ್ಡಿದ ಮೇರಿ ಜೋರಾಗಿ ಕೂಗಿಕೊಂಡಿದ್ದರು. ಹೀಗೆ ಕಿರುಚಾಡುತ್ತಿದ್ದಂತೆ ಕಬ್ಬಿಣದ ರಾಡ್​ನಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿ 50 ಗ್ರಾಂ ಚಿನ್ನಾಭರಣ ಕಸಿದು ಆರೋಪಿ ಕಾಲ್ಕಿತ್ತಿದ್ದ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಓದಿ: ಯುವಕನಿಂದ ಅಪ್ರಾಪ್ತೆಗೆ 'ಲವ್' ಕಾಟ: ಬಾವಿಗೆ ಹಾರಿ ಸಾವಿಗೆ ಶರಣಾದ ಬಾಲಕಿ

ಈ ಕೊಲೆ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಿಸಿದಾಗ ಪೊಲೀಸರಿಗೆ ಯಾವುದೇ ಉಪಯೋಗವಾಗಿರಲಿಲ್ಲ. ಕೊನೆಗೆ ಟವರ್ ಡಂಪ್ ಮಾಡಿದಾಗ ಆರೋಪಿಯ ಮೊಬೈಲ್‌ ನಂಬರ್ ಪತ್ತೆಯಾಗಿದೆ. ನಂತರ ಮೊಬೈಲ್ ನಂಬರ್ ಟವರ್ ಲೊಕೇಷನ್ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ‌ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಂದು ಅಪರಾಧದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಸರಗಳ್ಳತನ ಜೊತೆಗೆ ಖರ್ಚಿಗೆ ಹಣ ಹೊಂದಿಸಲು ನಕಲಿ ನೋಟು ಪ್ರಿಂಟ್ ಮಾಡುವ ಕಾಯಕಕ್ಕೂ ಕೈ ಆರೋಪಿಗಳು ಹಾಕಿದ್ದರು. ಇವರು ನಕಲಿ ನೋಟು ಮುದ್ರಿಸಿ ಚಿಲ್ಲರೆ ಅಂಗಡಿ ಹಾಗೂ ವೈನ್ ಶಾಪ್​ನಲ್ಲಿ ಚಲಾವಣೆ ಮಾಡುತ್ತಿದ್ದರು. ಪ್ರತಿದಿನ ಖರ್ಚಿಗೆ ಎಂದು ಸುಮಾರು 10 ಸಾವಿರ ರೂ ನಕಲಿ ನೋಟುಗಳ ಚಲಾವಣೆ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿದೆ. ಸದ್ಯ ಕೊಲೆ ಪ್ರಕರಣದ ಜೊತೆಗೆ 8 ಸರಗಳ್ಳತನ ಹಾಗೂ ನಕಲಿ ನೋಟು ಮುದ್ರಣ ಕೇಸ್ ಸಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.