ETV Bharat / city

ಗೌರವಯುತ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿ ರೂಪಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Coronavirus update

ಕೊರೊನಾ ಸೋಂಕಿತ ಮತ್ತು ಶಂಕಿತ ಮೃತದೇಹಗಳ ನಿರ್ವಹಣೆ, ಅಂತ್ಯಸಂಸ್ಕಾರ, ಮರಣ ಪ್ರಮಾಣ ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿವೆ. ಇದೊಂದು ಗಂಭೀರ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ನಿರ್ವಹಣೆಗೆ ಸರ್ಕಾರ ಖಚಿತ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್​​​ ಸೂಚಿಸಿದೆ.

High Court
ಹೈಕೋರ್ಟ್
author img

By

Published : Jul 27, 2020, 9:15 PM IST

ಬೆಂಗಳೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರಿಗೆ ಗೌರವಯುತ ಅಂತ್ಯಸಂಸ್ಕಾರ ನಡೆಸುವ ಸಂಬಂಧ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ರೂಪಿಸಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಕೊರೊನಾ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಕೊರೊನಾ ಸೋಂಕಿತ ಮತ್ತು ಶಂಕಿತ ಮೃತದೇಹಗಳ ನಿರ್ವಹಣೆ, ಅಂತ್ಯಸಂಸ್ಕಾರ, ಮರಣ ಪ್ರಮಾಣಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲಗಳಿವೆ. ಇದೊಂದು ಗಂಭೀರ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ನಿರ್ವಹಣೆಗೆ ಸರ್ಕಾರ ಖಚಿತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಸೂಚಿಸಿದೆ.

ಸೋಂಕಿತನ ಮೃತದೇಹದಿಂದ ವೈರಸ್ ಹಬ್ಬುತ್ತದೆ ಎಂಬ ಕುರಿತು ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಹೀಗಿದ್ದೂ, ಮೃತದೇಹಕ್ಕೆ ಅಂತ್ಯಸಂಸ್ಕಾರ ನಡೆಸಲು ಇರುವ ಮಾರ್ಗಸೂಚಿಗಳಿಗೆ ಆಧಾರವೇನು? ಒಂದೊಮ್ಮೆ ಸೋಂಕಿತ ವ್ಯಕ್ತಿ ಬೇರಾವುದೇ ಕಾರಣದಿಂದ ಮೃತಪಟ್ಟರೆ ಆತನ ಮರಣ ಪ್ರಮಾಣ ಪತ್ರದಲ್ಲಿ ಕೊರೊನಾ ಇತ್ತು ಅಥವಾ ಇರಲಿಲ್ಲ ಎಂಬ ವಿವರಗಳನ್ನು ದಾಖಲು ಮಾಡುವುದೇಕೆ. ಹೀಗಾಗಿ ಕೊರೊನಾ ಸೋಂಕಿತ ಮತ್ತು ಶಂಕಿತ ಮೃತದೇಹಗಳ ನಿರ್ವಹಣೆಗೆ ರಾಜ್ಯಕ್ಕೆ ಅನ್ವಯ ಆಗುವಂತೆ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.