ETV Bharat / city

ಹರಾಜು ಮೂಲಕವೇ ಆಸ್ತಿ ಬಾಡಿಗೆ ನೀಡಬೇಕು: ನಗರ ಸ್ಥಳೀಯ ಸಂಸ್ಥೆಗಳಿಗೆ ಹೈಕೋರ್ಟ್ ಆದೇಶ

ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಬಾಡಿಗೆ ಅಥವಾ ಗುತ್ತಿಗೆ ನೀಡುವಾಗ ಸಾರ್ವಜನಿಕ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು. ಒಂದು ವೇಳೆ ಹರಾಜು ತಿರಸ್ಕರಿಸುವುದು ಅಥವಾ ಹಿಂದಿನ ಪರವಾನಿಗೆಯನ್ನೇ ನವೀಕರಿಸುದು ಏಕ ಸ್ವಾಮ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

hc
hc
author img

By

Published : Nov 2, 2021, 9:05 PM IST

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ಸ್ವತ್ತುಗಳನ್ನು ಹರಾಜು ಪ್ರಕ್ರಿಯೆ ಮೂಲಕವೇ ಬಾಡಿಗೆ ಅಥವಾ ಗುತ್ತಿಗೆಗೆ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣ ಪಂಚಾಯ್ತಿಯು ತನ್ನ ಮಳಿಗೆಗಳನ್ನು ಬಾಡಿಗೆ ನೀಡುವ ವೇಳೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ, ರಾಜ್ಯದ ಹಲವು ನಗರ ಪಾಲಿಕೆಗಳು, ಪಟ್ಟಣ ಪಂಚಾಯ್ತಿಗಳು ಹಾಗೂ ಪುರಸಭೆಗಳು ತಮ್ಮದೇ ಕಟ್ಟಡಗಳು, ಅಂಗಡಿ ಮಳಿಗೆಗಳನ್ನು ಹೊಂದಿವೆ. ಅವುಗಳ ನಿಯಂತ್ರಣದಲ್ಲಿರುವ ಮಳಿಗೆಗಳ ಬಾಡಿಗೆ ಅಥವಾ ಗುತ್ತಿಗೆ ನೀಡುವಾಗ ಏಕರೂಪದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅಲ್ಲದೆ, ಪಾರದರ್ಶಕತೆ ಕಾಯ್ದುಕೊಳ್ಳಲು ಸ್ಥಳೀಯ ಸಂಸ್ಥೆಗಳು ತಮ್ಮ ಸ್ವತ್ತುಗಳನ್ನು ಬಾಡಿಗೆ ಅಥವಾ ಗುತ್ತಿಗೆಗೆ ನೀಡುವಾಗ ಕಡ್ಡಾಯವಾಗಿ ಹರಾಜು ಮೂಲಕವೇ ಹಂಚಿಕೆ ಮಾಡಬೇಕಾಗುತ್ತದೆ. ಜತೆಗೆ ಹರಾಜಿನಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆದೇಶಿಸಿದೆ.

ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಕಾಯ್ದುಕೊಳ್ಳಲು ಒತ್ತು ನೀಡಬೇಕು ಮತ್ತು ವೈಯಕ್ತಿಕ ಅಥವಾ ಒಂದು ವರ್ಗದ ಹಿತಾಸಕ್ತಿಗೆ ಮಣೆ ಹಾಕಬಾರದು. ಕೆಲವೇ ಕೆಲವು ವ್ಯಕ್ತಿಗಳು, ಇಡೀ ಪಟ್ಟಣ ಪಂಚಾಯ್ತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಆಸ್ತಿಗಳನ್ನು ದುರುಪಯೋಗ ಮಾಡದಂತೆ ತಡೆಗಟ್ಟಬೇಕು. ಅದಕ್ಕಾಗಿ ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಬಾಡಿಗೆ ಅಥವಾ ಗುತ್ತಿಗೆ ನೀಡುವಾಗ ಸಾರ್ವಜನಿಕ ಹರಾಜು ಪ್ರಕ್ರಿಯೆಯನ್ನು ನಡೆಸಬೇಕು ಎಂದು ತಿಳಿಸಿದೆ. ಒಂದು ವೇಳೆ ಹರಾಜು ತಿರಸ್ಕರಿಸುವುದು ಅಥವಾ ಹಿಂದಿನ ಪರವಾನಿಗೆಯನ್ನೇ ನವೀಕರಿಸುದು ಏಕ ಸ್ವಾಮ್ಯವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಸಂತನಿಗೆ ಚರಿತ್ರೆ ಇರುವಂತೆ ಪಾಪಿಗೂ ಭವಿಷ್ಯವಿರುತ್ತದೆ : ಮಗಳ ಮದುವೆಗೆ ಹೋಗಲು ಕೈದಿಗೆ ಪೆರೋಲ್ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.