ಬೆಂಗಳೂರು: ದೇವಸ್ಥಾನಗಳ ರಥೋತ್ಸವದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಹಲವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಕೋದಂಡರಾಮಸ್ವಾಮಿ ಪಲ್ಲಕ್ಕಿ ಉತ್ಸವವಿದ್ದು ಏಪ್ರಿಲ್ 11 ಮತ್ತು 12 ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಮತ್ತು ಏಪ್ರಿಲ್ 13, 14 ರಂದು ಮುತ್ಯಾಲಮ್ಮ ದೇವಿ ರಥೋತ್ಸವ ಹಿನ್ನೆಲೆ ಭಾರತೀನಗರ ಠಾಣಾ ವ್ಯಾಪ್ತಿಯಲ್ಲಿ ಕೂಡ 2 ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪೂರ್ವ ಪೊಲೀಸ್ ವಿಭಾಗದ ಕಮರ್ಷಿಯಲ್ ಸ್ಟ್ರೀಟ್, ಪುಲಿಕೇಶಿ ನಗರ, ಶಿವಾಜಿನಗರ, ಡಿಜೆ ಹಳ್ಳಿ ಸೇರಿದಂತೆ ಉತ್ತರ ವಿಭಾಗದ ಜೆ.ಸಿ.ನಗರ ಠಾಣಾ ವ್ಯಾಪ್ತಿಯಲ್ಲಿ ಕೂಡ ಏಪ್ರಿಲ್ 13, 14 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇದನ್ನೂ ಓದಿ: ಯಾವುದೇ ವೃತ್ತಿ ಬಗ್ಗೆ ಯಾರೂ ಕೇವಲವಾಗಿ ಮಾತ್ನಾಡಬಾರದು : ಸಚಿವ ಡಾ. ಸುಧಾಕರ್