ದೊಡ್ಡಬಳ್ಳಾಪುರ: ಸುರಿಯುವ ಮಳೆಯಲ್ಲೇ ಟ್ರಾನ್ಸ್ ಫಾರ್ಮರ್ ಬದಲಾಯಿಸಿ ಏರಿಯಾಕ್ಕೆ ಬೆಳಕು ನೀಡಿದ ಪವರ್ ಮ್ಯಾನ್(ಲೈನ್‌ಮ್ಯಾನ್)ಗಳ ಸೇವೆ ನಿಷ್ಠೆಗೆ ಜನರು ಶ್ಲಾಘಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಭುವನೇಶ್ವರ ನಗರಕ್ಕೆ ವಿದ್ಯುತ್ ಸರಬರಾಜು ಮಾಡುವ 100 ಕೆ.ವಿ ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ನಿನ್ನೆ ಬೆಳಗ್ಗೆ ಕೆಟ್ಟು ಹೋಗಿತ್ತು. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಸಾರ್ವಜನಿಕರು ದೂರು ಬಂದ ಹಿನ್ನೆಲೆ ಪವರ್ ಮ್ಯಾನ್ಗಳಾದ ವೆಂಕಟಚಲ ಮತ್ತು ರಾಜಣ್ಣ ಎಂಬುವವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಟ್ರಾನ್ಸ್ ಫಾರ್ಮರ್ ಕೆಟ್ಟುಹೋಗಿರುವುದು ಗಮನಕ್ಕೆ ಬಂದ ನಂತರ ಟ್ರಾನ್ಸ್ ಫಾರ್ಮ್ ಬಿಚ್ಚಿ ಕೇಂದ್ರಕ್ಕೆ ತಗೆದುಕೊಂಡು ಹೋಗಿ ರಿಪೇರಿ ಮಾಡಿದ್ದಾರೆ. ಬಳಿಕ ದುರಸ್ತಿಯಾದ ಟ್ರಾನ್ಸ್ ಫಾರ್ಮರ್ ಅನ್ನು ಮತ್ತೆ ಕಂಬಕ್ಕೆ ಜೋಡಿಸುವಾಗ ಮಳೆ ಪ್ರಾರಂಭವಾಗಿದೆ. ಆದರೆ, ಮಳೆಯ ನಡುವೆ ಟ್ರಾನ್ಸ್ ಫಾರ್ಮ್ ಜೋಡಿಸಿ ಭುವನೇಶ್ವರ ನಗರಕ್ಕೆ ಬೆಳಕು ನೀಡಿದ್ದಾರೆ.
ಮಳೆಯಲ್ಲಿಯೇ ಕೆಲಸ ಮಾಡುತ್ತಿರುವ ದೃಶ್ಯವನ್ನು ಸಾರ್ವಜನಿಕರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪವರ್ ಮ್ಯಾನ್ ಗಳ ಸೇವೆಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮಳೆ ಆರ್ಭಟ.. ಹೊಗೆನಕಲ್ ಜಲಪಾತ ಮುಳುಗಡೆ: ಧುಮ್ಮಿಕ್ಕುವ ದೃಶ್ಯ ಕಣ್ಮರೆ