ಬೆಂಗಳೂರು : ನಮ್ಮ ನಿಮ್ಮ ಡಿಎನ್ಎ ಟೆಸ್ಟ್ ಮಾಡಿ, ಎಲ್ಲ ಒಂದೇ ಇರುತ್ತೆ. ನಮ್ಮ ನಿಮ್ಮ ರಕ್ತವೂ ಒಂದೇ ಬಣ್ಣದ್ದು. ಅನ್ಯೋನ್ಯತೆಯಿಂದ ಅಣ್ಣ- ತಮ್ಮಂದಿರಾಗಿ ಬಾಳೋಣ ಎಂದು ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಮನವಿ ಮಾಡಿದರು. ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಶಾಲೆಯಲ್ಲಿ ಎಲ್ಲ ಭಾರತೀಯರು ಅಣ್ಣ-ತಮ್ಮಂದಿರು ಎಂದು ಪ್ರಾರ್ಥನೆಯಲ್ಲಿತ್ತು.
ಇದೇ ಪ್ರಾರ್ಥನೆ ಇಂದಿಗೂ ನಮ್ಮ ಮನದಲ್ಲಿ ಇದೆ. ನಮ್ಮಲ್ಲಿ ವ್ಯತ್ಯಾಸ ತರುವ ಪ್ರಯತ್ನ ಏಕೆ? ಅಧಿಕಾರಕ್ಕಾಗಿನಾ? ನಾವು ಸಾವಿರ ವರ್ಷ ಬದುಕಲು ಸಾಧ್ಯನಾ? ಸಿಗುವ ಮೂರು ದಿನಗಳಲ್ಲಿ ಕಿತ್ತಾಟ ಏಕೆ? ಇಂತಹ ಬದುಕು ಬೇಕಾ? ಅವರವರ ನಂಬಿಕೆ ಅವರರನ್ನು ಕಾಪಾಡುತ್ತೆ, ಕಿತ್ತಾಟ ಏಕೆ? ಎಲ್ಲರೂ ಸೇರಿ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದೇವೆ. ಇವಾಗ ಎಲ್ಲ ಸೇರಿ ದೇಶದಲ್ಲಿ ಸಮಾಧಾನ ತರುವ ಪ್ರಯತ್ನ ಮಾಡಬೇಕು ಎಂದರು.
ಮುಖ್ಯಮಂತ್ರಿ ಪರಿಹಾರ ನಿಧಿ ಎಲ್ಲರಿಗೂ ಕೊಡಿ : ಈಗ ಕೇವಲ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಲಾಗ್ತಿದೆ. ಇದರಿಂದ ಮಧ್ಯಮವರ್ಗದ ಜನರಿಗೆ ತುಂಬಾ ತೊಂದರೆ ಆಗ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯನ್ನ ಎಪಿಎಲ್ ಕಾರ್ಡ್ ಇದ್ದವರಿಗೂ ನೀಡಿ. ಒಂದು ಹಾಸ್ಪಿಟಲ್ಗೆ 15 ರಿಂದ ₹20 ಲಕ್ಷ ಆಗುತ್ತದೆ.
ಮಧ್ಯಮವರ್ಗದ ಜನರು ಇಷ್ಟು ದೊಡ್ಡ ಹಣ ಹೇಗೆ ಕೊಡುತ್ತಾರೆ. ಹೀಗಾಗಿ, ಬಿಪಿಎಲ್ನಂತೆ ಎಪಿಎಲ್ ಕಾರ್ಡ್ ಇದ್ದವರಿಗೂ ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಬೇಕು. ಇದರಿಂದ ಮಧ್ಯಮವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.