ಬೆಂಗಳೂರು: ವಿಧಾನ ಪರಿಷತ್ ಶಾಸಕರಿಗೆ ವ್ಯಾಲಿಡಿಟಿ ಮುಗಿದ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿಂದು ನಡೆಯಿತು.
ನಾವೇನು ಮೃಗಗಳಾ? ಪ್ರಾಣಿಗಳಾ?: ಅವಧಿ ಮುಗಿದ ಮಾಸ್ಕ್ ಕೊಟ್ಟಿದ್ದಕ್ಕೆ ಪಿ.ಆರ್.ರಮೇಶ್ ಗರಂ
ಪರಿಷತ್‌ನಲ್ಲಿ ಸದಸ್ಯರಿಗೆ ವಾಯಿದೆ ಮುಗಿದ ಮಾಸ್ಕ್‌ಗಳಿಗೆ ಸ್ಟಿಕ್ಕರ್ ಅಂಟಿಸಿ ನೀಡಲಾಗುತ್ತಿದೆ ಎಂದು ಎಂಎಲ್‌ಸಿ ಪಿ.ಆರ್.ರಮೇಶ್ ಸದನದಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಎಂಎಲ್ಸಿಗಳಿಗೆ ವ್ಯಾಲಿಡಿಟಿ ಮುಗಿದ ಮಾಸ್ಕ್‌ಗಳಿಗೆ ಸ್ಟಿಕ್ಕರ್ ಹಾಕಿ ಕೊಡಲಾಗುತ್ತಿದೆ-ಪಿ.ಆರ್.ರಮೇಶ್
ಬೆಂಗಳೂರು: ವಿಧಾನ ಪರಿಷತ್ ಶಾಸಕರಿಗೆ ವ್ಯಾಲಿಡಿಟಿ ಮುಗಿದ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಜನಪ್ರತಿನಿಧಿಗಳಿಗೇ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿಂದು ನಡೆಯಿತು.
ಒಂದು ವರ್ಷ ವ್ಯಾಲಿಡಿಟಿ ಇದೆ. ಮೇಡ್ ಇನ್ ಚೈನಾದ್ದಾಗಿದೆ. ನಮ್ಮನ್ನು ಹಗುರವಾಗಿ ಪರಿಗಣನೆ ಮಾಡಲಾಗಿದೆ, ನಮಗೇ ಟೋಪಿ ಹಾಕುತ್ತಿರುವ ಅಧಿಕಾರಿಗಳು ಜನರಿಗೆ ಹೇಗೆ ಟೋಪಿ ಹಾಕಲಿದ್ದಾರೆ ಯೋಚಿಸಿ. ಒಂದು ವರ್ಷ ವ್ಯಾಲಿಡಿಟಿ ಇರುವ ಮಾಸ್ಕ್ ಮೇಲೆ ಎರಡು ವರ್ಷ ಎಂದು ಸ್ಟಿಕ್ಕರ್ ಹಾಕಿ ಕೊಟ್ಟಿದ್ದಾರೆ.
ನಾವೇನು ಮೃಗಗಳಾ? ಪ್ರಾಣಿಗಳಾ?
ನಾವೇನು ಮೃಗಗಳಾ? ಪ್ರಾಣಿಗಳಾ? ನಮಗೇ ಮೋಸ ಮಾಡುವವರು ಜನರಿಗೆ ಮೋಸ ಮಾಡದಿರುತ್ತಾರಾ? ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಎಂದರು. ಈ ವೇಳೆ, ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ಮೇಡ್ ಇನ್ ಚೈನಾ ಬೇಡ, ಮೇಡ್ ಇನ್ ಇಂಡಿಯಾ ಬೇಕು ಎಂದು ಪಿ ಆರ್ ರಮೇಶ್ ಒತ್ತಾಯಿಸಿದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ ಈ ಬಗ್ಗೆ ಕ್ರಮ ವಹಿಸಲು ಸರ್ಕಾರಕ್ಕೆ ಸೂಚಿಸಿದರು. ಆದರೂ ಮಾತು ನಿಲ್ಲಿಸದ ಪಿ.ರಮೇಶ್ ವಾಗ್ದಾಳಿ ನಡೆಸಿದರು. ಈ ವೇಳೆ ತಕ್ಷಣ ಕ್ರಮಕ್ಕೆ ಹೇಳಿದ್ದೇನೆ. ಇನ್ನೇನು ಹೇಳಬೇಕು, ಕುಳಿತಿಕೊಳ್ಳಿ ಎಂದು ಮಾಸ್ಕ್ ವಿವಾದಕ್ಕೆ ಸಭಾಪತಿಗಳು ತೆರೆ ಎಳೆದರು.