ಬೆಂಗಳೂರು: ಉಪಸಭಾಪತಿಗಳು ನಿಯಮ 10(ಎ) ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನನ್ನ 23 ವರ್ಷದ ಮೇಲ್ಮನೆಯ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ತಿಳಿಸಿದ್ದಾರೆ.
ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಘೋಷ್ಠಿ ನಡೆಸಿಮಾತನಾಡಿ ಅವರು, ಮೊನ್ನೆ ಸಭಾಪತಿ ಪರಿಷತ್ ಕಲಾಪ ಕರೆದಿದ್ರು. ಅಜೆಂಡಾದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮತ್ತು ನಿಯಮ 69 ಅಡಿ ಚರ್ಚೆಯಲ್ಲಿ ಮಾಡಬೇಕಾದ ವಿಚಾರಗಳು ಇದ್ದವು. ಬೆಲ್ ಆಗುತ್ತಿದ್ದಂತೆ ಉಪಸಭಾಪತಿ ಅವರು ಚೇರ್‌ನಲ್ಲಿ ಕೂತ್ರು. ನಮಗೂ ಇದು ಅಚ್ಚರಿ ತರಿಸಿತು. ಪೀಠದ ಪವಿತ್ರ್ಯ ಕಾಪಾಡಲು ನಮ್ಮ ಸದಸ್ಯರು ಪ್ರಯತ್ನ ಮಾಡಿದ್ದಾರೆ. ಸಭಾಪತಿ ಅವರು ಬೆಲ್ ನಿಂತ ಬಳಿಕ ಡೋರ್ ಕ್ಲೋಸ್ ಮಾಡಿ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಾಲಾ ಶಿಕ್ಷಕರ ವರ್ಗಾವಣೆ : ಚಿಕ್ಕಮಗಳೂರಿನಲ್ಲಿ ಯಥಾಸ್ಥಿತಿಗೆ ಕೆಎಟಿ ನಿರ್ದೇಶನ
ನಿಮ್ಮ ಸ್ಥಾನದಲ್ಲಿ ಕಾನೂನು ಬಾಹಿರವಾಗಿ ಕೂತು ವರ್ತನೆ ಮಾಡಿ ನಿಮ್ಮ ಬರುವಿಕೆ ತಡೆ ಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಸಭಾಪತಿಗೆ ನಾನು ಹೇಳಿದೆ. ಯಾರು ತಡೆದ್ರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಅಂತ ಕೇಳಿದ್ದೇನೆ. ನಾನು ಕಾನೂನು ನಿಯಮಗಳನ್ನ ನೋಡಿ ನಿರ್ಧಾರ ಮಾಡ್ತೀನಿ ಅಂತ ಹೇಳಿದ್ದಾರೆ. ಸರ್ಕಾರ ಮನವಿ ಮೇರೆಗೆ ಸಭಾಪತಿ ಸದನ ಕರೆದಿದ್ದರು. ಅಜೆಂಡಾ ಪ್ರಕಾರ ಮೊನ್ನೆ ಕಲಾಪ ನಡೆದಿಲ್ಲ ಎಂದು ಮಂಗಳವಾರ ಪರಿಷತ್ ಕಲಾಪದಲ್ಲಿ ನಡೆದ ಘಟನೆಯನ್ನು ವಿವರಿಸಿದರು.
ಸಭಾಪತಿ ಬಂದು ನಂತ್ರ ಬೆಲ್ ನಿಲ್ಲಬೇಕು. ಆದ್ರೆ ಉಪ ಸಭಾಪತಿ ಬಂದು ಕುಳಿತುಕೊಂಡರು. ಆದ್ರೆ ಉಪ ಸಭಾಪತಿ ಯಾವಾಗ ಕೂರಬೇಕು ಅಂದ್ರೆ, ಸಭಾಪತಿ ಅಧಿಕಾರ ಕೊಟ್ರೆ ಮಾತ್ರ ಉಪ ಸಭಾಪತಿ ಪೀಠದ ಮೇಲೆ ಕೂರಬೇಕು. ಆದ್ರೆ ಉಪ ಸಭಾಪತಿ ಮಾತ್ರ ಕಾನೂನು ಮೀರಿ ಪೀಠವನ್ನು ಅಲಂಕರಿಸಿದ್ರು. ಇದು ಐತಿಹಾಸಿಕ ಪ್ರಮಾದ. ಶತಮಾನದ ಇತಿಹಾಸ ಹೊಂದಿರುವ ಪೀಠಕ್ಕೆ ಅಗೌರವ ತೋರಿದ್ದಾರೆ ಎಂದು ಎಸ್‌ಆರ್ ಪಾಟೀಲ್ ಆರೋಪಿಸಿದ್ರು.
ಪೀಠದ ಗೌರವ ಉಳಿಸಲು ಕಾಂಗ್ರೆಸ್ ಸದಸ್ಯರು ಉಪ ಸಭಾಪತಿ ಕೆಳಗೆ ಇಳಿಸಿದರು. ಒಬ್ಬ ನ್ಯಾಯಾಧೀಶರ ಸ್ಥಾನದಲ್ಲಿ ಯಾರಾದ್ರು ಹೋಗಿ ಕೂರುತ್ತಾರಾ? ಇವರು ಆ ಕೆಲಸ ಮಾಡಿದ್ದಾರೆ ಬಿಜೆಪಿ - ಜೆ ಡಿಎಸ್ ನಾಯಕರು ಉಪ ಸಭಾಪತಿ ಅವರನ್ನು ಕೂರಿಸಿ ಅವರ ಸ್ಕೇಪ್ ಔಟ್ ಮಾಡಿಸಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ಹೇಳಬೇಕಿತ್ತು. ಜೆಡಿಎಸ್ ನಾಯಕರು ಹೇಳಬೇಕಿತ್ತು ಸಂವಿಧಾನದ ಮೇಲೆ ನಂಬಿಕೆ ಇರುವವರು ಹೀಗೆ ಮಾಡುವುದಿಲ್ಲ. ಸಭಾಪತಿ ಅವರಿಗೆ ನೀಡಿರುವ ನೋಟಿಸ್ ನಲ್ಲಿ ಆರ್ಡರ್ ಪ್ರಕಾರ ಇಲ್ಲ ಎಂದು ಪುನಃ ಹಿಂಬರಹ ನೀಡಿದ್ದಾರೆ. ಇದು ಪರಿಷತ್ ಅಧಿವೇಶನ ಪ್ರಾರಂಭ ಆದಾಗ ಬರುವುದಿಲ್ಲ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ರಾಜ್ಯಪಾಲರ ಬಳಿ ಹೋಗಿದ್ದಾರೆ, ರಾಜ್ಯಪಾಲರು ಇವರಿಗೆ ಛೀಮಾರಿ ಹಾಕಬೇಕಿತ್ತು ಎಂದಿದ್ದಾರೆ.
ಧರ್ಮೇಗೌಡ ಸೇರಿದಂತೆ ನಮ್ಮ ಸದಸ್ಯರನ್ನು ಬಿಜೆಪಿ ಸದಸ್ಯರು ದೂಡಿದ್ರು ಅದಕ್ಕೆ ಅವರು ಹೋಗಿ ಕೂತ್ರು. ಕಾನೂನು ಸಚಿವರು, ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಪೀಠದ ಮೇಲೆ ಹತ್ತಿದ್ರು. ಮುಖ್ಯಮಂತ್ರಿ ಬರುವವರೆಗೆ ಲಾ ಮಿನಿಸ್ಟರ್ ಅವರೇ ಪೀಠದ ಬಳಿ ಹೋಗಿದ್ರು. ಇವರು ಈ ರೀತಿಯಲ್ಲಿ ಸರ್ಕಾರ ನಡೆಸುತ್ತಾರೆ ಎಂದು ಅಂದುಕೊಂಡಿರಲಿಲ್ಲ. ದುರುದ್ದೇಶದಿಂದ ಅವರನ್ನು ಕೂರಿಸಿದ್ದಾರೆ. ಅವರಿಗೆ ಬೇಕಾದ ವಿಧೇಯಕವನ್ನು ಪಾಸ್ ಮಾಡಿಕೊಳ್ಳಲು ಈ ಕಾರ್ಯ ನಡೆಸಿದ್ದಾರೆ ಎಂದು ದೂರಿದ್ದಾರೆ.