ಬೆಂಗಳೂರು : ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗು ಈಶ್ವರಪ್ಪ ಈ ತ್ರಿಮೂರ್ತಿಗಳು ನನ್ನ ಅಡ್ರೆಸ್‌ನಲ್ಲಿ ನಿಂತಿದ್ದರು. ನನ್ನನ್ನು ಕೆಣಕಿರುವ ತ್ರಿಮೂರ್ತಿಗಳು ಈಗ ಬೆತ್ತಲಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
![Kumaraswamy tweet](https://etvbharatimages.akamaized.net/etvbharat/prod-images/kn-bng-04-kumaraswamy-tweet-script-9024736_24122019215539_2412f_1577204739_532.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಈಗಲೂ ಹೇಳುತ್ತೇನೆ 'ಮರೆವು ರೋಗ' ಬಂದವರಿಗೆಲ್ಲ ಶೀಘ್ರವೇ ನಮ್ಮ ಜನ ನನ್ನ ಅಡ್ರೆಸ್ ತೋರಿಸುತ್ತಾರೆ. ಇದು ಅಹಂ ಅಲ್ಲ, ನನ್ನ ಜನ ನನಗೆ ಕೊಟ್ಟ ಬಲ ಎಂದು ಬರೆದುಕೊಂಡಿದ್ದಾರೆ.
ಅನರ್ಹರಿಗಾಗಿ ನಡೆದ ಉಪಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬಿಜೆಪಿ ನಾಯಕರು ನನ್ನ ಅಡ್ರೆಸ್ ಹುಡುಕುತ್ತಿದ್ದಾರೆ. ನನ್ನ ಅಡ್ರೆಸ್ ಕೇಳಿದ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಕ್ತ ಉತ್ತರ ಪಡೆದುಕೊಂಡರು. ಈಗ ದೊಡ್ಡ ದೊಡ್ಡ ನಾಯಕರ ಮೂಲಕ ನನ್ನ ಅಡ್ರೆಸ್ ಕೇಳಿಸುತ್ತಿದ್ದಾರೆ. ಅವರಿಗೆಲ್ಲ ಉತ್ತರಿಸುವಷ್ಟು ದೊಡ್ಡವನಲ್ಲದಿದ್ದರೂ ನಾನೇ ಉತ್ತರಿಸುವೆ ಎಂದು ವ್ಯಂಗ್ಯವಾಡಿದ್ದಾರೆ.
![Kumaraswamy tweet](https://etvbharatimages.akamaized.net/etvbharat/prod-images/kn-bng-04-kumaraswamy-tweet-script-9024736_24122019215539_2412f_1577204739_51.jpg)
ನಾನು ಹಾಸನದ ಹರದನಹಳ್ಳಿಯ ದೇವೇಗೌಡರ ಮಗ ಕುಮಾರಸ್ವಾಮಿ. ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ನನ್ನ ಶಾಶ್ವತ ವಿಳಾಸ. ಅಧಿಕಾರದ ಮದ ಕೆಲ ರಾಜಕಾರಣಿಗಳಲ್ಲಿ ಮರೆವು ತರಿಸಿದೆ. ನನ್ನ ಅಡ್ರೆಸ್ ಕೂಡ ಮರೆತಿದ್ದಾರೆ. 2006 ಕ್ಕೂ ಮುನ್ನ ಮಂತ್ರಿಗಿರಿಗಾಗಿ ನನ್ನ ಅಡ್ರೆಸ್ ಹುಡುಕಿಕೊಂಡು ಬಂದವರು ಯಡಿಯೂರಪ್ಪ ಮಾತ್ರ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
![Kumaraswamy tweet](https://etvbharatimages.akamaized.net/etvbharat/prod-images/kn-bng-04-kumaraswamy-tweet-script-9024736_24122019215539_2412f_1577204739_482.jpg)