ETV Bharat / city

'ಸರ್ಕಾರಿ ನೌಕರರನ್ನಾಗಿ ಮಾಡಿದ್ರೆನೇ, ಉಪವಾಸ ನಿಲ್ಲಿಸ್ತೇವೆ, ಬಸ್ ರೋಡಿಗೆ ಇಳಿಸ್ತೇವೆ' - ಸಾರಿಗೆ ನೌಕರರ ಪ್ರತಿಭಟನೆ

ಸಾರಿಗೆ ನೌಕರರ ಬೇಡಿಕೆ ಈಡೇರಿಸಿದ್ರೆ ಮಾತ್ರ ಪ್ರತಿಭಟನೆಯನ್ನು ಕೈಬಿಟ್ಟು ಬಸ್​ಗಳನ್ನು ರೋಡಿಗೆ ಇಳಿಸ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾರೆ.

bangalore
ಕೋಡಿಹಳ್ಳಿ ಚಂದ್ರಶೇಖರ್
author img

By

Published : Dec 13, 2020, 4:42 PM IST

Updated : Dec 13, 2020, 5:13 PM IST

ಬೆಂಗಳೂರು: ಸಾರಿಗೆ ನೌಕರರನ್ನ ಸರ್ಕಾರಿ‌ ನೌಕರರನ್ನಾಗಿ ಪರಿಗಣಿಸಿದರಷ್ಟೇ ನಮ್ಮ ಉಪವಾಸ ಸತ್ಯಾಗ್ರಹ ನಿಲ್ಲಿಸೋದು, ರಸ್ತೆಗೆ ಬಸ್​ಗಳನ್ನು ಇಳಿಸೋದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.‌

ಸಾರಿಗೆ ನೌಕರರ ಪ್ರತಿಭಟನೆ

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೂ ನಿಗಮದ ನೌಕರಿಗೂ ಇರುವ ವೇತನ ತಾರತಮ್ಯ ನೀಗಿಸಬೇಕು. ನಮ್ಮ ಒಂದು ಬೇಡಿಕೆ ಬಿಟ್ಟು ಬೇರೆ ಎಲ್ಲ ಬೇಡಿಕೆ ಬಗ್ಗೆಯೂ ಸರ್ಕಾರ ಮಾತಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ಸಾರಿಗೆ ಇಲಾಖೆಯ ಎಲ್ಲ ನಿಗಮಗಳ ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್​ಗಳನ್ನು ರಸ್ತೆಗಿಳಿಸಿದ ತಮ್ಮ ಕುಟುಂಸ್ಥರೊಂದಿಗೆ ಹೋರಾಟ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ದಲ್ಲಾಳಿಗಳ ಮುಖ್ಯಸ್ಥ: ರೇಣುಕಾಚಾರ್ಯ

ಇಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು, ಹೋರಾಟಗಾರರೊಂದಿಗೆ ವಿಧಾನಸಭೆಯಲ್ಲಿ ಮಾತುಕತೆ ಸಹ ನಡೆಸಿದ್ದಾರೆ.

Last Updated : Dec 13, 2020, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.