ETV Bharat / city

ರಷ್ಯಾ ಕ್ರೀಡಾಕೂಟದಲ್ಲಿ ಕನ್ನಡಿಗನ ಸಾಧನೆ: ಪವರ್ ಲಿಫ್ಟಿಂಗ್​ನಲ್ಲಿ 5 ಚಿನ್ನ ಪದಕ ಗೆದ್ದು ಬೀಗಿದ 'ರೆಡ್ಡಿ' - ವಲ್ಡ್ ಪವರ್ ಲಿಫ್ಟಿಂಗ್​ನಲ್ಲಿ ಕನ್ನಡಗಿನ ಸಾಧನೆ

ರಷ್ಯಾದಲ್ಲಿ ನಡೆದ ವಲ್ಡ್ ಪವರ್ ಲಿಫ್ಟಿಂಗ್ ಹಾಗೂ ಎಡಬ್ಲ್ಯೂಪಿಸಿ ಕ್ರೀಡಾಕೂಟ ವಿಭಾಗದಲ್ಲಿ (World Powerlifting and AWPC Games) ಭಾರತದ ಕಿರಣ್ ಕುಮಾರ್ ರೆಡ್ಡಿ 5 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಕ್ರೀಡಾಕೂಟದಲ್ಲಿ 165.5ಕೆ.ಜಿ ಬೆಂಚ್, ಸ್ಕ್ವಾಡ್ಸ್ 200ಕೆ.ಜಿ ಡೆಡ್ಲಿ ಟು 250 ಕೆ.ಜಿ.ಒಪನ್ ಕ್ಯಾಟಗಿರಿ 167, ಡೆಡ್ಲಿ ಟು ಬೆಂಚ್ ಒಪನ್ 250 ಕೆಜಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ 46 ದೇಶಗಳ ಪುರುಷರು ಹಾಗೂ 700 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದರು.

kirankumar-reddy-won-five-gold-medal-in-russian-olympics
ಪವರ್ ಲಿಫ್ಟಿಂಗ್​
author img

By

Published : Nov 22, 2021, 7:09 AM IST

ಮಹದೇವಪುರ: ರಷ್ಯಾದಲ್ಲಿ ನಡೆದ ವಲ್ಡ್ ಪವರ್ ಲಿಫ್ಟಿಂಗ್ ಹಾಗೂ ಎಡಬ್ಲ್ಯೂಪಿಸಿ (AWPC) ಕ್ರೀಡಾಕೂಟ ವಿಭಾಗದಲ್ಲಿ (World Powerlifting and AWPC Games) ಭಾರತದ ಕಿರಣ್ ಕುಮಾರ್ ರೆಡ್ಡಿ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ.

ಪವರ್ ಲಿಫ್ಟಿಂಗ್​ನಲ್ಲಿ 5 ಚಿನ್ನ ಪದಕ ಗೆದ್ದು ಬೀಗಿದ 'ರೆಡ್ಡಿ'

ಬೆಂಗಳೂರಿನ ಮಹದೇವಪುರ ಕ್ಷೇತ್ರದ ನಿವಾಸಿ, ನ್ಯೂ ಹಾರಿಜೋನ್ ಕಾಲೇಜ್ ವಿದ್ಯಾರ್ಥಿ, 21ವರ್ಷದ ಕಿರಣ್ ಕುಮಾರ್ ರಷ್ಯಾದ ಬಿಶ್ಕೆಕ್​ನಲ್ಲಿ ನಡೆದ ಡಬ್ಲ್ಯೂಪಿಸಿ, ಎಡಬ್ಲ್ಯೂಪಿಸಿ ವರ್ಲ್ಡ್ ಕಪ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 5 ಚಿನ್ನದ ಪದಕಗಳನ್ನು ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

kirankumar-reddy-won-five-gold-medal-in-russian-olympics
ಕಿರಣ್​ ಕುಮಾರ್​ ರೆಡ್ಡಿ ಅವರನ್ನು ಸನ್ಮಾನಿಸಿದ ಶಾಸಕ ಅರವಿಂದ ಲಿಂಬಾವಳಿ

ರಷ್ಯಾದಲ್ಲಿ ನಡೆದ 165.5ಕೆ.ಜಿ ಬೆಂಚ್, ಸ್ಕ್ವಾಡ್ಸ್ 200ಕೆ.ಜಿ ಡೆಡ್ಲಿ ಟು 250 ಕೆ.ಜಿ.ಒಪನ್ ಕ್ಯಾಟಗಿರಿ 167, ಡೆಡ್ಲಿ ಟು ಬೆಂಚ್ ಒಪನ್ 250 ಕೆಜಿ ಪವರ್ ಲಿಫ್ಟಿಂಗ್ ವಿಭಾಗದಲ್ಲಿ 46 ದೇಶಗಳ ಪುರುಷರು ಹಾಗೂ 700 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದರು. ದೇಶದ ವಿವಿಧ ರಾಜ್ಯದ ಆರು ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದ ಕಿರಣ್ ಕುಮಾರ್ ರೆಡ್ಡಿ ಭಾಗವಹಿಸಿ 5 ಬಂಗಾರದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ, ಆ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ರಷ್ಯದಲ್ಲಿ ನಡೆದ ಪವರ್ ಲಿಫ್ಟಿಂಗ್ ನಲ್ಲಿ 5 ಚಿನ್ನ ಪದಕ ಗೆದ್ದು ದಾಖಲೆ ಮಾಡಿದ ಕನ್ನಡ ಕುವರ ಕಿರಣ್ ಕುಮಾರ್ ರೆಡ್ಡಿ

ಅಲ್ಲದೆ, ಯಾವುದೇ ರೀತಿಯ ಔಷಧ ಪಡೆಯದೇ ನೈಸರ್ಗಿಕವಾಗಿ ದೇಹ ಹುರಿಗೊಳಿಸಿರುವ ಬೆಂಗಳೂರಿನ ಕಿರಣ್ ಕುಮಾರ್.ಪಿ ನ್ಯಾಚುರಲ್ ಬಾಡಿ‌ ಬಿಲ್ಡಿಂಗ್ ನ್ಯಾಷನಲ್ ಚಾಂಪಿಯನ್ ಶಿಪ್​ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

2018ರಲ್ಲಿ ಅಂತರ್ ರಾಜ್ಯ ಮಟ್ಟ ಕ್ರೀಡಾ ಕೂಟದಲ್ಲಿ ಅತ್ಯಂತ ಕಿರಿಯ 18 ವರ್ಷದ ವಯಸ್ಸಿಗೆ ಗೋಲ್ಡ್ ಮೆಡಲ್ ಪಡೆದ ಕೀರ್ತಿ ಇವರ ಹೆಸರಲ್ಲಿದೆ. 2021 ರಲ್ಲಿ (INB) ಏಷ್ಯಾ ಅಂತಾರಾಷ್ಟ್ರೀಯ ದೇಹದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಒಂದು ರನ್ನರ್ ಅಪ್ ಮತ್ತು ಮೂರು ಕಂಚಿನ ಪದಕಗಳಿಸಿದರು.

2020 ರಲ್ಲಿ ಬೆಂಗಳೂರಿನ ನ್ಯೂ ಹಾರಿಜಾನ್ ಕಾಲೇಜ್‌ನಲ್ಲಿ ಬೆಂಗಳೂರು ನಾರ್ತ್ ಯೂನಿವರ್ಸಿಟಿ ಏರ್ಪಡಿಸಿದ ನೈಸರ್ಗಿಕ ದೇಹದಾಡ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಗಳಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನ 18 ವರ್ಷ ಮತ್ತು 21 ವರ್ಷದ ಅತೀ ಹೆಚ್ಚು ತೂಕವನ್ನು ಎತ್ತಿದ ಪವರ್ ಲಿಫ್ಟಿಂಗ್ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಷ್ಯದಲ್ಲಿ ನಡೆದ ಪವರ್ ಲಿಫ್ಟಿಂಗ್​ ನಲ್ಲಿ ಕಿರಣ್ ಕುಮಾರ್ ರೆಡ್ಡಿ ಸಾಧನೆ

ಈ ಸಂದರ್ಭದಲ್ಲಿ ಮಾತನಾಡಿದ ಚಿನ್ನದ ಹುಡುಗ ಕಿರಣ್ ಕುಮಾರ್ ರೆಡ್ಡಿ, ಭಾರತದಿಂದ ಆರು ಕ್ರೀಡಾ ಪಟುಗಳನ್ನ ಆಯ್ಕೆ ಮಾಡಿದ್ದರು. ಬೇರೆ - ಬೇರೆ ದೇಶಗಳಿಂದ ಸುಮಾರು 700 ಮಂದಿ ಬಂದಿದ್ದರು. ಅದರಲ್ಲಿ ಐದು ವಿಭಾಗದಲ್ಲಿ ಎಲ್ಲರೂ ಎರಡು ಮೂರು ಪದಕಗಳನ್ನು ಗೆದ್ದಿದ್ದಾರೆ. ನನಗೆ ಐದು ಚಿನ್ನದ ಪದಕ ಗೆಲ್ಲುವ ಅವಕಾಶ ಸಿಕ್ಕಿದೆ ಎಂದರು.

ಮುಂದಿನ ವರ್ಷ ಸಿಂಗಪುರ್​ನಲ್ಲಿ ಕ್ರೀಡೆಯನ್ನು ಆಯೋಜಿಸಲಾಗಿದೆ. ಅದಕ್ಕೆ ಈಗಾಗಲೇ ವರ್ಕ್ ಔಟ್ ಮಾಡುತ್ತಿದ್ದೇನೆ. ಇದಾದ ನಂತರ ಒಲಿಂಪಿಕ್ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಪದಕ ಗೆಲ್ಲುವುದು ನನ್ನ ಗುರಿಯಾಗಿದೆ. ನನ್ನ ಶ್ರಮಕ್ಕೆ ನಮ್ಮ ಕ್ಷೇತ್ರದ ಶಾಸಕರಾದ ಅರವಿಂದ ಲಿಂಬಾವಳಿಯವರು ನಮ್ಮ ಮೆಂಟರ್ಸ್, ಗುರುಗಳು, ಜಿಮ್ ಮಾಲೀಕರಾದ ರಾಜೇಶ್ ಮತ್ತು ಸಂದೀಪ್ ತಂದೆ ತಾಯಿ ಅವರು ಸಹಾಯ ಮಾಡಿದ್ದಾರೆ ಎಂದು ಅವರಿಗೆ‌ ಕೃತಜ್ಞತೆ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.