ETV Bharat / city

ಇನ್ಮುಂದೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸಿಗಲಿದೆ ಪ್ರಕೃತಿ ಮಡಿಲಿನಲ್ಲಿ ಸುತ್ತಾಡುವ ಅನುಭವ...ಈ ವಿಡಿಯೋ ನೋಡಿ..

2022ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರ ಚಿತ್ರಣವನ್ನೇ ಬದಲಿಸಿ ಪ್ರವಾಸಿ ತಾಣವೊಂದಕ್ಕೆ ಬಂದಿರುವ ಅನುಭವ ತೋರುವಂತೆ ಮಾರ್ಪಡಾಗಲಿದೆ.

ಟ್ವಿಟರ್​ ಕೃಪೆ
author img

By

Published : Sep 3, 2019, 6:13 PM IST

Updated : Sep 3, 2019, 8:51 PM IST

ಬೆಂಗಳೂರು: ವಿಭಿನ್ನ ಪ್ರಯತ್ನಗಳಿಂದ ಬಹುಬೇಗನೆ ವಿಶ್ವಮಟ್ಟದಲ್ಲಿ ಜನಪ್ರಿಯಗಳಿಸಿ ಹಲವು ಪ್ರಶಸ್ತಿಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಚಿತ್ರಣ ಇನ್ನೆರಡು ವರ್ಷಗಳಲ್ಲಿ ಬದಲಾಗಲಿದೆ.

ಹೌದು, ದೇಶದಲ್ಲಿ ಹೆಚ್ಚು ಪ್ರಯಾಣಿಕರು ಆಗಮಿಸುವ 3ನೇ ವಿಮಾನ ನಿಲ್ದಾಣ ಎಂಬ ಖ್ಯಾತಿಗೂ ಪಾತ್ರವಾಗಿದೆ. 2022ರ ವೇಳೆಗೆ ಇಲ್ಲಿನ ಟರ್ಮಿನಲ್-2ರ ಚಿತ್ರಣವನ್ನೇ ಬದಲಿಸಿ ಪ್ರವಾಸಿ ತಾಣವೊಂದಕ್ಕೆ ಬಂದಿರುವ ಅನುಭವ ತೋರುವಂತೆ ಮಾರ್ಪಾಟು ಮಾಡಲಾಗುತ್ತದೆ. ಸಂಪೂರ್ಣವಾಗಿ ಪ್ರಕೃತಿ ಮಡಿಲಿನಲ್ಲಿ ಸುತ್ತಾಡುವ ಅನುಭವ ಸಿಗುತ್ತದೆ. ಜೊತೆಗೆ ಕೃತಕ ಜಲಪಾತವನ್ನೂ ನೋಡಬಹುದು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಈಗಾಗಲೇ 1ನೇ ಟರ್ಮಿನಲ್ ಪರಿಸರ ಕಾಳಜಿಯಿಂದ ಮನಗೆದ್ದಿದ್ದು, 2ನೇ ಟರ್ಮಿನಲ್ ಕೂಡ ಅದೇ ರೀತಿ ಬದಲಾಗಲಿದೆ. ನಿರ್ಮಾಣವಾಗುತ್ತಿರುವ 2ನೇ ಟರ್ಮಿನಲ್​ ಉದ್ಯಾನಗಳಿಂದ ಕೂಡಿರಲಿದೆ. ಸೂರ್ಯನ ಕಿರಣಗಳು ನೇರವಾಗಿ 2ನೇ ಟರ್ಮಿನಲ್​​ಗೆ ತಾಗುವಂತೆ ವಿನ್ಯಾಸ ಮಾಡಲಾಗುತ್ತಿದೆ. ನಿಲ್ದಾಣದೊಳಗೆ ನಮ್ಮ ಪರಂಪರೆ, ಸಂಸ್ಕೃತಿ ಪರಿಚಯಿಸಲಾಗುತ್ತದೆ. ಈ ಎಲ್ಲವನ್ನೂ ಬಿಐಎಎಲ್ ಬಿಡುಗಡೆ ಮಾಡಿರುವ ಗ್ರಾಫಿಕಲ್ ವಿಡಿಯೋದಲ್ಲಿ ನೋಡಬಹುದು.

ಕೆಂಪೇಗೌಡ ವಿಮಾನ ನಿಲ್ದಾಣ

ಈಗಾಗಲೇ ಭರದಿಂದ 2ನೇ ರನ್ ಕಾಮಗಾರಿ ಸಾಗುತ್ತಿದ್ದು, ಪ್ರಾಯೋಗಿಕವಾಗಿ ವಿಮಾನಗಳ ಹಾರಾಟ ನಡೆಸಲಾಗಿದೆ. ಮೊದಲ ಟರ್ಮಿನಲ್​​ನಲ್ಲಿ ಅಳವಡಿಸಿದಂತೆ 2ನೇ ಟರ್ಮಿನಲ್ಲೂ ಸೋಲಾರ್ ಅಳವಡಿಸಲಾಗುತ್ತದೆ. ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ವೇಳೆ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕಗ್ನೇಷನ್,​ ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಪ್ರಯಾಣಿಕರನ್ನು ಸೆಳೆಯಲು ಹೈ-ಫೈ ತಂತ್ರಜ್ಞಾನದ ಮೊರೆ ಹೋಗಿರುವ ಕೆಂಪೇಗೌಡ ವಿಮಾನ ನಿಲ್ದಾಣದ 2ನೇ ಟರ್ಮಿನಲ್​​​ನಲ್ಲಿ ಇದೆಲ್ಲವನ್ನೂ ಕಾಣಲು ಇನ್ನೂ ಎರಡು ವರ್ಷ ಕಾಯಲೇಬೇಕು. ಅಲ್ಲಿಯವರೆಗೂ ಗ್ರಾಫಿಕ್ಸ್ ಮೂಲಕವೇ ನೋಡಬೇಕಿದೆ. ಅಲ್ಲದೆ, ನಿಲ್ದಾಣದ ಅಭಿವೃದ್ಧಿಗೆ ಮತ್ತಷ್ಟು ಯೋಜನೆಗಳನ್ನು ಅಧಿಕಾರಿಗಳು ಸಿದ್ಧಪಡಿಸುತ್ತಿದ್ದಾರೆ.

Intro:KN_BNG_01_03_KIAL_New terminal_Ambarish
Slug: ಹೊಸ ತಂತ್ರಜ್ಞಾನದಲ್ಲಿ ರೆಡಿಯಾಗುತ್ತಿದೆ ಎರಡನೇ ಟರ್ಮಿನಲ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೆರಡು ವರ್ಷಗಳಲ್ಲಿ ಅಗಲಿದೆ ಮತ್ತಷ್ಟು ಹೈ.ಪೈ

ಬೆಂಗಳೂರು: ಒಂದಲ್ಲ ಒಂದು ವಿಭಿನ್ನ ಪ್ರಯತ್ನಗಳ ಮೂಲಕ ಜನರಿಗೆ ಹತ್ತಿರವಾಗಿ ಬಹುಬೇಗನೆ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಪಡದು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಮೆಗೆ ಇದೀಗ ಮತ್ತೊಂದು ಗರಿ ಸೇರ್ಪಡೆಗೊಳ್ಳಲಿದೆ..

ದೇಶದಲ್ಲಿ ಅತ್ಯಂತ ಜನಸಂದಣಿಯಿರುವ ೩ನೇ ವಿಮಾನ ನಿಲ್ದಾಣ ಎಂಬ ಖ್ಯಾತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿದೆ. ೨೦೨೨ರ ವೇಳೆಗೆ ಇಲ್ಲಿನ ಟರ್ಮಿನಲ್-2ಗೆ ಬರುವ ಪ್ರಯಾಣಿಕರು ಯಾವುದೋ ಪಾರ್ಕ್ ಅಥವಾ ಯವುದೋ ಸುಂದರ ತಾಣಕ್ಕೆ ಬಂದಿರೋ ಅನುಭವ ಪಡೆಯುತ್ತಾರೆ. ಎಲ್ಲಿ ನೋಡಿದರೂ ಹಚ್ಚ ಹಸಿರು ಕಂಗೊಳಿಸುತ್ತಿರುತ್ತದೆ. ಇದರ ಜೊತೆಯಲ್ಲಿ ಕೃತಕ ಜಲಪಾತ ಕೂಡ ನೋಡಬಹುದು..

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮೊದಲನೇ ಟರ್ಮಿನಲ್ ಪರಿಸರ ಕಾಳಜಿ ಮತ್ತು ಹಸಿರಿನಿಂದ ಪ್ರಯಾಣಿಕರ ಮನ ಗೆದ್ದರೆ.. 2ನೇ ಟರ್ಮಿನಲ್ ಕೂಡ ಪ್ರಯಾಣಿಕರಿಗೆ ಗಾರ್ಡನ್ ಸಿಟಿ ನೆನಪಾಗುತ್ತದೆ. ಹೈಟೆಕ್ ವ್ಯವಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಟರ್ಮಿನಲ್ ಅನ್ನು ಪರಿಸರಕ್ಕೆ ಪೂರಕವಾಗಿ ನಿರ್ಮಾಣವಾಗುತ್ರಿದೆ... ಸೂರ್ಯನ ಬೆಳಕು ನೇರವಾಗಿ ಟರ್ಮಿನಲ್ ಕಟ್ಗೆಟಡದ ಒಳಗೆ ಬರುವಂತೆ ವಿನ್ಯಾಸ ಮಾಡಲಾಗುತ್ತಿದೆ. ಏರ್ಪೋರ್ಟ್ ಒಳಗಡೆ ಪ್ರಯಾಣಿಕರಿಗೆ ನಮ್ಮ ಪರಂಪರೆ, ಸಾಂಸ್ಕೃತಿಕ ಶ್ರೀಮಂತಿಕೆ ಕುರಿತು ತಿಳಿಸುವಂತೆ ಮಾಡಲಾಗಿದೆ. ಇದನ್ನು ಬಿಐಎಎಲ್ ಬಿಡುಗಡೆ ಮಾಡಿರುವ ಗ್ರಾಫಿಕಲ್ ವಿಡಿಯೋ ದಲ್ಲಿ ನೋಡಬಹುದಾಗಿದೆ..

ಬರದಿಂದ ಎರಡನೇ ರನ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ವಿಮಾನಗಳ ಹಾರಾಟವನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ. ಅಲ್ಲದೇ ನೂತನ ಟರ್ಮಿನಲ್ ನ ಕಟ್ಟಡದ ಮೇಲ್ಛಾವಣಿಯಲ್ಲಿ ಮೊದಲ ಟರ್ಮಿನಲ್ ನ ಕಟ್ಟಡದಂತೆ ಸೋಲಾರ್ ಪ್ಯಾನಲ್ ಹಾಕಲಾಗುತ್ತಿದೆ. ವಿಮಾನ ಪ್ರಯಾಣಿಕರು ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ವ್ಯಕ್ತಿಯನ್ನು ಗುರುತಿಸಲು ಫೇಸ್ ರೆಕೆಗ್ನಿಷನ್, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯ ಕಲ್ಪಿಸಲಾಗುತ್ತಿದೆ.. ಹಾಗೇ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಏನಲ್ಲಾ ತಂತ್ರಜ್ಞಾನವನ್ನು ಅಳವಡಿಸಬೇಕೋ ಅದೆಲ್ಲವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ನಲ್ಲಿ ಕಾಣಬಹುದಾಗಿದೆ.. ಆದರೆ ಇದೆಲ್ಲವನ್ನೂ ಪ್ರಯಾಣಿಕರು ಮತ್ತು ಸಾರ್ವಜನಿಕರು ನೋಡಬೇಕಾದ್ರೆ ಇನ್ನೆರಡು ವರ್ಷಗಳು ಕಾಯಲೇಬೇಕು.. ಅಲ್ಲಿಯವರೆಗೂ ಕೆಐಎಎಲ್ ನ ಈ ಟರ್ಮಿನಲ್ ಗ್ರಾಫಿಕ್ಸ್ ಮೂಲಕವೇ ಕುತೂಹಲವನ್ನು ತಣಿಸಿಕೊಳ್ಳಬೇಕಿದೆ..

ಅಂಬರೀಶ್. ಜೊನ್ನಹಳ್ಳಿ ಈ ಟಿವಿ ಭಾರತ ಬೆಂಗಳೂರು

Body:NoConclusion:No
Last Updated : Sep 3, 2019, 8:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.